ದಾವಣಗೆರೆ/ಹುಬ್ಬಳ್ಳಿ, (ಫೆಬ್ರವರಿ 12): ಚೆನ್ನಾಗಿ ಓದು ಎಂದಿದ್ದಕ್ಕೆ 13 ವರ್ಷದ ಬಾಲಕ ಮನೆಬಿಟ್ಟು ಎಸ್ಕೇಪ್ ಆಗಿದ್ದಾನೆ. ದಾವಣಗೆರೆ (Davanagere) ನಗರದ ಎಸ್ಎಸ್ ಲೇಔಟ್ ನಿವಾಸಿ ಹನುಮಂತ, ಗಂಗಮ್ಮ ಅವರ 13 ವರ್ಷದ ಸಾತ್ವಿಕ್ ಮನೆ ಬಿಟ್ಟ ಹೋಗಿದ್ದಾನೆ. SSNPS ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಸಾತ್ವಿಕ್ಗೆ ತಂದೆ ಚೆನ್ನಾಗಿ ಓದಿಕೋ ಎಂದಿದ್ದಾರಂತೆ. ಇಷ್ಟಕ್ಕೆ ಸಾತ್ವಿಕ್ ಮನೆಬಿಟ್ಟು ಹೋಗಿದ್ದಾನೆ. ಫೆಬ್ರವರಿ 6ಕ್ಕೆ ಮನೆ ಬಿಟ್ಟು ಓಡಿ ಹೋಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆ ರೇಲ್ವೆ ನಿಲ್ದಾಣದಲ್ಲಿ ಟಿಕೆಟ್ ಪಡೆದು ಹುಬ್ಬಳ್ಳಿ (Hubballi) ಟ್ರೈನ್ ಹತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತಂದೆ ಹುಬ್ಬಳ್ಳಿಗೆ ತೆರಳಿ ಗಲ್ಲಿ ಗಲ್ಲಿಗಳಲ್ಲಿ ಹುಡುಕಾಡುತ್ತಿದ್ದಾರೆ.
ಸಾತ್ವಿಕ್ ಮನೆ ಬಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊದಲಿಗೆ ಸಾತ್ವಿಕ್ ಮನೆಯಿಂದ ನೇರವಾಗಿ ದಾವಣಗೆರೆ ರೈಲ್ವೇ ನಿಲ್ದಾಣ ಆಗಮಿಸಿ ಟಿಕೆಟ್ ಪಡೆದು ಹುಬ್ಬಳ್ಳಿ ರೈಲು ಹತ್ತಿದ್ದಾನೆ. ದಾವಣಗೆರೆ ರೇಲ್ವೆ ನಿಲ್ದಾಣ, ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸೇರಿದಂತೆ ಕೆಲ ಬೇರೆ ಸ್ಥಳದಲ್ಲಿನ ಚಲನವಲನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ತಂದೆ ಹನುಮಂತ, ಹುಬ್ಬಳ್ಳಿಯಲ್ಲಿ ಮಗನಿಗಾಗಿ ಗಲ್ಲಿ ಗಲ್ಲಿಗಳಲ್ಲಿ ಹುಡುಕಾಡುತ್ತಿದ್ದಾರೆ.
ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮಕ್ಕಳು ಮನೆ ಬಿಟ್ಟು ಹೋಗುವುದು ಅಥವಾ ಜೀವಕ್ಕೆ ಅಪಾಯ ಮಾಡಿಕೊಳ್ಳುವಂತ ದುಸ್ಸಾಹಸಕ್ಕೆ ಕೈ ಹಾಕಬಾರದು. ಯಾಕಂದ್ರೆ ನಿಮ್ಮ ಅಪ್ಪ-ಅಮ್ಮ ನಿಮ್ಮನ್ನ ಹೆತ್ತು ದೊಡ್ಡವಾರಿ ಮಾಡಿರುತ್ತಾರೆ. ನನ್ನ ಮಗ ಹೀಗೆ ಆಗ್ಬೇಕು ಅಂತೆಲ್ಲಾ ದೊಡ್ಡ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಹೀಗಾಗಿ ಅಪ್ಪ-ಅಮ್ಮನ ಕನಸು ನನಸು ಮಾಡಲು ಪ್ರಯತ್ನಿಸಿ, ಅದು ಸಾಧ್ಯವಾಗದಿದ್ದಕ್ಕೆ ಸುಮ್ಮನಾಗಿ. ಅದು ಬಿಟ್ಟು ಯಾವುದೇ ಅನಾಹುತ ಮಾಡಿಕೊಳ್ಳಬೇಡಿ.