ಬಸ್ಸಿನ ಬಾಗಿಲು ಬಳಿ ಇಟ್ಟ 10 ಸಾವಿರ ಮೌಲ್ಯದ ಆರೋಗ್ಯ ಕಿಟ್ ನೆಲಕ್ಕೆ; ಯುವತಿಯಿಂದ ಚಾಲಕ, ನಿರ್ವಹಕನಿಗೆ ತರಾಟೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 12, 2023 | 2:49 PM

ಚಾಲಕ ಹಾಗೂ ನಿರ್ವಾಹಕರ(Driver and Conductor) ಬೇಜವಾಬ್ದಾರಿ‌ಯಿಂದ ಹತ್ತು ಸಾವಿರ ರೂಪಾಯಿ ಮೌಲ್ಯದ ಆರೋಗ್ಯ ಕಿಟ್​ನ್ನು ಯುವತಿ ಕಳೆದುಕೊಂಡ ಚಿತ್ರದುರ್ಗದಿಂದ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ಸಿನಲ್ಲಿ ನಡೆದಿದೆ. ಸಕಾಲಕ್ಕೆ ಬಸ್​ ನಿಲ್ಲಿಸಿದ್ದರೇ, ಯಾವುದೇ ತೊಂದರೆ ‌ಆಗುತ್ತಿರಲಿಲ್ಲ ಎಂದು ಕಿಟ್​​ ಕಳೆದುಕೊಂಡ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ದಾವಣಗೆರೆ, ಡಿ.12: ಕೆಎಸ್​ಆರ್​ಟಿಸಿ ಬಸ್(KSRTC Bus)​ ಚಾಲಕ ಹಾಗೂ ನಿರ್ವಾಹಕರ(Driver and Conductor) ಬೇಜವಾಬ್ದಾರಿ‌ಯಿಂದ ಹತ್ತು ಸಾವಿರ ರೂಪಾಯಿ ಮೌಲ್ಯದ ಆರೋಗ್ಯ ಕಿಟ್​ನ್ನು ಯುವತಿ ಕಳೆದುಕೊಂಡ ಚಿತ್ರದುರ್ಗದಿಂದ ದಾವಣಗೆರೆ ಜಿಲ್ಲೆಯ ಜಗಳೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ಸಿನಲ್ಲಿ ನಡೆದಿದೆ. ಬಸ್ಸಿನ ಬಾಗಿಲು ಬಳಿ ಇಟ್ಟ ಆರೋಗ್ಯ ಕಿಟ್ ನೆಲಕ್ಕೆ ಬಿದ್ದಿದೆ. ಆದರೆ, ಚಾಲಕ ಸಕಾಲಕ್ಕೆ ಬಸ್​ ನಿಲ್ಲಿಸದೆ, ಬರೊಬ್ಬರಿ ಒಂದು ಕಿಲೋ ಮೀಟರ್ ಬಳಿಕ ನಿಲ್ಲಿಸಿದ್ದಾನೆ. ಇದರಿಂದ ಕಿಟ್​​ ಕಾಣೆಯಾಗಿದೆ ಎಂದು ಚಾಲಕ ಮತ್ತು ನಿರ್ವಹಕರ‌ನ್ನು ಕಿಟ್ ಕಳೆದುಕೊಂಡು ಯುವತಿ ತರಾಟೆಗೆ ತೆಗೆದುಕೊಂಡಿದ್ದಾಳೆ.

ಬಸ್​ ನಿಲ್ಲಿಸಿದ ಚಾಲಕ, ನಿರ್ವಾಹಕನ ವಿರುದ್ದ ಯುವತಿ ಆಕ್ರೋಶ

ಸಕಾಲಕ್ಕೆ ಬಸ್​ ನಿಲ್ಲಿಸಿದ್ದರೇ, ಯಾವುದೇ ತೊಂದರೆ ‌ಆಗುತ್ತಿರಲಿಲ್ಲ. ಆದ್ರೆ, ದೂರ ಹೋಗಿ ನಿಲ್ಲಿಸಿದ್ದರಿಂದ ಹತ್ತು ಸಾವಿರ ರೂಪಾಯಿ ಆರೋಗ್ಯ ಕಿಟ್ ಅನ್ಯರ ಪಾಲಾಗಿದೆ ಎಂದು ಯುವತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಸಮರ್ಪಕ ಉತ್ತರ ನೀಡಬೇಕು ಎಂದು ಯುವತಿ ಕಿಡಿಕಾರಿದ್ದಾಳೆ. ಆದರೆ,   ಚಾಲಕ ಹಾಗೂ ನಿರ್ವಾಹಕ ಇದಕ್ಕೆ ಉತ್ತರಿಸದೆ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಯುವತಿ ಪಿತ್ತ ನೆತ್ತಿಗೇರುವ ಹಾಗೆ ಮಾಡಿದೆ.

ಇದನ್ನೂ ಓದಿ:KSRTC ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ: ಎದೆ ಝಲ್ ಎನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತಾಂತ್ರಿಕ ದೋಷದಿಂದ ಟಿಕೆಟ್ ನೀಡುವ ಮಷೀನ್ ಬಂದ್; ಬಸ್​ಗಾಗಿ ಕಾದು ಕಾದು ಸುಸ್ತಾದ ಪ್ರಯಾಣಿಕರು

ಯಾದಗಿರಿ: ಟಿಕೆಟ್​ ನೀಡುವ ಯಂತ್ರಗಳಲ್ಲಿ ಸಾಫ್ಟ್‌ವೇರ್ ಅಳವಡಿಕೆ ವೇಳೆ ತಾಂತ್ರಿಕ ಸಮಸ್ಯೆ ತಲೆದೊರಿದ್ದು, ಟಿಕೆಟ್ ನೀಡುವ ಮಷೀನ್ ಹಾಳಾಗಿ ಹೋಗಿದೆ. ಇದರಿಂದ ಬಸ್ ಸಂಚಾರ ವಿಳಂಬವಾಗಿ ಪ್ರಯಾಣಿಕರು ಪರದಾಟ ನಡೆಸಿದ ಯಾದಗಿರಿ ಡಿಪೋಗೆ ಸೇರಿದ ಬಸ್​ನಲ್ಲಿ ನಡೆದಿದೆ. ಯಾದಗಿರಿ ಕೇಂದ್ರ ಬಸ್ ನಿಲ್ದಾಣದಲ್ಲಿ ರಾಯಚೂರು ಹಾಗೂ ವಿವಿಧ ಭಾಗಕ್ಕೆ ತೆರಳುವ ಪ್ರಯಾಣಿಕರು ಬೆಳಿಗ್ಗೆಯಿಂದ ಬಸ್​ಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ಇತ್ತ
ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಾರಿಗೆ ಸಿಬ್ಬಂದಿಗಳು ಹರಸಾಹಸ ಪಡುವಂತಾಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Tue, 12 December 23