ದಾವಣಗೆರೆ: ದುರ್ಗಾಂಬಿಕಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ

| Updated By: ganapathi bhat

Updated on: Mar 11, 2022 | 4:03 PM

ಯಾವುದೇ ಕಾರಣಕ್ಕೂ ದೇವಸ್ಥಾನದ ಆವರಣದಲ್ಲಿ ಕೋಣ ಸೇರಿದಂತೆ ಯಾವುದೇ ಪ್ರಾಣಿಗಳ ಬಲಿ ನಿಷೇಧ ಎಂದು ತಿಳಿಸಲಾಗಿದೆ. ಇದಕ್ಕೆ ತಪ್ಪಿ ಪ್ರಾಣಿ ಬಲಿ ನಡೆದರೇ ದೇವಸ್ಥಾನ ಧರ್ಮದರ್ಶಿ ಸಮಿತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ.

ದಾವಣಗೆರೆ: ದುರ್ಗಾಂಬಿಕಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ
ಮಹಾಂತೇಶ ಬೀಳಗಿ
Follow us on

ದಾವಣಗೆರೆ: ಇಲ್ಲಿನ ದುರ್ಗಾಂಬಿಕಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ನೀಡಿದ್ದಾರೆ. ಪ್ರಾಣಿ ಬಲಿ ನಡೆದರೆ ದೇವಸ್ಥಾನ ಧರ್ಮದರ್ಶಿ ಸಮಿತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ 13ನೇ ತಾರೀಖಿನಿಂದ ಐತಿಹಾಸಿ ದಾವಣಗೆರೆ ದುರ್ಗಾಂಭಿಕಾದೇವಿ ಜಾತ್ರೆ ಹಿನ್ನಲೆ ಪ್ರಾಣಿಬಲಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಯಾವುದೇ ಕಾರಣಕ್ಕೂ ದೇವಸ್ಥಾನದ ಆವರಣದಲ್ಲಿ ಕೋಣ ಸೇರಿದಂತೆ ಯಾವುದೇ ಪ್ರಾಣಿಗಳ ಬಲಿ ನಿಷೇಧ ಎಂದು ತಿಳಿಸಲಾಗಿದೆ. ಇದಕ್ಕೆ ತಪ್ಪಿ ಪ್ರಾಣಿ ಬಲಿ ನಡೆದರೇ ದೇವಸ್ಥಾನ ಧರ್ಮದರ್ಶಿ ಸಮಿತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಲಾಗಿದೆ.

ಇದೇ ರೀತಿ ಬೇವಿನ ಉಡುಗೆ ಸೇರಿದಂತೆ ವಿವಿಧ ಆರಚರಣೆಗಳು ನಡೆಯುತ್ತಿದ್ದು. ಇದರಿಂದ ಯಾವುದೇ ವ್ಯಕ್ತಿಯ ವ್ಯಕ್ತಿತ್ವಕ್ಕೆ ದಕ್ಕೆ ಬರುವ ರೀತಿಯಲ್ಲಿ ಆಚರಿಸುವಂತಿಲ್ಲ‌. ಉಳಿದಂತೆ ಜಾತ್ರೆಯ ಹಿನ್ನೆಲೆ ಅಗತ್ಯ ವ್ಯವಸ್ಥೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆ ಕ್ರ‌ಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ರಾತ್ರೋರಾತ್ರಿ ಗುಡಿಸಲು ತೆರವುಗೊಳಿಸಿದ ಜಿಲ್ಲಾಡಳಿತ; ಸ್ಥಳೀಯರ ತೀವ್ರ ಆಕ್ರೋಶ

ಇದನ್ನೂ ಓದಿ: ದಾವಣಗೆರೆಯಲ್ಲಿ ಕಿವುಡ, ಮೂಗರ ಪ್ರತಿಭಟನೆ; ಸ್ವಯಂ ಉದ್ಯೋಗ, ಸರ್ಕಾರಿ ಸೇವೆಗೆ ಸೇರಲು ನೆರವು ಕೋರಿ ಧರಣಿ