ದಾವಣಗೆರೆ: ಇಲ್ಲಿನ ಜಗಳೂರು ಕೆರೆಯಲ್ಲಿ ಈಜಲು ಹೋಗಿದ್ದ 3 ಬಾಲಕರು ನೀರುಪಾಲಾದ ಘಟನೆ ನಿನ್ನೆ (ನವೆಂಬರ್ 13) ನಡೆದಿತ್ತು. ನೀರುಪಾಲಾದ ಮಕ್ಕಳು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಿನ್ನೆ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕರು ನೀರುಪಾಲಾಗಿದ್ದರು. ಜಗಳೂರಿನ ಹೊರವಲಯದ ಕೆರೆಯಲ್ಲಿ ಘಟನೆ ನಡೆದಿತ್ತು. ಸೈಯದ್ (10), ಅಶ್ರಫ್ (7) ಮತ್ತು ಆಸೀಫ್ (5) ಮೃತಪಟ್ಟಿದ್ದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೃತ ಮಕ್ಕಳ ನಿವಾಸಕ್ಕೆ ಶಾಸಕ ಎಸ್.ವಿ. ರಾಮಚಂದ್ರ ಇಂದು ಭೇಟಿ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದ ನಿವಾಸಕ್ಕೆ ಭೇಟಿ ನೀಡಿ ಮೃತ ಬಾಲಕರ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ಪರಿಹಾರ ನೀಡಿದ್ದಾರೆ. ವೈಯಕ್ತಿಕವಾಗಿ ತಲಾ 50 ಸಾವಿರ ರೂ. ನೀಡಿದ್ದಾರೆ.
ಮಂಡ್ಯ: ಗೋಡೆ ಕುಸಿದು ಬಾಲಕ ಸಾವು
ಗೋಡೆ ಕುಸಿದು ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕ ಸಾವನ್ನಪ್ಪಿದ ದುರ್ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ನಡೆದಿದೆ. ಇಲ್ಲಿ ಮಳೆಗೆ ಗೋಡೆ ಕುಸಿದು ದುರ್ಘಟನೆ ಸಂಭವಿಸಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಗಗನ್ (10) ಎಂಬ ಬಾಲಕ ಸಾವನ್ನಪ್ಪಿದ್ದಾನೆ. ಜವರೇಗೌಡ ಎಂಬುವವರಿಗೆ ಸೇರಿದ ಮನೆ ಗೋಡೆ ಕುಸಿತಗೊಂಡಿದೆ. ಮನೆ ಪಕ್ಕದ ಕೊಟ್ಟಿಗೆಯಲ್ಲಿದ್ದ 2 ಹಸು, ಕುರಿಗಳೂ ಸಾವನ್ನಪ್ಪಿವೆ.
ಇದನ್ನೂ ಓದಿ: ಗದಗ: ಕರುಳ ಬಳ್ಳಿ ಉಳಿಸಿಕೊಳ್ಳಲು ತಾಯಿಯ ಹೋರಾಟ ವ್ಯರ್ಥ; ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕ ಸಾವು
ಇದನ್ನೂ ಓದಿ: ದಾವಣಗೆರೆ: ನಿರ್ಮಾಣ ಹಂತದ ಕಟ್ಟಡದ ಪಿಲ್ಲರ್ ಕುಸಿದು ಮೂವರ ಸಾವು; 6 ಜನರಿಗೆ ಗಾಯ
Published On - 3:51 pm, Sun, 14 November 21