ದಾವಣಗೆರೆ, ಫೆಬ್ರವರಿ 3: ವಿಪಕ್ಷ ನಾಯಕ ಆರ್.ಅಶೋಕ್ ಹಿಂದೂ ಆದರೆ ನಾನು ಶ್ರೇಷ್ಠ ಹಿಂದೂ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಟಾಂಗ್ ನೀಡಿದ್ದಾರೆ. ಜಿಲ್ಲೆಯ ಹೊನ್ನಾಳಿಯಲ್ಲಿ ಕನಕದಾಸರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀರಾಮ ಕೇವಲ ಬಿಜೆಪಿಯವರ ಸ್ವತ್ತಲ್ಲ, ಅವರು ಎಲ್ಲರ ಸ್ವತ್ತು ಎಂದು ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ನಮ್ಮ ಜಾತಿಯವರ ರಕ್ತ ಕೊಡಿ ಅಂತಾ ಕೇಳ್ತೀರಾ. ಏನಪ್ಪಾ ರೇಣುಕಾಚಾರ್ಯ ನೀನು ಹೀಗೇನಾದರೂ ಕೇಳ್ತಿಯಾ ಎಂದು ವ್ಯಂಗ್ಯ ಮಾಡಿದ್ದಾರೆ.
ಜೀವ ಉಳಿಸಲು ಮುಸ್ಲಿಮರ ರಕ್ತನಾದರೂ ಕೊಡು, ದಲಿತರ ರಕ್ತನಾದರೂ ಕೊಡು ಎಂದು ಗೋಗರೆಯುತ್ತೇವೆ. ರಕ್ತ ಹಾಕಿಸಿಕೊಂಡು ಬಂದು ಹಿಂದೂ, ಮುಸ್ಲಿಂ ಎಂದು ಹೊಡೆದಾಡುತ್ತೇವೆ. ಭಕ್ತ ಕನಕದಾಸರು ಮೊದಲು ತಿಮ್ಮಪ್ಪನಾಯಕ, ಪಾಳೆಗಾರರಾಗಿದ್ದರು. ಬಳಿಕ ಆಸ್ತಿಯನ್ನು ತ್ಯಜಿಸಿ ಭಕ್ತ ಕನಕದಾಸರಾದರು ಎಂದಿದ್ದಾರೆ.
ಇದನ್ನೂ ಓದಿ: ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಜನಿಸಿದರು. ಆದರೆ ಕನಕದಾಸರು ಕುರುಬರಾಗಿ ಉಳಿದಿಲ್ಲ, ವಿಶ್ವಮಾನವರಾಗಿದ್ದಾರೆ. ಕುವೆಂಪು ಹೇಳುತ್ತಾರೆ ಎಲ್ಲರೂ ಹುಟ್ಟುವಾಗ ವಿಶ್ವಮಾನವರಾಗಿ ಜನಿಸುತ್ತಾರೆ. ಬೆಳೆಯುತ್ತಾ ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನಾವು ಅಲ್ಪಮಾನವರಾಗುತ್ತೇವೆ. ಮನುಷ್ಯರಾಗಿ ಅಂತಾ ಗಾಂಧೀಜಿ, ಡಾ.ಅಂಬೇಡ್ಕರ್ ಎಲ್ಲರೂ ಹೇಳಿದ್ದಾರೆ. ಪರಸ್ಪರ ಪ್ರೀತಿಸಿ, ದ್ವೇಷಿಸಬೇಡಿ ಎಂದು ಮಹಾಪುರುಷರು ಹೇಳಿದ್ದಾರೆ ಎಂದರು.
ರಾಜ್ಯದಲ್ಲಿ ಗ್ಯಾರಂಟಿ ಕೊಟ್ಟಿದ್ದೇವೆ. ಬಿಜೆಪಿಯವರು ಬಿಟ್ಟಿ ಯೋಜನೆಗಳು ಎಂದು ರಾಜಕೀಯವಾಗಿ ಮಾತಾಡುತ್ತಾರೆ. ಮನೆ ಜಯಮಾನಿಗೆ ಎರಡು ಸಾವಿರ ರೂಪಾಯಿ ಮಾಡಿದ್ದೇವೆ. ಪ್ರತಿ ಕುಟುಂಬಕ್ಕೆ ನಾಲ್ಕರಿಂದ ಐದು ಸಾವಿರ ರೂಪಾಯಿ ಪ್ರತಿ ಕುಟುಂಬಕ್ಕೆ ಸಿಗುತ್ತದೆ.
ಇದನ್ನೂ ಓದಿ: ಡಿಕೆ ಸುರೇಶ್ ನಿಜಾಮನಾಗುವುದು ಬೇಡ, ನಿಜಾಮನನ್ನು ಬಗ್ಗುಬಡಿದ ಸರ್ದಾರ್ ಪಟೇಲ್ ರಂಥ ನೇತೃತ್ವ ಬಿಜೆಪಿಯಲ್ಲಿದೆ: ಸಿಟಿ ರವಿ
ಎಲ್ಲ ಜಾತಿ, ಧರ್ಮದವರಿಗೆ ಗ್ಯಾರಂಟಿ ಸಹಾಯ ಆಗಿವೆ. ನಾನು ಸಿಎಂ ಅದ ಮೇಲೆ ಮಾಶಾಸನ ಹೆಚ್ಚಿಸಿದ್ದೇನೆ. ಕಾರ್ಮಿಕ ಇಲಾಖೆಯಿಂದ ವಿಮೆ ಯೋಜನೆ ಜಾರಿಗೆ ತಂದಿದ್ದು ಸಹ ನಮ್ಮ ಸರ್ಕಾರ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:14 pm, Sat, 3 February 24