Lokayukta Raid: ಲಂಚ ಪಡೆಯುತ್ತಿದ್ದ ಸರ್ಕಾರಿ ವಿಶೇಷ ಅಭಿಯೋಜಕಿ ಲೋಕಾಯುಕ್ತರ ವಶ

ಸರ್ಕಾರಿ ವಿಶೇಷ ಅಭಿಯೋಜಕಿ ಆರೋಪಿಯ ಬಳಿ 1.87 ಲಕ್ಷ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಪೋಕ್ಸೋ (POCSO) ಪ್ರಕರಣದ ಆರೋಪಿ ಬಳಿ 3 ಲಕ್ಷಕ್ಕೆ ಎಸ್​.ಎಸ್​​.ಪಿ ಬೇಡಿಕೆ ಇಟ್ಟ ಪ್ರಕರಣವೂ ಬೆಳಕಿಗೆ ಬಂದಿದೆ.

Lokayukta Raid: ಲಂಚ ಪಡೆಯುತ್ತಿದ್ದ ಸರ್ಕಾರಿ ವಿಶೇಷ ಅಭಿಯೋಜಕಿ ಲೋಕಾಯುಕ್ತರ ವಶ
Image Credit source: Thestatesman.com
Edited By:

Updated on: Feb 05, 2023 | 12:56 PM

ದಾವಣಗೆರೆ: ದಾವಣಗೆರೆಯ ವಿಶೇಷ ಪೋಕ್ಸೋ ಕೋರ್ಟನ ವಿಶೇಷ ಅಭಿಯೋಜಕಿಯಾಗಿರುವ ರೇಣಾ ಎಸ್ ಕೊಟ್ರಗೌಡರ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ. ರೇಣಾ.ಎಸ್ ಕೊಟ್ರಗೌಡರ ದಾವಣಗೆರೆಯ ಪಿಜೆ ಬಡಾವಣೆ ನಿವಾಸಿಯಾಗಿದ್ದು ಇದೀಗ ಲೋಕಾಯುಕ್ತರು ಇವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸರ್ಕಾರಿ ವಿಶೇಷ ಅಭಿಯೋಜಕಿ ಆರೋಪಿಯ ಬಳಿ 1.87 ಲಕ್ಷ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ಪೋಕ್ಸೋ (POCSO) ಪ್ರಕರಣದ ಆರೋಪಿ ಬಳಿ 3 ಲಕ್ಷಕ್ಕೆ ಎಸ್​.ಎಸ್​​.ಪಿ ಬೇಡಿಕೆ ಇಟ್ಟ ಪ್ರಕರಣವೂ ಬೆಳಕಿಗೆ ಬಂದಿದೆ.ದಾವಣಗೆರೆ ಲೋಕಾಯುಕ್ತ ಎಸ್​ಪಿ ಎಂ.ಎಸ್​ ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆದಿದ್ದು ಸರ್ಕಾರಿ ವಿಶೇಷ ಅಭಿಯೋಜಕಿ ರೇಣಾ.ಎಸ್ ಕೊಟ್ರಗೌಡರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿ ಲೋಕಾಯುಕ್ತರ ಬಲೆಗೆ ಬಿದ್ದದ್ದು ಹೇಗೆ?

ಆರೋಪಿ ರೇಣಾ ಎಸ್ ಕೊಟ್ರಗೌಡರ ಪಿಜೆ ಬಡಾವಣೆಯ ತಮ್ಮ ನಿವಾಸದಲ್ಲೇ ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಪೋಕ್ಸೋ ಪ್ರಕರಣದ ಆರೋಪಿ ಮದನ್ ಎಂಬಾತನಿಂದ 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ 1 ಲಕ್ಷ 13 ಸಾವಿರ ಪಡೆದಿದ್ದ ಇದೀಗ ಉಳಿದ ಮೊತ್ತ ತೆಗೆಕೊಳ್ಳುತ್ತಿರುವ ಸಮಯದಲ್ಲಿ ಲೋಕಾಯುಕ್ತರು ಆರೋಪಿಯನ್ನು ವಶಕ್ಕೆ ಪಡೆದ್ದಿದ್ದಾರೆ. ಮದನ್ ಒಬ್ಬ ಪೋಕ್ಸೋ ಪ್ರಕರಣದ ಆರೋಪಿ, ಸಂತ್ರಸ್ಥೆ ಪರ ವಾದ ಮಾಡಬೇಕಾದ ವಿಶೇಷ ಅಭಿಯೋಜಕಿ ಹಣದಾಸೆಗೆ ಪೋಕ್ಸೋ ಆರೋಪಿಯ ರಕ್ಷಣೆಗೆ ಮುಂದಾಗಿದ್ದಾರೆ. ಕೊನೆಗೂ ಆರೋಪಿ ರೇಣಾ ಎಸ್ ಕೊಟ್ರಗೌಡರನ್ನು ಲೋಕಾಯುಕ್ತರ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ; ಕಮಿಷನರ್​ಗೆ ಲೋಕಾಯುಕ್ತ ಬುಲಾವ್

Published On - 12:48 pm, Sun, 5 February 23