ದಾವಣಗೆರೆ: ‘ಭಾಗ್ಯದ ನಿಧಿ ತುಂಬಿ ತುಳಿಕತಲೇ ಪರಾಕ್’ ಪ್ರಸಕ್ತ ವರ್ಷ ಶುಭ ಸಂದೇಶ ನೀಡಿದ ಮೈಲಾರ ಲಿಂಗೇಶ್ವರ ಕಾರ್ಣಿಕ
Mylara Lingeshwara Karnika Bhavishya: ಭಾಗ್ಯದ ನಿಧಿ ತುಂಬಿ ತುಳಿಕತಲೇ ಪರಾಕ್’ ಎಂದು ದೊಡ್ಡ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ದೈವವಾಣಿ ನುಡಿದಿದ್ದಾರೆ.
ದಾವಣಗೆರೆ: ‘ಭಾಗ್ಯದ ನಿಧಿ ತುಂಬಿ ತುಳಿಕತಲೇ ಪರಾಕ್’ ಎಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿ ಇರುವ ಐತಿಹಾಸಿಕ ದೊಡ್ಡ ಮೈಲಾರ ಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ದೈವವಾಣಿ ನುಡಿದಿದ್ದಾರೆ. ಮೈಲಾರ ಪುಣ್ಯಕ್ಷೇತ್ರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪ್ರಸಕ್ತ ವರ್ಷದ ಕಾರ್ಣಿಕ ಶುಭ ಸಂದೇಶ ನೀಡಿದೆ. ಈ ವರ್ಷ ಉತ್ತಮ ಮಳೆ, ಬೆಳೆಯಾಗಲಿದೆ ಎಂದು ಭಕ್ತರು ಕಾರ್ಣಿಕ ನುಡಿಯನ್ನು ಅರ್ಥೈಸಿಕೊಂಡಿದ್ದಾರೆ.
ಹರಪನಹಳ್ಳಿ ದೊಡ್ಡ ಮೈಲಾರ ಲಿಂಗೇಶ್ವರ ಪುಣ್ಯ ಕ್ಷೇತ್ರ ಅಂದ್ರೆ ಪವಿತ್ರ ಕ್ಷೇತ್ರ. ಇಲ್ಲಿ ವರ್ಷಕ್ಕೊಮ್ಮೆ ಸುತ್ತಮುತ್ತ ಊರಿನ ಸಾವಿರಾರು ಜನ ಸೇರುತ್ತಾರೆ. ಕಾರ್ಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ನುಡಿದ ದೈವವಾಣಿ ಇಲ್ಲಿನ ಜನಕ್ಕೆ ವೇದ ವಾಕ್ಯ. ಇಡೀ ವರ್ಷ ಆ ವಾಣಿ ಸತ್ಯವಾಗುತ್ತದೆಯಂತೆ. ಹೀಗಾಗಿ ದೇವವಾಣಿಗಾಗಿ ಪುಣ್ಯಕ್ಷೇತ್ರ ಅಂಗಳದಲ್ಲಿ ವಿಶಾಲ ಪ್ರದೇಶದಲ್ಲಿ ಗೊರವಯ್ಯ ಬರುತ್ತಿದ್ದಂತೆ ಏಳು ಕೋಟಿ ಏಳುಕೋಟಿ ಅಂತಾ ಘೋಷಣೆಗಳು ಮೊಳಗುತ್ತದೆ. ಇದಾದ ಮೇಲೆ ಇಡೀ ಜನಸ್ಥೋಮ ಶಾಂತವಾಗುತ್ತದೆ. ಸೂಚಿ ಬಿದ್ದರು ಸಹ ಸದ್ದಾಗುವ ರೀತಿಯಲ್ಲಿ ಇಲ್ಲಿ ಶಾಂತಿ ನೆಲೆಸುತ್ತದೆ.
ಇದನ್ನೂ ಓದಿ: ಯಾದಗಿರಿಯಲ್ಲಿ ಅದ್ದೂರಿಯಾಗಿ ನಡೆದ ಮೈಲಾರಲಿಂಗೇಶ್ವರನ ಜಾತ್ರೆ; ಸರಪಳಿ ಪವಾಡ ಕಂಡು ಮುಖವಿಸ್ಮಿತರಾದ ಭಕ್ತರು
ಇದು ಇರುವುದು ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿ. ಇದಲ್ಕೆ ದೊಡ್ಡ ಮೈಲಾರ ಪುಣ್ಯಕ್ಷೇತ್ರ ಎಂದು ಹೆಸರು. ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೊರವಯ್ಯ ಕಾರ್ಣಿಕ ನುಡಿಯುತ್ತಾರೆ. ಈ ಸಲ ಭಾಗ್ಯದ ನಿಧಿ ತುಂಬಿ ತುಳಕಿತಲೇ ಪರಾಕ್ ಎಂಬ ದೇವ ವಾಣಿ ಆಗಿದೆ. ಪ್ರಸಕ್ತ ವರ್ಷದ ಕಾರ್ಣಿಕ ಶುಭ ಸಂದೇಶ ನೀಡಿದೆ. ಈ ವರ್ಷದ ಉತ್ತಮ ಮಳೆ ಬೆಳೆಯಾಗಲಿದೆ ಎಂದು ಸೇರಿದ್ದ ಭಕ್ತರು ಅರ್ಥೈಸಿಕೊಂಡರು.
ಪುಣ್ಯಕ್ಷೇತ್ರದ ಅಂಗಳದಲ್ಲಿ ಏಳುಕೋಟಿ ಏಳು ಕೋಟಿ ಎನ್ನುತ್ತಲೇ ಭಕ್ತ ಸಮೂಹ ಕಾರ್ಣಿಕ ಸ್ವಾಗತಿಸಿದ್ರು. ಈ ಭಾಗದ ಜನಕ್ಕೆ ಇಲ್ಲಿನ ಗೊರವಯ್ಯ ನುಡಿಯುವ ವಾಣಿ ಅವರ ಇಡೀ ವರ್ಷದ ಬದುಕು ನಿರ್ಧರಿಸುತ್ತದೆ. ಮೇಲಾಗಿ ಇಲ್ಲಿ ಆದ ದೇವವಾಣಿ ಸತ್ಯವಾಗುತ್ತಲೇ ಬಂದಿದೆ. ಆದ್ರೆ ಒಮ್ಮೊಮ್ಮೆ ಭಕ್ತರು ಅರ್ಥೈಸುವ ರೀತಿ ಬದಲಾಗಬಹುದು. ಆದ್ರೆ ದೇವ ವಾಣಿ ಮಾತ್ರ ಸತ್ಯವಾಗುತ್ತದೆ ಎಂಬುದು ಈ ಭಾಗದ ಜನರ ನಂಬಿಕೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ