ವೃತ್ತಿಪರ ಫಿಟ್ಟರ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ಚೀಟಿ ಇಟ್ಟು ಕಾಪಿ ಮಾಡುವ ಚಂದ ನೋಡಿ ಮಾರಾಯ್ರೆ
ದಾವಣಗೆರೆ ಜಿಲ್ಲೆಯ ಮಾಯಕೊಂಡ ಐಟಿಐ ಕಾಲೇಜ್ನಲ್ಲಿ ನಡೆದ ವೃತ್ತಿಪರ ಫಿಟ್ಟರ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ವಿದ್ಯಾರ್ಥಿಗಳು ಚೀಟಿ ಹಿಡಿದುಕೊಂಡು ನಕಲು ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆಗಸ್ಟ್ 3 ಹಾಗೂ 4 ರಂದು ನಡೆದ ಫಿಟ್ಟರ್ ಪರೀಕ್ಷೆ ಇದಾಗಿದೆ.
ದಾವಣಗೆರೆ: ಜಿಲ್ಲೆಯ ಮಾಯಕೊಂಡ ಐಟಿಐ ಕಾಲೇಜ್ನಲ್ಲಿ ನಡೆದ ವೃತ್ತಿಪರ ಫಿಟ್ಟರ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ವಿದ್ಯಾರ್ಥಿಗಳು ಚೀಟಿ ಹಿಡಿದುಕೊಂಡು ನಕಲು ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆಗಸ್ಟ್ 3 ಹಾಗೂ 4 ರಂದು ಫಿಟ್ಟರ್ ಪರೀಕ್ಷೆ ನಡೆದಿದ್ದು, ವಿದ್ಯಾರ್ಥಿಯೊಬ್ಬ ಚೀಟಿ ಇಟ್ಟು ನಕಲು ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ಅಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ನಕಲು ಮಾಡುತ್ತಿರುವ ವಿಡಿಯೋವನ್ನು ಲೀಕ್ ಮಾಡಿರುವುದಾಗಿ ಅತಿಥಿ ಶಿಕ್ಷಕಿ ರೇಖಾ ಮೇಲೆ ವಿದ್ಯಾರ್ಥಿಗಳು ಮತ್ತು ಐಟಿಐ ಕಾಲೇಜು ಪ್ರಾಂಶುಪಾಲರು ಗರಂ ಆಗಿದ್ದು, ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ರೇಖಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಕಲು ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಂಟಿ ಆಯುಕ್ತ ವೈ ಜೆ ಕೊಂಡ ಅವರು ಐಟಿಐ ಕಾಲೇಜಿಗೆ ದೌಡಾಯಿಸಿ ಅಕ್ರಮದ ಕುರಿತು ಮಾಹಿತಿ ಕಲೆ ಹಾಕಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಬಳಿ 3 ಸಾವಿರ ಹಣ ಪಡೆದು ಕಾಪಿ ಹೊಡೆಯಲು ಅವಕಾಶ ಮಾಡಿಕೊಟ್ಟ ಶಂಕೆ ವ್ಯಕ್ತವಾಗಿದ್ದು, ಪ್ರಾಯೋಗಿಕ ಪರೀಕ್ಷೆಯ ನಕಲು ವಿಚಾರ ಆಗಸ್ಟ್ 10 ರೊಳಗೆ ರಿಪೋರ್ಟ್ ನೀಡಲು ಸೂಚನೆ ನೀಡಲಾಗಿದೆ.