ದಾವಣಗೆರೆ: ಓಮಿನಿ‌ ವ್ಯಾನ್​ಗೆ KSRTC ಬಸ್​ ಡಿಕ್ಕಿ; ಮೂವರು ಸ್ಥಳದಲ್ಲೇ ದುರ್ಮರಣ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 11, 2024 | 2:54 PM

ಕೆಎಸ್​ಆರ್​ಟಿಸಿ (KSRTC) ಬಸ್​ ಡಿಕ್ಕಿ ಹೊಡೆದು ಓಮಿನಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನ್ಯಾಮತಿ ತಾಲೂಕಿನ ಚಿನ್ನಕಟ್ಟೆ-ಶಿವಪುರ ಬಳಿ ನಡೆದಿದೆ. ಗಾಯಗೊಂಡವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಈ ಕುರಿತು ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದಾವಣಗೆರೆ: ಓಮಿನಿ‌ ವ್ಯಾನ್​ಗೆ KSRTC ಬಸ್​ ಡಿಕ್ಕಿ; ಮೂವರು ಸ್ಥಳದಲ್ಲೇ ದುರ್ಮರಣ
ಬಸ್​ ಮತ್ತು ಓಮಿನಿ ನಡುವೆ ಅಪಘಾತ
Follow us on

ದಾವಣೆಗೆರೆ, ಏ.11: ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಕಟ್ಟೆ-ಶಿವಪುರ ಬಳಿ ಕೆಎಸ್​ಆರ್​ಟಿಸಿ (KSRTC) ಬಸ್​ ಡಿಕ್ಕಿ ಹೊಡೆದು ಓಮಿನಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಸೂರಗೊಂಡನಕೊಪ್ಪ ನಿವಾಸಿಗಳಾದ ದೇವರಾಜ್(27), ರಾಕೇಶ್(30) ಹಾಗೂ ಹರಮಘಟ್ಟ ಗ್ರಾಮದ ನಿವಾಸಿ ನಂಜುಂಡಪ್ಪ(83) ಮೃತ ದುರ್ದೈವಿಗಳು. ಇನ್ನುಳಿದಂತೆ ಆರಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ತೀವ್ರ ಗಾಯಗೊಂಡ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹುಲಿ‌ ಸೆರೆ ಕಾರ್ಯಾಚರಣೆ ತಂಡದ‌ ಮೇಲೆ‌ ಹೆಜ್ಜೇನು ದಾಳಿ

ಕೊಡಗು: ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಹುಲಿ ಸೆರೆ ಕಾರ್ಯಾಚರಣೆ ತಂಡದ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಹೆಜ್ಜೇನು ದಾಳಿಯಿಂದ ಭೀಮ ಆನೆ ಬೆದರಿ ಓಡಿ‌ದೆ. ಅಸ್ವಸ್ಥ ಅರಣ್ಯಾಧಿಕಾರಿ ಕನ್ನಂಡ‌ ರಂಜನ್, ಮಾವುತ ಕುಳ್ಳ ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹರಿಹರ ಗ್ರಾಮದಲ್ಲಿ ನಿನ್ನೆ(ಏ.10) ಹುಲಿ ಕಾಣಿಸಿಕೊಂಡಿತ್ತು. ಆದ್ದರಿಂದ ಹುಲಿ‌ಸೆರೆಗೆ ಇಂದು(ಏ.11) ಕಾರ್ಯಾಚರಣೆ ಆರಂಭಿಸಲಾಗಿದ್ದು, ಈ ವೇಳೆ ದುರ್ಘಟನೆ ನಡೆದಿದೆ. ಇನ್ನು ಹುಲಿ ಗಾಯಗೊಂಡು ನಾಡಿನತ್ತ ಆಗಮಿಸಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ:ಶಿರಸಿಯಲ್ಲಿ ಭೀಕರ ಅಪಘಾತ; ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ರಸ್ತೆ ಕಾರ್ಮಿಕರ ಮೇಲೆ ಹರಿದ ಕಾರು

ಬೆಂಗಳೂರಿನ ಮನೆಯೊಂದರಲ್ಲಿ ಅಗ್ನಿ ಅವಘಡ; ಅದೃಷ್ಟವಶಾತ್ ಪಾರು

ಬೆಂಗಳೂರು: ನಗರದ ನಾಗವಾರದ ಸಾರಾಯಿಪಾಳ್ಯದಲ್ಲಿನ ಮನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್​ನಿಂದಾಗಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇಲ್ಲದ ವೇಳೆ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Thu, 11 April 24