ದಾವಣಗೆರೆ: ಹೋಮ್ ಸ್ಟೇಗಳಿಗೆ(Home Stay) ಬರುವ ಜೋಡಿಗಳನ್ನೇ ಟಾರ್ಗೆಟ್ ಮಾಡಿ ಅವರ ಫೋಟೋ, ವಿಡಿಯೋ ಸೆರೆ ಹಿಡಿದು ವಂಚಿಸುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಈ ಖತರ್ನಾಕ್ ಗ್ಯಾಂಗ್ ಹೋಮ್ ಸ್ಟೇಗೆ ಹೋಗುವ ಜೋಡಿಗಳ ಖಾಸಗಿ ವೀಡಿಯೋ, ಪೋಟೋ ತೆಗೆದು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರು. ಸದ್ಯ ಈ ಜಾಲ ಪತ್ತೆಯಾಗಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ನಗರದ ವಿದ್ಯಾನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕ ಯುವತಿಯರ ಖಾಸಗಿ ವಿಡಿಯೋ ಮಾಡಿದ್ದ ಸುರೇಶ್ ಕುಮಾರ್ & ಗ್ಯಾಂಗನ್ನು ಸೆರೆ ಹಿಡಿದಿದ್ದಾರೆ. ಜೋಡಿ ಬಳಿ 15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಈಗ ದಾವಣಗೆರೆ ಪೊಲೀಸರ ಅತಿಥಿಯಾಗಿದೆ. ಹುಬ್ಬಳ್ಳಿ ಮೂಲದ ಶಿವರಾಜಚಂದ್ರ, ದಾವಣಗೆರೆ ಮೂಲದ ರಮ್ಯ ಅಲಿಯಾಸ್ ಭೂಮಿಕ, ಪವಿತ್ರಾ, ಚಿಕ್ಕಮಗಳೂರು ಮೂಲದ ಸುರೇಶ್ ಬಂಧಿತ ಆರೋಪಿಗಳು.
ಹೋಮ್ ಸ್ಟೇಗೆ ಬಂದಿದ್ದ ಯುವಕನನ್ನು ಈ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡಿತ್ತು. ಇದಕ್ಕೆ ಹೆದರಿದ್ದ ಯುವಕ 1.2ಲಕ್ಷ ಹಣ ನೀಡಿದ್ದ. ಬಳಿಕ ಈ ಗ್ಯಾಂಗ್ ಮತ್ತಷ್ಟು ಹಣ ನೀಡುವಂತೆ ಯುವಕನಿಗೆ ಬೆದರಿಕೆ ಹಾಕಿದೆ. ಆಗ ಯುವಕ ದಾವಣಗೆರೆ ನಗರದ ವಿದ್ಯಾನಗರ ಪೊಲೀಸರಿಗೆ ದೂರು ನೀಡಿದ್ದಾನೆ. ಯುವಕನ ದೂರು ಆಧರಿಸಿ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:08 pm, Tue, 16 August 22