ದಾವಣಗೆರೆ: ರಾಜ್ಯ ಪೊಲೀಸ್ ಇಲಾಖೆ ಹಲವು ತಂತ್ರಜ್ಞಾನಗಳನ್ನು ಅಳವಡಿಕೊಳ್ಳುತ್ತಿದ್ದು, ಇವುಗಳ ಮೂಲಕ ಅಪರಾಧ ಪ್ರಕರಣಗಳನ್ನು ಸುಲಭವಾಗಿ ಭೇದಿಸಲು ಸಹಾಯವಾಗುತ್ತಿದೆ. ಪೊಲೀಸ್ ಇಲಾಖೆ ಇತ್ತೀಚಿಗೆ ಹೊಸ ತಂತ್ರಜ್ಞಾನದ ಮೊರೆ ಹೊಗಿದ್ದು, ಕ್ರೈಮ್ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಮ್ (M-CCTNS) ಆ್ಯಪ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಬಹುದಾಗಿದೆ. ಈ ಆ್ಯಪ್ ಮೂಲಕ ದಾವಣಗೆರೆ (Davangere) ಜಿಲ್ಲೆಯ ವಿದ್ಯಾನಗರ ಪೊಲೀಸರು (Vidyanagar) ಮೃತ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ಕೊಲೆ ಪ್ರಕರಣವೊಂದರ ಬೆನ್ನುಹತ್ತಿದ್ದರು. ಹೀಗಾಗಿ ಕೊಲೆಯಾದವನ ಹಿನ್ನೆಲೆ ಮತ್ತು ಆತನ ಗುರುತು ಪತ್ತೆಗಾಗಿ ಎಂ-ಸಿಸಿಟಿಎನ್‌ಎಸ್ ಆ್ಯಪ್ ಬಳಸಿದ್ದಾರೆ. ಈ ಡಿವೈಸನ್ನು ಉಪಯೋಗಿಸಿಕೊಂಡು ಮೊಬೈಲ್ ಅಪ್ಲಿಕೇಷನ್ ಮುಖಾಂತರ ಮೃತನ ವ್ಯಕ್ತಿಗಳ ಬೆರಳು ಮುದ್ರೆಯನ್ನು ಪರಿಶೀಲಿಸಿದಾಗ ಆ ವ್ಯಕ್ತಿಯ ಹಿನ್ನೆಲೆ ಪತ್ತೆಯಾಗಿದೆ.
ಈ ಕುರಿತು ದಾವಣಗೆರೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಿಶಾಂತ್ ವಿಡಿಯೋ ಹಂಚಿಕೊಂಡಿದ್ದು ಕರ್ನಾಟಕ ಪೊಲೀಸರು ಆ್ಯಪ್ ಮೂಲಕ ಮೃತದೇಹವನ್ನು ಗುರುತಿಸುತ್ತಿರುವುದು ಇದೇ ಮೊದಲು ಎಂದು ಹೇಳಿದ್ದಾರೆ. “ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಕೊಲೆ ನಡೆದಿದೆ. #MCCTNS ಅಪ್ಲಿಕೇಶನ್ ಬಳಸಿಕೊಂಡು ವ್ಯಕ್ತಿಯನ್ನು ಗುರುತಿಸಲಾಗಿದೆ. ನಂತರ ಪ್ರಕರಣವೂ ಪತ್ತೆಯಾಗಿತ್ತು. ಸಾಮಾನ್ಯವಾಗಿ, ರಾತ್ರಿಯ ಗಸ್ತಿನ ಸಮಯದಲ್ಲಿ, ರಸ್ತೆಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸಲು ಈ ಅಪ್ಲಿಕೇಶನ್ನ್ನು ಬಳಸಲಾಗುತ್ತದೆ. ಇದೇ ಮೊದಲ ಬಾರಿಗೆ ಮೃತ ದೇಹವನ್ನು ಗುರುತಿಸಲು ಅಪ್ಲಿಕೇಶನ್ನ್ನು ಬಳಸಲಾಯಿತು ಮತ್ತು ಅದು ತುಂಬಾ ಉಪಯುಕ್ತವಾಗಿದೆ. ದಾವಣಗೆರೆಯ ಎಫ್‌ಪಿಬಿ ಘಟಕಕ್ಕೆ ಧನ್ಯವಾದಗಳು” ಎಂದು ಹೇಳಿದರು.
A murder had accured in Vidyanagar Police station limits of an unknown person. The person was identified using #MCCTNS application. Later the case also got detected. Usually this application is used to verify suspicious persons on road during night rounds. 1/2@DgpKarnataka pic.twitter.com/QNaWSWfe8h
— Davanagere District Police (@SpDavanagere) March 31, 2023
ಕಳೆದ ವರ್ಷ ನವೆಂಬರ್‌ನಲ್ಲಿ ಬೆಂಗಳೂರು ಪೊಲೀಸರು ಎಂ-ಸಿಸಿಟಿಎನ್‌ಎಸ್ ಆ್ಯಪ್ ಮೂಲಕ ಕಳೆದ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಹಿಂದೆ ಸಂಗ್ರಹಿಸಿದ ಡೇಟಾಬೇಸ್ ಮೂಲಕ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮೂಲಕ ಆರೋಪಿಯ ಹಿನ್ನೆಲೆ ತಿಳಿದು ಬಂದಿತ್ತು. ಆತ ಹಲವು ಪ್ರಕರಣದಲ್ಲಿ ಬೇಕಾಗಿದ್ದನು. ಈ ವಿವರಗಳನ್ನು ತಿಳಿದ ಕೂಡಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 am, Sun, 2 April 23