5ನೇ ತರಗತಿ ಪಬ್ಲಿಕ್ ಪರೀಕ್ಷೆಯಿಂದ ಬಯಲಾಯ್ತು ದಾವಣಗೆರೆಯ ವೈಷ್ಣವಿ ಚೇತನಾ ಶಾಲೆಯಲ್ಲಿ ನಡೆಯುತ್ತಿದ್ದ ಅಡ್ಮಿಶನ್ ಗೋಲ್ ಮಾಲ್!

5ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಪ್ರಾರಂಭಿಸಿದ್ದೇ ತಡ ದಾವಣಗೆರೆಯಲ್ಲಿ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆಯುತ್ತಿದ್ದ ಅಡ್ಮಿಶನ್ ಗೋಲ್​ಮಾಲ್ ಬೆಳಕಿಗೆ ಬಂದಿದೆ. ತಮ್ಮನ್ನು ವಂಚನೆ ಮಾಡಿದ ಶಾಲೆಯ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದು, ಶಾಲಾ ಆಡಳಿತ ಮಂಡಳಿ ಕ್ಷಮೆಯಾಚಿಸಿದೆ.

5ನೇ ತರಗತಿ ಪಬ್ಲಿಕ್ ಪರೀಕ್ಷೆಯಿಂದ ಬಯಲಾಯ್ತು ದಾವಣಗೆರೆಯ ವೈಷ್ಣವಿ ಚೇತನಾ ಶಾಲೆಯಲ್ಲಿ ನಡೆಯುತ್ತಿದ್ದ ಅಡ್ಮಿಶನ್ ಗೋಲ್ ಮಾಲ್!
ವೈಷ್ಣವಿ ಚೇತನಾ ಶಾಲಾಯಲ್ಲಿ ವಂಚನೆಗೊಳಗಾದ ಪೋಷಕರ ಪ್ರತಿಭಟನೆ
Follow us
Rakesh Nayak Manchi
|

Updated on:Apr 01, 2023 | 8:43 PM

ದಾವಣಗೆರೆ: ಪ್ರತಿಷ್ಠಿತ ಶಾಲೆಗೆ ಮಕ್ಕಳನ್ನ ಸೇರಿಸುವುದೇ ಒಂದು ಪ್ರತಿಷ್ಠೆಯ ಸಂಗತಿಯಾಗಿದೆ. ಜೊತೆಗೆ ಸಿಬಿಎಸ್​ಸಿ (CBSE) ಪಠ್ಯಕ್ರಮ ಅಂದರೆ ಇನ್ನೂ ಹೆಚ್ಚಿನ ಪ್ರತಿಷ್ಠೆಯಾಗಿದೆ. ಅದರಂತೆ ಸಿಬಿಎಸ್​ಸಿ ಪಠ್ಯಕ್ರಮಕ್ಕೆಂದು ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗೆ ಸೇರಿಸಿದರೆ, ಇತ್ತ ಮಕ್ಕಳು ಸ್ಟೇಟ್ ಎಕ್ಸಾಂ (State Exams) ಬರೆಯಲು ಹೋಗುತ್ತಿರುವುದುನ್ನು ಕಂಡು ತಲೆ ಮೇಲೆ ಕೈ ಇಡುವಂತಾಗಿದೆ. ಮಕ್ಕಳ ಭವಿಷ್ಯವನ್ನ ನೆನೆದು ಪಾಲಕರು ಮರುಗುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯಿಂದ ಸೂಕ್ತ ಉತ್ತರ ಬಾರದ ಹಿನ್ನೆಲೆ ಶಾಲೆಯಲ್ಲಿ ನಿತ್ಯ ನಡೆಯುತ್ತಿದ್ದ ಜಗಳ ಇಂದು ತಾರಕಕ್ಕೇರಿದೆ. ಶಾಲಾ ಆಡಳಿತ ಮಂಡಳಿ ಕ್ಷಮೆಯೂ ಯಾಚಿಸಿದೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ದಾವಣಗೆರೆ ನಗರ ಹದಡಿ ರಸ್ತೆಯಲ್ಲಿ ಇರುವ ವೈಷ್ಣವಿ ಚೇತನಾ ಶಾಲೆ ದಾವಣಗೆರೆಯ ಪ್ರತಿಷ್ಠಿತ ಶಾಲೆಗಳಲ್ಲೊಂದಾಗಿದೆ. ಅತ್ಯಂತ ಶ್ರೀಮಂತರ ಮಕ್ಕಳು ಸಹ ಇಲ್ಲಿಯೇ ವ್ಯಾಸಾಂಗ ನಡೆಸುತ್ತಿದ್ದಾರೆ. ಹೆಚ್ಚು ರ್ಯಾಂಕ್​ಗಳು ಈ ಶಾಲೆಯಲ್ಲಿಯೇ ಬರುವುದು. ಹೀಗಾಗಿ ಇಲ್ಲಿ ಪ್ರವೇಶ ಸಿಕ್ಕಿದೆ ಅಂದರೆ ಒಂದು ರೀತಿಯಲ್ಲಿ ಪ್ರತಿಷ್ಠೆಯ ಸಂಗತಿಯಾಗಿದೆ. ಹೀಗೆ ಪ್ರತಿಷ್ಠೆಯ ಬೆನ್ನು ಹತ್ತಿದ್ದ ಪಾಲಕರಿಗೆ ಶಾಲಾ ಆಡಳಿತ ಮಂಡಳಿ ಒಂದು ರೀತಿಯಲ್ಲಿ ವಂಚನೆಯೂ ಎಸಗಿದೆ. ತಮ್ಮ ಮಕ್ಕಳನ್ನು ಸಿಬಿಎಸ್​ಇ ಓದಬೇಕು ಎಂಬ ಆಸೆಯಿಂದ ಸಿಬಿಎಸ್​ಇ ಪಠ್ಯಕ್ರಮಕ್ಕೆ ದಾಖಲಿಸಿದ್ದಾರೆ. ಆದರೆ ರಾಜ್ಯ ಸರ್ಕಾರವು 5ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಜಾರಿ ಮಾಡಿದಾಗ ವೈಷ್ಣಮಿ ವೇತನಾ ಶಾಲೆಯಲ್ಲಿ ನಡೆಯುತ್ತಿದ್ದ ಅಡ್ಮಿಶನ್ ಗೋಲ್ ಮಾಲ್ ಬೆಳಕಿಗೆ ಬಂದಿದೆ.

ತಮ್ಮ ಮಕ್ಕಳನ್ನು ಸಿಬಿಎಸ್​ಸಿ ಪಠ್ಯಕ್ರಮಕ್ಕೆ ಸೇರಿದ್ದಾರೆ. ಆದರೆ ಸ್ಟೇಟ್ ಪರೀಕ್ಷೆ ಬರೆಯಲು ಮಕ್ಕಳು ಹೋಗುತ್ತಿರುವುದನ್ನ ಕಂಡ ಪಾಲಕರು ದಂಗಾಗಿದ್ದರು. ಹಣದ ಆಸೆಗೆ ಬಿದ್ದ ವೈಷ್ಣವಿ ಚೇತನಾ ಶಾಲಾ ಆಡಳಿತ ಮಂಡಳಿ, ಸಿಬಿಎಸ್​ಸಿಗೆ ಇಂತಿಷ್ಟು ಮಕ್ಕಳಿಗೆ ಅಂತಾ ಪರವಾಣಿಗೆ ಪಡೆದು ಮಕ್ಕಳನ್ನ ಬೇಕಾ ಬಿಟ್ಟಿ ಪ್ರವೇಶ ಪಡೆದು ಕೊನೆಗೆ ಸ್ಟೇಟ್ ಪರೀಕ್ಷೆ ಬರೆಸುತ್ತಿದ್ದರು. ಈ ವಿಚಾರ ಪಬ್ಲಿಕ್ ಪರೀಕ್ಷೆಯಿಂದ ಹೊರಬೀಳುತ್ತಿದ್ದಂತೆ ಶಾಲೆಯಲ್ಲಿ ಜಗಳ ಆರಂಭವಾಗಿದೆ.

ಇದನ್ನೂ ಓದಿ: UPSC ESE Mains 2023: ಜೂನ್ 25 ರಂದು ಪರೀಕ್ಷೆ ನಡೆಯಲಿದೆ, ಶೀಘ್ರದಲ್ಲಿ ಪ್ರವೇಶ ಕಾರ್ಡ ಬಿಡುಗಡೆ

ಸಾವಿರಾರು ರೂಪಾಯಿ ಶುಲ್ಕ ತುಂಬಿದ್ದೆ. ಒಂದು ಶುಲ್ಕ ಪಾವತಿಸುವುದು ತಡವಾದರೂ ಮಕ್ಕಳಿಗೆ ವಾರ್ನಿಂಗ್ ಮಾಡುತ್ತೀರಿ. ಮೇಲಾಗಿ ಈಗ ನೋಡಿದರೆ ಈ ರೀತಿ ವಂಚನೆ ಮಾಡಿದ್ದೀರಿ. ನಮ್ಮ ಮಕ್ಕಳ ಭವಿಷ್ಯದ ಕತೆ ಎನು ಎಂದು ಪೋಷಕರು ಜಗಳಕ್ಕೆ ನಿಂತಿದ್ದಾರೆ. ಈ ಜಗಳ ಇಂದು ವಿಕೋಪಕ್ಕೆ ಹೋಗಿದೆ. ನೂರಾರು ಜನ ಪಾಲಕರು ಮಕ್ಕಳ ಸಹಿತ ಹೋರಾಟಕ್ಕೆ ಮುಂದಾದರು.

ಇದೇ ಶಾಲೆಯಲ್ಲಿ 500ಕ್ಕೂ ಹೆಚ್ಚು ಐದನೇ ತರಗತಿ ಓದುವ ಮಕ್ಕಳಿಗೆ ಅನ್ಯಾಯವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಮಾಚನೇನಿ ಅವರನ್ನ ತರಾಟೆಗೆ ತೆಗೆದುಕೊಂಡರು. ಹೀಗೆ ಮಕ್ಕಳಿಗೆ ಆದ ಅನ್ಯಾಯವನ್ನ ಪ್ರಶ್ನೆ ಮಾಡಲು ಪಾಲಕರು ಮುಂದಾಗಿದ್ದರು. ಕೆಲ ಪಾಲಕರು ದೂರು ನೀಡುವ ಬಗ್ಗೆ ಕೂಡಾ ಮಾತಾಡಿದರು. ಇದರಿಂದ ಭೀತಿಗೊಂಡ ಶಾಲಾ ಆಡಳಿತ ಮಂಡಳಿ ತಮ್ಮದು ತಪ್ಪಾಗಿದೆ, ಮುಂದೆ ಈ ಮಕ್ಕಳಿಗೆ ಸಿಬಿಎಸ್​ಸಿಗೆ ಅಡ್ಮಿಶನ್ ಕೊಡುತ್ತೇವೆ ಎಂದು ಹೇಳಿದ್ದಾರೆ.

ಹೀಗೆ ಪಾಲಕರಿಗೆ ವಂಚಿಸಿ ಹಣದಾಸೆಗೆ ಹತ್ತಾರು ಗೋಲ್ ಮಾಡಿರುವ ಸಂಸ್ಥೆಯ ಬಗ್ಗೆ ಕ್ರಮ ಎನಾಗುತ್ತದೆ. ಮೇಲಾಗಿ ಶಿಕ್ಷಣ ಇಲಾಖೆ ಕೂಡಾ ಈ ಸಂಸ್ಥೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವ ತಾಕತ್ತು ಇಲ್ಲಾ ಎಂಬ ಮಾತುಗಳು ಕೇಳಿ ಬಂದವು. ಕಾರಣ ವಿಜಯ ಲಕ್ಷ್ಮಿ ಮಾಚನೇನಿ ಅವರು ಪ್ರಭಾವಿಗಳಾಗಿದ್ದಾರೆ. ಪಾಲಕರಿಗೆ ವಂಚಿಸಿ ಹಣದಾಸೆಗೆ ಮಕ್ಕಳ ಭವಿಷ್ಯದ ಜೊತೆಗೆ ಚಲ್ಲಾಟ ಆಡುವ ಇಂತಹ ಸಂಸ್ಥೆಗಳ ವಿರುದ್ಧ ಕ್ರಮ ಆಗಬೇಕಿದೆ. ಜೊತೆಗೆ ಪಾಲಕರು ಕೂಡಾ ಎಚ್ಚತ್ತುಕೊಳ್ಳಬೇಕಿದೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Sat, 1 April 23

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?