AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನ್ನದಾತರ ಬದುಕಿನೊಂದಿಗೆ ಚೆಲ್ಲಾಟ: ಹೆಚ್ಚಿನ ಬೆಲೆ ಆಮಿಷವೊಡ್ಡಿ 40ಕ್ಕೂ ಹೆಚ್ಚು ರೈತರಿಂದ ಭತ್ತ ಖರೀದಿಸಿ 1.30 ಕೋಟಿ ರೂ. ವಂಚನೆ ಆರೋಪ

ದಾವಣಗೆರೆಯಲ್ಲಿ ದಂಡೋತಿ ರೈಸ್ ಮಿಲ್ ಮಾಲೀಕರು 40ಕ್ಕೂ ಹೆಚ್ಚು ರೈತರಿಗೆ 1.3 ಕೋಟಿ ರೂ. ಭತ್ತದ ಹಣ ಪಾವತಿಸದೆ ವಂಚಿಸಿದ್ದಾರೆ. ಹೆಚ್ಚಿನ ಬೆಲೆಯ ಆಮಿಷವೊಡ್ಡಿ ಭತ್ತ ಖರೀದಿಸಿದ ಬಳಿಕ ಹಣ ನೀಡದೆ ಸತಾಯಿಸುತ್ತಿದ್ದಾರೆ. ಹಣ ಕೇಳಿದ ರೈತರಿಗೆ ಬೆದರಿಕೆ ಹಾಕಿದ ಆರೋಪವೂ ಇದೆ. ಇದರಿಂದ ಆಕ್ರೋಶಗೊಂಡ ರೈತರು ಮಿಲ್ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಿ, ತಮ್ಮ ಬೆವರಿನ ಹಣ ಹಿಂದಿರುಗಿಸುವಂತೆ ಆಗ್ರಹಿಸಿದ್ದಾರೆ.

ಅನ್ನದಾತರ ಬದುಕಿನೊಂದಿಗೆ ಚೆಲ್ಲಾಟ: ಹೆಚ್ಚಿನ ಬೆಲೆ ಆಮಿಷವೊಡ್ಡಿ 40ಕ್ಕೂ ಹೆಚ್ಚು ರೈತರಿಂದ ಭತ್ತ ಖರೀದಿಸಿ 1.30 ಕೋಟಿ ರೂ. ವಂಚನೆ ಆರೋಪ
ದಾವಣಗೆರೆ, ರೈತರಿಗೆ ಮೋಸ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Nov 15, 2026 | 6:26 PM

Share

ದಾವಣಗೆರೆ, ನ.15: ಕಷ್ಟಪಟ್ಟು ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಆಸೆಯಿಂದ ಭತ್ತ ಮಾರಾಟ ಮಾಡಿದ 40ಕ್ಕೂ ಹೆಚ್ಚು ರೈತರಿಗೆ ಬರೋಬ್ಬರಿ 1 ಕೋಟಿ 30 ಲಕ್ಷ ರೂಪಾಯಿ ಹಣ ಪಾವತಿಸದೆ ವಂಚಿಸಿರುವ ಗಂಭೀರ ಆರೋಪ ದಾವಣಗೆರೆಯಲ್ಲಿ ಕೇಳಿಬಂದಿದೆ. ನಗರದ ದಂಡೋತಿ ರೈಸ್ ಮಿಲ್ ಮಾಲೀಕರು ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ರೊಚ್ಚಿಗೆದ್ದ ರೈತರು ಮಿಲ್‌ಗೆ ಮುತ್ತಿಗೆ ಹಾಕಿ ಅಹೋರಾತ್ರಿ ಪ್ರತಿಭಟನೆಗೆ ಇಳಿದಿದ್ದಾರೆ.

ರಾಣೇಬೆನ್ನೂರು ತಾಲೂಕಿನ ಈಲದಳ್ಳಿ, ಉದ್ದಘಟ್ಟ ಹಾಗೂ ಬೇಲೂರು ಗ್ರಾಮದ 40ಕ್ಕೂ ಹೆಚ್ಚು ರೈತರು ತಮ್ಮ ಬೆವರಿನ ಫಸಲಾದ ಭತ್ತವನ್ನು ಮಾರಾಟ ಮಾಡಿದ್ದರು. ದಾವಣಗೆರೆಯ ದಂಡೋತಿ ರೈಸ್ ಮಿಲ್ ಮಾಲೀಕ ಶ್ರೀನಿವಾಸ ಎಂಬುವವರು ಮಧ್ಯವರ್ತಿ ಸಿದ್ದಪ್ಪ ಎಂಬುವವರ ಮೂಲಕ ರೈತರಿಂದ ಭತ್ತ ಖರೀದಿಸಿದ್ದರು ಎನ್ನಲಾಗಿದೆ.

ಮಾರುಕಟ್ಟೆಗಿಂತ ಹೆಚ್ಚಿನ ಹಣ ನೀಡುವುದಾಗಿ ಹಾಗೂ ನಗದು ರೂಪದಲ್ಲೇ ಹಣ ಪಾವತಿಸುವುದಾಗಿ ರೈತರನ್ನು ನಂಬಿಸಲಾಗಿತ್ತು. ಆದರೆ ಲೋಡುಗಟ್ಟಲೆ ಭತ್ತ ಮಿಲ್ ಒಳಗೆ ಸೇರಿದ ಬಳಿಕ ವರಸೆ ಬದಲಾಯಿಸಿದ ಮಾಲೀಕರು, ಆರ್‌ಟಿಜಿಎಸ್ ಮೂಲಕ ಹಣ ಹಾಕುವುದಾಗಿ ಹೇಳಿ ದಿನ ದೂಡುತ್ತಾ ಬರೋಬ್ಬರಿ 1.30 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ ಎಂಬುದು ರೈತರ ಗಂಭೀರ ಆರೋಪವಾಗಿದೆ.

ಇದನ್ನೂ ಓದಿ: ಸಿದ್ದಸಿರಿ ಸೊಸೈಟಿ ಮೇಲೆ ಯಾವುದೇ ದಾಳಿಯಾಗಿಲ್ಲ, ಗ್ರಾಹಕರ ಹಣ ಸುರಕ್ಷಿತ; ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

ಹಣ ಕೇಳಿದ ರೈತರಿಗೆ ಬೆದರಿಕೆ ಆರೋಪ; ಮಿಲ್ ಮುಂದೆ ಅನ್ನದಾತರ ಆಕ್ರೋಶ

ತಮ್ಮದೇ ಕಷ್ಟದ ಹಣವನ್ನು ವಾಪಸ್ ಕೇಳಲು ಹೋದ ರೈತರಿಗೆ ಮಿಲ್ ಮಾಲೀಕ ಶ್ರೀನಿವಾಸ ಹಾಗೂ ಅವರ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ತಾಳ್ಮೆ ಕಳೆದುಕೊಂಡ 40ಕ್ಕೂ ಹೆಚ್ಚು ರೈತರು ಕಳೆದ ರಾತ್ರಿ ಒಟ್ಟಾಗಿ ದಂಡೋತಿ ರೈಸ್ ಮಿಲ್‌ಗೆ ಮುತ್ತಿಗೆ ಹಾಕಿದ್ದಾರೆ. ರೈತರು ಮುತ್ತಿಗೆ ಹಾಕುತ್ತಿದ್ದಂತೆ ಮಾಲೀಕ ಶ್ರೀನಿವಾಸ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಇದು ನಮ್ಮ ಬೆವರಿನ ಹಣ, ಯಾರಪ್ಪನ ಮನೆಯ ಆಸ್ತಿಯಲ್ಲ! ನಮ್ಮ ಭತ್ತಕ್ಕೆ ಹಣ ಕೊಡಿ, ಇಲ್ಲವೇ ನಮ್ಮ ಭತ್ತವನ್ನಾದರೂ ವಾಪಸ್ ಕೊಡಿ” ಎಂದು ರೈತರು ಪಟ್ಟು ಹಿಡಿದಿದ್ದಾರೆ. ಈ ವೇಳೆ ರೈತ ಮಹಿಳೆ ಶಾಂತಮ್ಮ ಬಾರ್ಕಿ ಅವರು, “ಸಾಲ ಮಾಡಿ ಬೆಳೆದ ಬೆಳೆಗೆ ಹಣ ಸಿಗದಿದ್ದರೆ ಬದುಕುವುದಾದರೂ ಹೇಗೆ? ಹಣ ಸಿಗದಿದ್ದರೆ ವಿಷ ಕುಡಿಯುವ ಸ್ಥಿತಿಗೆ ಬಂದಿದ್ದೇವೆ” ಎಂದು ಕಣ್ಣೀರು ಹಾಕಿರುವುದು ಎಂಥವರ ಮನಕಲಕುವಂತಿತ್ತು. ಪ್ರತಿಭಟನೆಯಲ್ಲಿ ಮಧ್ಯವರ್ತಿ ರೈತ ಸಿದ್ದಪ್ಪ, ರೈತ ಮುಖಂಡ ಮಾಗಾನಹಳ್ಳಿ ಮಂಜುನಾಥ ಸೇರಿದಂತೆ ಹಲವು ರೈತರು ಭಾಗವಹಿಸಿ ತಕ್ಷಣ ನ್ಯಾಯ ಕೊಡಿಸುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ
ಕೆಎಎಸ್ ಪರೀಕ್ಷೆಗೆ ವಿಎಓ ಹಾಲ್ ಟಿಕೆಟ್ ತಂದ ಮಹಿಳಾ ಅಭ್ಯರ್ಥಿ