ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಜೋಡಿ ಮಧ್ಯೆ ಕಲಹ; ಪೊಲೀಸರ ಸೋಗಿನಲ್ಲಿ ಕಿಡ್ನ್ಯಾಪ್, ಪತ್ನಿ ವಿರುದ್ಧವೇ ಆರೋಪ!

ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಜೋಡಿ ಮಧ್ಯೆ ಕಲಹ; ಪೊಲೀಸರ ಸೋಗಿನಲ್ಲಿ ಕಿಡ್ನ್ಯಾಪ್, ಪತ್ನಿ ವಿರುದ್ಧವೇ ಆರೋಪ!
ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಜೋಡಿ ಮಧ್ಯೆ ಕಲಹ; ಪೊಲೀಸರ ಸೋಗಿನಲ್ಲಿ ಕಿಡ್ನ್ಯಾಪ್, ಪತ್ನಿ ವಿರುದ್ಧವೇ ಆರೋಪ!

ಎರಡು ತಿಂಗಳಿನಿಂದ ವಹಮ್ಮದ್ ವಾಸಿಂ ಎಲ್ಲಿದ್ದಾನೆ.. ಏನಾದ ಅಂತಾ ಯಾರಿಗೂ ಗೊತ್ತಿರಲಿಲ್ಲ. ಪೊಲೀಸರಿಗೂ ಸಣ್ಣ ಸುಳಿವು ಕೂಡ ಸಿಕ್ಕರಲಿಲ್ಲ. ಈ ನಡುವೆ ಸೊಸೆ ವಿರುದ್ಧ ಅನುಮಾನಗೊಂಡ ಕುಟುಂಬಸ್ಥರು ಎಲ್ಲಾ ಕಡೆ ವಿಚಾರಿಸಿದ್ದಾರೆ. ಆಗ ಮಹಮ್ಮದ್ ವಾಸಿಂ ನೆಲಮಂಗಲ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿದ್ದಾನೆ ಅನ್ನೋ ವಿಚಾರ ಗೊತ್ತಾಗಿದೆ.

TV9kannada Web Team

| Edited By: Ayesha Banu

Mar 03, 2022 | 5:17 PM

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಜೋಡಿಯೊಂದು ಪ್ರೀತಿಸಿ ಮದುವೆ ಆಗಿ ಚೆನ್ನಾಗಿ ಬದುಕಿ ತೋರಿಸ್ತೀವಿ ನೋಡಿ ಅಂತಾ ಎಲ್ಲರಿಗೂ ಸವಾಲ್ ಹಾಕಿದ್ದವರು ಕೆಲ ದಿನಗಳ ಕಾಲ ಚನ್ನಾಗೇ ಬಾಳಿ ತೋರಿಸಿದ್ರು. ಇವರ ಪ್ರೀತಿಯ ಸಾಕ್ಷಿಯಾಗಿ ಒಂದು ಮಗು ಕೂಡ ಜನಿಸಿತ್ತು. ಆದ್ರೆ, ಇತ್ತೀಚೆಗೆ ಇಬ್ಬರ ನಡುವೆ ಪ್ರತಿದಿನ ಗಲಾಟೆ ನಡೀತಿತ್ತು. ಹೆಂಡ್ತಿ ಗಂಡನೇ ಬೇಡ ಅಂತಿದ್ಲು.. ಕೊನೆಗೆ ಆಗಿದ್ದು ಸಿನಿಮಾ ಸ್ಟೈಲ್ನಲ್ಲಿ ಕಿಡ್ನ್ಯಾಪ್!

ದಾವಣಗೆರೆ ನಗರದ ರಜಾವುಲ್ ಮುಸ್ತಾಫ್ ನಗರದ ನಿವಾಸಿ ಮಹಮ್ಮದ್ ವಾಸಿಂ, ರಿಯಲ್ ಎಸ್ಟೇಟ್ನಲ್ಲಿ ಸ್ವಲ್ಪ ದುಡ್ ಮಾಡಿದ್ದ. ವಾಸಿಂ ಕಳೆದ ಮೂರು ವರ್ಷಗಳ ಹಿಂದೆ ಜುಬೇದ್ ಭಾನು ಹಿಂದೆ ಬಿದ್ದಿದ್ದ. ಗೃಹ ರಕ್ಷಕದಳದಲ್ಲಿ ಕೆಲಸ ಮಾಡ್ತಿದ್ದ ಜುಬೇದ್ ಭಾನು ಬ್ಯೂಟಿಗೆ ವಾಸಿಂ ಸೋತು ಪ್ರೀತಿ ಮಾಡಲು ಶುರು ಮಾಡಿದ್ದ. ಭಾನುಗೆ ಮದುವೆ ಆಗಿ ಒಂದು ಮಗು ಇದೆ ಅಂತಾ ಗೊತ್ತಿದ್ರೂ ಪ್ರೀತಿಸಿ ಮದುವೆ ಆಗಿದ್ದ. ಪ್ರಾರಂಭದಲ್ಲಿ ಇಬ್ಬರು ಚೆನ್ನಾಗಿಯೇ ಇದ್ರು. ಆದ್ರೆ, ಕಳೆದ ಎರಡು ತಿಂಗಳ ಹಿಂದೆ ಪೊಲೀಸರ ಸ್ಟೈಲ್ನಲ್ಲಿ ಮನೆಗೆ ಬಂದ ನಾಲ್ವರು ಪುಂಡರು, ಮಹಮ್ಮದ್ನನ್ನ ಹೊಡೆದು ಕಿಡ್ನ್ಯಾಪ್ ಮಾಡಿದ್ದಾರೆ. ಇದಾದ ಬಳಿಕ ಕಂಗಾಲಾದ ವಾಸಿಂ ಕುಟುಂಬಸ್ಥರು ಆಜಾದ್ ನಗರ ಪೋಲಿಸ್ ಠಾಣೆಯಲ್ಲಿ ಕಿಡ್ನ್ಯಾಪ್ ದೂರು ನೀಡಿದ್ದಾರೆ. ಇಷ್ಟೇ ಅಲ್ಲ, ಈ ಕಿಡ್ನ್ಯಾಪ್ ಸ್ಟೋರಿ ಹಿಂದೆ ಸೊಸೆಯ ಕೈವಾಡ ಇದೆ ಅಂತಾ ವಾಸಿಂ ತಾಯಿ ಗಂಭೀರವಾಗಿ ಆರೋಪ ಮಾಡ್ತಿದ್ದಾರೆ. ಯಾಕಂದ್ರೆ, ಈ ಭಾನು ಗಂಡ ಬೇಡ ಅಂತಾ ಇತ್ತೀಚೆಗೆ ಗಲಾಟೆ ಮಾಡ್ತಿದ್ಲಂತೆ.

ಪತಿಯನ್ನೇ ಕಿಡ್ನ್ಯಾಪ್ ಮಾಡಿ ಬಂಧಿಸಿಟ್ಲಾ ಮಡದಿ? ಇನ್ನು, ಎರಡು ತಿಂಗಳಿನಿಂದ ವಹಮ್ಮದ್ ವಾಸಿಂ ಎಲ್ಲಿದ್ದಾನೆ.. ಏನಾದ ಅಂತಾ ಯಾರಿಗೂ ಗೊತ್ತಿರಲಿಲ್ಲ. ಪೊಲೀಸರಿಗೂ ಸಣ್ಣ ಸುಳಿವು ಕೂಡ ಸಿಕ್ಕರಲಿಲ್ಲ. ಈ ನಡುವೆ ಸೊಸೆ ವಿರುದ್ಧ ಅನುಮಾನಗೊಂಡ ಕುಟುಂಬಸ್ಥರು ಎಲ್ಲಾ ಕಡೆ ವಿಚಾರಿಸಿದ್ದಾರೆ. ಆಗ ಮಹಮ್ಮದ್ ವಾಸಿಂ ನೆಲಮಂಗಲ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿದ್ದಾನೆ ಅನ್ನೋ ವಿಚಾರ ಗೊತ್ತಾಗಿದೆ. ಆದ್ರೆ, ಆಸ್ಪತ್ರೆ ಬಳಿ ಹೋದ್ರೆ ವಾಸಿಂನನ್ನ ನೋಡಲು ಬಿಡುತ್ತಿಲ್ವಂತೆ. ಇಷ್ಟೇ ಅಲ್ಲ, ಆಸ್ಪತ್ರೆ ಎಂಡಿ ಮತ್ತು ಭಾನು ಸೇರಿಕೊಂಡು ಮಹಮ್ಮದ್ ವಾಸಿಂಗೆ ಚಿತ್ರಹಿಂಸೆ ಕೊಟ್ಟು ಕೂಡಾಕಿದ್ದಾರೆ. ಅದು ಕೂಡ 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರಂತೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ರೂ ಏನೂ ಪ್ರಯೋಜನ ಆಗಿಲ್ಲ. ವಾಸಿಂನಿಂದ ವಿಚ್ಚೇದನ ಪಡೆಯಲು ಭಾನು ಹೀಗೆ ಮಾಡ್ತಿದ್ದಾಳೆ ಅಂತಾ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ.

ಒಟ್ಟಾರೆ, ಪ್ರೀತಿಸಿ ಮದುವೆ ಆಗಿದ್ದ ವಾಸಿಂ ಡಿವೋರ್ಸ್ ಕೊಡಲು ಒಪ್ಪುತಿಲ್ವಂತೆ. ಹೀಗಾಗಿ ಸೊಸೆಯೇ ಮಗನನ್ನ ಕಿಡ್ಕ್ಯಾಪ್ ಮಾಡಿ, ಆಸ್ಪತ್ರೆಯಲ್ಲಿ ಕೂಡಾಕಿದ್ದಾಳೆ. ನಮಗೆ ನ್ಯಾಯ ಬೇಕು. ನನಗೆ ನನ್ನ ಮಗ ಬೇಕು ಅಂತಾ ತಾಯಿ ಕಣ್ಣೀರು ಸುರಿಸ್ತಿದ್ದಾರೆ. ಪೊಲೀಸ್ರು ಅಸಲಿಗೆ ಆಗಿದ್ದೇನು ಅಂತಾ ತನಿಖೆ ಮಾಡ್ತಿದ್ದಾರೆ.

ವರದಿ: ಬಸವರಾಜ್ ದೊಡ್ಮನಿ, ಟಿವಿ 9 ದಾವಣಗೆರೆ

ಇದನ್ನೂ ಓದಿ: ರಾಯಚೂರು: ಮಾವನ ನಿವೃತ್ತಿ ಹಣಕ್ಕೆ ಕಿರುಕುಳ ನೀಡುತ್ತಿದ್ದ ಪತಿ ಪತ್ನಿಯನ್ನೇ ಕೊಂದ

Follow us on

Related Stories

Most Read Stories

Click on your DTH Provider to Add TV9 Kannada