ದಾವಣಗೆರೆ: ಇತ್ತೀಚಿಗೆ ತಮ್ಮ ನೆಚ್ಚಿನ ನಾಯಕರಿಗೆ ಪುಷ್ಪಾರ್ಚನೆ ಮಾಡುವುದು. ಕ್ವಿಂಟಾಲ್ ತೂಕ ಸೇಬಿನ ಹಾರ ಹಾಕುವುದು ಹೆಚ್ಚಾಗಿದೆ. ಅದರಲ್ಲೂ ಜೆಸಿಬಿಗಳಲ್ಲಿ ಹೂವು ತುಂಬಿಕೊಂಡು ಸುರಿಸುವುದು ಜೋರಾಗಿದೆ. ಆದರೆ ಇದು ಎಂತಹ ಅಪಾಯಕಾರಿ ಎಂಬುವುದನ್ನು ದಾವಣಗೆರೆ ಸಂಸದ , ಅವರನ್ನು ಕೇಳಿದರೆ ಗೊತ್ತಾಗುತ್ತದೆ. ಏಕೆಂದರೆ ಹೂ ಮಳೆಯಿಂದ ಅವರ ಮುಖದ ಬಹುತೇಕ ಕಡೆ ಗಾಯವಾದಂತಾಗಿದೆ. ಮೇಲಾಗಿ ಮುಖ ಉದಿಕೊಂಡಿದೆ. ಕಣ್ಣಿಗೂ ಸ್ವಲ್ಪ ತೊಂದರೆ ಆಗಿದೆ. ಇದಕ್ಕೆಲ್ಲಾ ಕಾರಣ ಹೂವು. ಅದು ಹೇಗೆ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.
ಇತ್ತೀಚಿಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆಯಲ್ಲಿ ಕೊರೊನಾ ವಾರಿಯರ್ಗಳಿಗೆ ಸನ್ಮಾನವಿತ್ತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹ ಬಂದಿದ್ದರು. ಇಲ್ಲಿನ ಆಕರ್ಷಣೆ ಅಂದರೆ ಹತ್ತಾರು ಕ್ವಿಂಟಾಲ್ ಚಂಡು ಹೂವು. ಅದು ಸನ್ಮಾನಿತರಿಗಾಗಿ ತರಲಾಗಿತ್ತು. ಸನ್ಮಾನ ಮಾಡುತ್ತಿದ್ದಂತೆ ತಲೆಯ ಮೇಲೆ ಹೂವು ಹಾಕುವುದು ಎಂದು ನಿರ್ಧರಿಸಲಾಗಿತ್ತು. ಜೊತೆಗೆ ಹೂವನ್ನು ಮುರಿದು ಸನ್ಮಾನಿತರ ಮೇಲೆ ಹಾಕಲು ಅನುಕೂಲ ಆಗುವಂತೆ ಮಾಡಲಾಗಿತ್ತು. ಆದರೆ ಹೀಗೆ ಹೂವು ಹಾಕಿದ್ದೇ ತಡ ಅದು ಸಂಸದರಿಗೆ ಅಲರ್ಜಿ ಉಂಟು ಮಾಡಿದೆ.
ನೇರವಾಗಿ ಜಮೀನಿನಿಂದ ಹೂವು ತಂದು ಅತಿಥಿಗಳ ಮೇಲೆ ಹಾಕುವುದು ಇತ್ತೀಚಿನ ದೊಡ್ಡ ಪ್ರತಿಷ್ಠೆ ಆಗಿದೆ. ಬಹುತೇಕ ನಾಯಕರಿಗೆ ಇಂತಹ ಹೂವು ಹಾಕುವುದನ್ನು ನೋಡಿದ್ದೇವೆ. ಮೇಲಾಗಿ ಜನ ಪ್ರತಿನಿಧಿಗಳು ಆದ ಹಿನ್ನೆಲೆ ಯಾರಿಗೂ ಹೂವು ಹಾಕಬೇಡಿ ಎನ್ನುವಂತಿಲ್ಲ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮೈಮೇಲೆ ಹೂವು ಹಾಕಿಸಿಕೊಂಡ ಹಿನ್ನೆಲೆ ಸಂಸದರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗುಣಮಟ್ಟದ ಹಾಗೂ ನೀರಿನಿಂದ ಸ್ವಚ್ಛ ಮಾಡಿದ ಹೂವುಗಳನ್ನು ಹಾಕುವತ್ತ ಅಭಿಮಾನಿಗಳು ಗಮನ ಹರಿಸಬೇಕಾಗಿದೆ. ಏಕೆಂದರೆ ಬೆಳೆಸುವಾಗ ಕೆಲವು ಹೂವುಗಳಿಗೆ ಔಷಧಿ ಬಳಸುತ್ತಾರೆ. ಇದು ಹೀಗೆ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆ ಇದೆ.
ವರದಿ: ಬಸವರಾಜ್ ದೊಡ್ಮನಿ
ಇದನ್ನೂ ಓದಿ:
ದಾವಣಗೆರೆ: ಸೂಳೆಕೆರೆ ಕೋಡಿ ಬಿದ್ದ ಹಿನ್ನೆಲೆ ಕೆಂಗಾಪುರ ಕಣಿವೆ ಬಿಳಚಿ ಮಧ್ಯೆ ಇರುವ ಸೇತುವೆ ಜಲಾವೃತ
ಕರ್ನಾಟಕ ಬಂದ್ ಮಧ್ಯೆ ಮರಾಠಿಗರ ವಿಜಯೋತ್ಸವ: ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ, ಸಿಹಿ ಹಂಚಿಕೆ