ಒಂದು ದಿನಕ್ಕೆ ನಾಲ್ಕರಿಂದ ಎಂಟು ಮನೆಕಳ್ಳತನ; ಪೊಲೀಸರಿಗೆ ತಲೆನೋವಾಗಿದ್ದ ಖತರ್ನಾಕ್​ ಖದೀಮರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 05, 2024 | 7:13 PM

ಅವರಿಗೆ ರಾತ್ರಿ ಅಂದರೆ ಪಂಚ ಪ್ರಾಣ. ಇಡೀ ದಿನ ನಿದ್ದೆ ಮಾಡಿ ಸಂಜೆ ಎದ್ದು ರೆಡಿಯಾಗಿ ಕುಡಿದು ತಿಂದು ಮುಗಿಸುವಷ್ಟರಲ್ಲಿ ರಾತ್ರಿ 12 ರಿಂದ ಒಂದು ಗಂಟೆ. ಬಳಿಕ ನಶೆಯಲ್ಲಿಯೇ ಸ್ವಲ್ಪ ಚೆನ್ನಾಗಿರುವ ಮನೆ ನೋಡುತ್ತಿದಂತೆ ಒಳಗೆ ನುಗ್ಗಿ ಕಳ್ಳತನಕ್ಕೆ ಮುಂದಾಗುತ್ತಿದ್ದರು. ಈ ಕಿಲಾಡಿಗಳು ಒಂದು ದಿನಕ್ಕೆ ಸರಾಸರಿ ನಾಲ್ಕರಿಂದ ಎಂಟು ಮನೆಕಳ್ಳತನ ಮಾಡುತ್ತಾರೆ. ಮೂರು ಜಿಲ್ಲೆಗಳಲ್ಲಿ ಇವರ ವಿರುದ್ದ 25ಕ್ಕೂ ಹೆಚ್ಚು ಪ್ರಕರಣಗಳಿವೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಒಂದು ದಿನಕ್ಕೆ ನಾಲ್ಕರಿಂದ ಎಂಟು ಮನೆಕಳ್ಳತನ; ಪೊಲೀಸರಿಗೆ ತಲೆನೋವಾಗಿದ್ದ ಖತರ್ನಾಕ್​ ಖದೀಮರ ಬಂಧನ
ಒಂದು ದಿನಕ್ಕೆ ನಾಲ್ಕರಿಂದ ಎಂಟು ಮನೆಕಳ್ಳತನ; ಪೊಲೀಸರಿಗೆ ತಲೆನೋವಾಗಿದ್ದ ಖತರ್ನಾಕ್​ ಖದೀಮರ ಬಂಧನ
Follow us on

ದಾವಣಗೆರೆ, ಸೆ.05: ಜಿಲ್ಲೆಯ ನ್ಯಾಮತಿ ಪೊಲೀಸ್ ಠಾಣಾ(Nyamathi Police staton) ವ್ಯಾಪ್ತಿಯ ನ್ಯಾಮತಿ ಟೌನ್, ಸುರಹೊನ್ನೆ ಗಂಜೇನಹಳ್ಳಿ, ಚಟ್ನಹಳ್ಳಿ ಗ್ರಾಮಗಳಲ್ಲಿ ಕಳೆದ ಜುಲೈ-ಆಗಸ್ಟ್ ತಿಂಗಳಿನಲ್ಲಿ ಸರಣಿ ಮನೆಗಳ್ಳತನಗಳು ಹೆಚ್ಚಾಗಿದ್ದವು. ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಇತ್ತೀಚಿಗೆ 08 ಮನೆಗಳ್ಳತನ ಪ್ರಕರಣಗಳು ದಾಖಲಾಗಿದ್ದವು. ಇದರಿಂದ ಪೊಲೀಸರ ನೆಮ್ಮದಿ ಹಾಳಾಗಿತ್ತು. ಹೀಗಾಗಿ ಎಚ್ಚೆತ್ತ ಪೊಲೀಸರು ತಂಡವನ್ನು ರಚನೆ ಮಾಡಿಕೊಂಡು ತನಿಖೆ ಕೈಗೊಂಡಿದ್ದರು. ಅದರಂತೆ ಖತರ್ನಾಕ್​ ಖದೀಮರಾದ  40 ವರ್ಷದ ಬುಡ್ಡ ರಾಮ ಅಲಿಯಾಸ್ ರಾಮು ಹಾಗೂ ಸಂತೋಷ ಟಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಬೀಗ ಹಾಕಿದ ಮನೆಗಳನ್ನೆ ಟಾರ್ಗೇಟ್ ಮಾಡುವ ಕಿಲಾಡಿ ಗ್ಯಾಂಗ್, ಒಮ್ಮೆ ಮನೆ ನೋಡಿದರೆ, ಕಮಾಯಿ ಎಷ್ಟಾಗಬಹುದು ಎಂದು ಹೇಳುತ್ತಾರೆ. ಅದರಂತೆ ಬೀಗ ಮುರಿದು ಮನೆ ದೋಚುತ್ತಿದ್ದ ಇವರ ವಿರುದ್ಧ ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ 25 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇದೀಗ ಬಂಧಿತ ಕಿಲಾಡಿಗಳನ್ನು ವಿಚಾರಣೆಗೆ ಒಳಪಡಿಸಿ ಪೊಲೀಸ್ ಭಾಷೆಯಲ್ಲಿ ಬಿಸಿ ಮುಟ್ಟಿಸಿದ್ದಾರೆ. ಈ ವೇಳೆ, ‘ತಾವುಗಳು ಧನಂಜಯ ಹಾಗೂ ಮುಖೇಶ್ ಇವರಿಬ್ಬರನ್ನು ಸೇರಿಸಿಕೊಂಡು 04 ಜನರ ತಂಡ ಮಾಡಿಕೊಂಡು ಜುಲೈ-ಆಗಸ್ಟ್ ತಿಂಗಳಲ್ಲಿ ನ್ಯಾಮತಿ ಟೌನ್, ಸುರಹೊನ್ನೆ, ಗಂಜೇನಹಳ್ಳಿ, ಚಟ್ನಹಳ್ಳಿ ಗ್ರಾಮಗಳಲ್ಲಿ ಮನೆಗಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ.

ಇದನ್ನೂ ಓದಿ:ರಾಯಚೂರು: CCTVಯಲ್ಲಿ ಸೆರೆಯಾಗಿದೆ ಲೋಕಲ್ ಬ್ರ್ಯಾಂಡ್ ಎಣ್ಣೆ ಕಳ್ಳತನ ಕೈಚಳಕ

ಈ ಆರೋಪಿತರುಗಳಿಂದ 08 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣಗಳಿಗೆ ಸಂಬಂಧಿಸಿದ ಸುಮಾರು 6,20,000 ರೂಪಾಯಿ ಮೌಲ್ಯದ ಒಟ್ಟು 80.740 ಗ್ರಾಂ ಚಿನ್ನ ಹಾಗೂ 810 ಗ್ರಾಂ ಬೆಳ್ಳಿ ಆಭರಣ ವಶಪಡಿಸಿಕೊಳ್ಳಲಾಗಿದೆ. ಇನ್ನು ನ್ಯಾಮತಿ ಪೊಲೀಸರ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ ಅವರು ಶ್ಲಾಘಿನೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Thu, 5 September 24