ದಾವಣಗೆರೆ: ನನಗೆ ಸದ್ಯಕ್ಕೆ ರಾಜಕೀಯದ ಸಹವಾಸವೇ ಬೇಡ. ಇರುವಷ್ಟು ದಿನ ಹಿಂದುತ್ವಕ್ಕಾಗಿ ಹೋರಾಡುತ್ತೇನೆ ಎಂದು ದಾವಣಗೆರೆಯಲ್ಲಿ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod Muthalik) ಹೇಳಿಕೆ ನೀಡಿದ್ದಾರೆ.
ಉಪಚುನಾವಣೆಯಲ್ಲೂ ಸ್ಪರ್ಧಿಸಲ್ಲ. ಸದ್ಯಕ್ಕೆ ರಾಜಕೀಯ ಸಹವಾಸ ಸಾಕು. ಇರುವಷ್ಟು ದಿನ ಹಿಂದುತ್ವಕ್ಕಾಗಿ ಹೋರಾಡುತ್ತೇನೆ. ಭ್ರಷ್ಟ ರಾಜಕಾರಣದಲ್ಲಿ ಪ್ರಮೋದ್ ಮುತಾಲಿಕ್ ಫಿಟ್ ಆಗಲ್ಲ. ಅವರಿಗೆ ಪ್ರಾಮಾಣಿಕರು, ಹಿಂದೂವಾದಿಗಳು, ಹೋರಾಟಗಾರರು ಬೇಡವಾಗಿದೆ. ಅವರಿಗೆ ಲೂಟಿಕೋರರು, ಜಾತಿವಾದಿಗಳು, ಗೂಂಡಾಗಳು ಬೇಕಿದ್ದಾರೆ. ಹೀಗಾಗಿ ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ. ನನಗೆ ಯಾವುದೇ ರಾಜಕೀಯ ಬೇಡ ಎಂದು ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ಬೇಸರ ಹೊರ ಹಾಕಿದ್ದಾರೆ.
ಬಿಜೆಪಿ ಟಿಕೆಟ್ ಅಕಾಂಕ್ಷೆಯಾಗಿದ್ದ ಮುತಾಲಿಕ್
ಇನ್ನು ಪ್ರಮೋದ್ ಮುತಾಲಿಕ್ ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭೆ ಉಪಚುನಾವಣೆಯ ಟಿಕೆಟ್ ಅಕಾಂಕ್ಷಿಯಾದ್ದರು. ನನಗೆ ಬಿಜೆಪಿಯಿಂದ ಟಿಕೆಟ್ ಸಿಗುವ ವಿಶ್ವಾಸವಿದೆ. ನಾನು ಪಕ್ಷೇತರನಾಗಿ ನಿಲ್ಲುವುದಿಲ್ಲ. ಟಿಕೆಟ್ ಸಿಗದಿದ್ದರೆ ಟಿಕೆಟ್ ಸಿಕ್ಕವರ ಪರ ಕೆಲಸ ಮಾಡುತ್ತೇನೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಗೊತ್ತಿಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ಒಳ್ಳೆಯದೇ ಎಂದು ಮಾತನಾಡಿದ್ದರು.
ಕಳೆದ 40 ವರ್ಷಗಳಿಂದ ಮನೆ ಬಿಟ್ಟು ಹಿಂದುತ್ವ, ಸಮಾಜ ಎಂದು ಕೆಲಸ ಮಾಡುತ್ತಿದ್ದೇನೆ. ಈಗ ನನಗೆ 66 ವರ್ಷ ಆಗಿದೆ. ಇದು ಕೊನೆಯ ಪ್ರಯತ್ನ ಎಂದು ಟಿಕೆಟ್ ಕೇಳಿದ್ದೇನೆ. ಮೂರು ವರ್ಷ ಸೇವೆ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇನೆ ಎಂದು ಹೇಳಿದ್ದರು. ಆದ್ರೆ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ. ಬದಲಿಗೆ ದಿವಂಗತ ಸುರೇಶ್ ಅಂಗಡಿ ಪತ್ನಿ ಮಂಗಳಾ ಸುರೇಶ್ ಅಂಗಡಿಯವರಿಗೆ ಟಿಕೆಟ್ ನೀಡಲಾಗಿತ್ತು. ಹಾಗೂ ಅದರಲ್ಲಿ ಅವರು ಗೆದ್ದು ಬೀಗಿದರು.
ಇದನ್ನೂ ಓದಿ: ನನ್ನ ತೋಟದ ಮನೆಯಲ್ಲಿ ವೃದ್ಧಾಶ್ರಮ ಅಥವಾ ಅನಾಥಾಶ್ರಮ ನಿರ್ಮಿಸುವೆ: ಎಚ್ಡಿಕೆ