ವಿವೇಕಾನಂದ, ಗಾಂಧೀಜಿ ಮತಾಂತರ ವಿರೋಧಿಸಿದ್ದರು: ಪ್ರಮೋದ್ ಮುತಾಲಿಕ್
Yadgir: ವಿವೇಕಾನಂದ, ಗಾಂಧೀಜಿ ಮತಾಂತರ ವಿರೋಧಿಸಿದ್ದರು. ಬ್ರಿಟಿಷ್ ಕಾಲದಿಂದಲೂ ಮತಾಂತರ ನಡೆದಿದೆ. ಮತಾಂತರ ಕ್ಯಾನ್ಸರ್ ಇದ್ದಂತೆ. ಕ್ರಿಶ್ಚಿನ್ನರಿಗೆ ಎಚ್ಚರಿಕೆ ಕೊಡುವ ಕೆಲಸ ಆಗಬೇಕಿದೆ ಎಂದು ಮುತಾಲಿಕ್ ಹೇಳಿದ್ದಾರೆ.
ಯಾದಗಿರಿ: ಮತಾಂತರ ಮಾಡಿದ ಆರೋಪದಡಿ ನಾಲ್ವರ ವಿರುದ್ಧ ಪ್ರಕರಣ ದಾಖಲು ಮಾಡಲಾದ ಘಟನೆ ಯಾದಗಿರಿ ಜಿಲ್ಲೆ ಸೈದಾಪುರ ಠಾಣೆಯಲ್ಲಿ ನಡೆದಿದೆ. ನೀಲಹಳ್ಳಿ ಗ್ರಾಮಸ್ಥರ ದೂರು ಆಧರಿಸಿ ಪ್ರಕರಣ ದಾಖಲು ಮಾಡಲಾಗಿದೆ. ಕ್ರಿಶ್ಚಿಯನ್ ಮಷಿನರಿಗಳಿಂದ ಮತಾಂತರ ಆರೋಪ ಕೇಳಿಬಂದಿದೆ. ಈ ಸಂಬಂಧ ನಾಲ್ಕು ಮಂದಿ ಮೇಲೆ ಕೇಸ್ ದಾಖಲಿಸಲಾಗಿದೆ. ಯಾದಗಿರಿ ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಯಾದಗಿರಿ ತಾಲೂಕಿನ ನೀಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿತ್ತು ಎನ್ನಲಾಗಿದೆ. ದಲಿತ ಸಮುದಾಯದವರಿಗೆ ಮತಾಂತರ ಮಾಡಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಕುಂಕುಮ ಹಚ್ಚಬಾರದು ದೇವಾಲಯಕ್ಕೆ ಹೋಗಬಾರದು ಎಂದು ಹೇಳಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಸ್ಥಳೀಯರು ವಿರೋಧಿಸಿದ್ದಕ್ಕೆ ಸ್ಥಳೀಯರ ಜೊತೆ ವಾಗ್ವಾದ ನಡೆಸಿರುವುದಾಗಿಯೂ ಮಾಹಿತಿ ಲಭ್ಯವಾಗಿತ್ತು. ನೀಲಹಳ್ಳಿ ಗ್ರಾಮಸ್ಥರಿಂದ ದೂರು ದಾಖಲು ಮಾಡಲಾಗಿದ್ದು ಅದರ ಬೆನ್ನಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಧಾರವಾಡ: ಮತಾಂತರ ಕ್ಯಾನ್ಸರ್ ಇದ್ದಂತೆ: ಪ್ರಮೋದ್ ಮುತಾಲಿಕ್ ಮತಾಂತರ ಕ್ಯಾನ್ಸರ್ ಇದ್ದಂತೆ, ಆಂಗ್ಲರ ಕಾಲದಿಂದಲೂ ಇದೆ. ರಾಜ್ಯದಲ್ಲಿ ಮತಾಂತರ ತಡೆ ಕಾನೂನು ಜಾರಿಗೆ ತರಬೇಕು. ಅದರೊಂದಿಗೆ ಪೊಲೀಸರ ಮೂಲಕ ಮತಾಂತರ ತಡೆಯಬೇಕು. ಗೋಹತ್ಯೆ ನಿಷೇಧ ಕಾಯ್ದೆ ಇದೆ, ಆದರೂ ಗೋ ಹತ್ಯೆ ನಿಂತಿಲ್ಲ. ಇದೇ ರೀತಿ ಮತಾಂತರ ತಡೆ ಕಾನೂನು ಆಗೋದು ಬೇಡ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಬ್ಯಾಡರಹಳ್ಳಿಯಲ್ಲಿ ಮತಾಂತರ ನಡೆಯುತ್ತಿರೋದು ಬೆಳಕಿಗೆ ಬಂದಿದೆ. ವೀಡಿಯೋ ಕೂಡ ವೈರಲ್ ಆಗಿದೆ. ಈಗಾಗಲೇ ಸಂಬಂಧಿಸಿದವರ ಬಂಧನವಾಗಿದೆ. ಮತಾಂತರ ತಡೆ ಕಾನೂನು ಜಾರಿಗೆ ತರಬೇಕು. ವಿವೇಕಾನಂದ, ಗಾಂಧೀಜಿ ಮತಾಂತರ ವಿರೋಧಿಸಿದ್ದರು. ಬ್ರಿಟಿಷ್ ಕಾಲದಿಂದಲೂ ಮತಾಂತರ ನಡೆದಿದೆ. ಮತಾಂತರ ಕ್ಯಾನ್ಸರ್ ಇದ್ದಂತೆ. ಕ್ರಿಶ್ಚಿನ್ನರಿಗೆ ಎಚ್ಚರಿಕೆ ಕೊಡುವ ಕೆಲಸ ಆಗಬೇಕಿದೆ ಎಂದು ಮುತಾಲಿಕ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮತಾಂತರದ ಆರೋಪ; 70 ರಿಂದ 80 ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿದ ವಿಡಿಯೋ ವೈರಲ್
ಇದನ್ನೂ ಓದಿ: ಹಾಸನದಲ್ಲಿ ಮತಾಂತರಕ್ಕೆ ಯತ್ನ ಆರೋಪ; ಹಿಂದೂಪರ ಸಂಘಟನೆಗಳಿಂದ ತರಾಟೆ; ಕೇಸ್ ದಾಖಲು
Published On - 4:43 pm, Tue, 28 September 21