ದಾವಣಗೆರೆ: ಭದ್ರಾ ಡ್ಯಾಂ ನಿಂದ ತುಂಗಭದ್ರಾ ಡ್ಯಾಂಗೆ ನೀರು ಬಿಟ್ಟರೆ, ದಾವಣಗೆರೆ ಮತ್ತು ಶಿವಮೊಗ್ಗ ಭಾಗದ ಜನರು ದಂಗೆ ಎಳಲಿದ್ದು, ಜಿಲ್ಲೆಯಲ್ಲಿ ಬಿಜೆಪಿ ಸರ್ವನಾಶ ಆಗುತ್ತದೆ ಎಂದು ದಾವಣಗೆರೆಯಲ್ಲಿ ರೈತರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗದ ಭದ್ರಾ ಡ್ಯಾಂನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಇಲ್ಲ, ಬೇಸಿಗೆ ಬೆಳೆಗೆ ನೀರು ಬೇಕು. ಇಂತಹ ಪರಿಸ್ಥಿತಿಯಲ್ಲಿ ಸಿಎಂ ಚುನಾವಣೆಯ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ತುಂಗಭದ್ರ ಡ್ಯಾಂಗೆ 7 ಟಿಎಂಸಿ ನೀರು ಬಿಡುವುದು ಸಾದ್ಯವಿಲ್ಲ ಎಂದಿದ್ದಾರೆ.
ಹಾಲಿ ಭದ್ರಾ ಡ್ಯಾಂನಲ್ಲಿ 57.491 ಟಿಎಂಸಿ ನೀರಿದೆ. ಇದರಲ್ಲಿ 13.832 ಟಿಎಂಸಿ ನೀರು ಡೆಡ್ ಸ್ಟೋರೇಜ್. ಡ್ಯಾಂ ನಲ್ಲಿ 4.18 ಟಿಎಂಸಿಯಷ್ಟು ಹೂಳು ತುಂಬಿಕೊಂಡಿದೆ. ಉಳಿದ ನೀರಿನ ಪ್ರಮಾಣ 39.479 ಟಿಎಂಸಿ ನೀರು. ಬೇಸಿಗೆ ಹಂಗಾಮಿಗೆ 1.07 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಒಂದು ನೂರು ದಿನ ನೀರು ಕೊಡಬೇಕು. ಇದಕ್ಕೆ 42.172 ಟಿಎಂಸಿ ನೀರು ಬೇಕು. ನಮಗೆ ಎರಡು ಟಿಎಂಸಿ ನೀರಿನ ಕೊರತೆ ಆಗಲಿದೆ. ತುಂಗಭದ್ರಾ ಡ್ಯಾಂಗೆ ನೀರು ಬಿಟ್ಟರೇ ರೈತರ ದಂಗೆ ಆಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ದಾವಣಗೆರೆ: ಇದ್ದಕ್ಕಿದ್ದಂತೆ ಶೇ 100ರ ರಷ್ಟು ಹೆಚ್ಚಾದ ಟೋಲ್ ದರ, ಸವಾರರು ಗರಂ
ಈ ಹಿಂದೆ ಕೂಡ ಅನೇಕ ಬಾರಿ ಕೃಷಿಗಾಗಿ ತುಂಗಭದ್ರಾ ಜಲಾಶಯಕ್ಕೆ ಆರು ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ನೀರು ಕೇಳಿತ್ತು, ಸರಕಾರ ಒಂದು ಹನಿ ನೀರನ್ನು ನಮ್ಮ ಡ್ಯಾಂನಿಂದ ಹರಿಸಬಾರದು ಎಂದು ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿ ಮತ್ತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿತ್ತು. ಇದೀಗ ಮತ್ತೆ ತುಂಗಭದ್ರ ಡ್ಯಾಂಗೆ ಎಳು ಟಿಎಂಸಿ ನೀರು ಬಿಡುವಂತೆ ಆಗ್ರಹಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ