ಭದ್ರಾ ಡ್ಯಾಂ ನಿಂದ ತುಂಗಭದ್ರಾಗೆ ನೀರು ಬಿಟ್ಟರೆ ದಾವಣಗೆರೆ ಶಿವಮೊಗ್ಗದಲ್ಲಿ ಬಿಜೆಪಿ ಸರ್ವನಾಶ; ರೈತರ ಎಚ್ಚರಿಕೆ
ಶಿವಮೊಗ್ಗದ ಭದ್ರಾ ಡ್ಯಾಂ ನಿಂದ ಹೊಸಪೇಟೆ ತುಂಗಭದ್ರ ಡ್ಯಾಂಗೆ ಎಳು ಟಿಎಂಸಿ ನೀರು ಬಿಡುವಂತೆ ಆಗ್ರಹಿಸಿದ್ದು, ಇದಕ್ಕೆ ಭಾರತೀಯ ರೈತ ಒಕ್ಕೂಟ ಸಂಘದವರು ಭದ್ರಾ ಡ್ಯಾಂ ನಿಂದ ತುಂಗಭದ್ರ ಡ್ಯಾಂ ನೀರು ಹರಿಸಿದರೆ ದಾವಣಗೆರೆ, ಶಿವಮೊಗ್ಗದ ರೈತರು ಬೆಳೆದ ಅಡಿಕೆ, ತೆಂಗು ನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ತುಂಗಭದ್ರ ಅಚ್ಚಕಟ್ಟು ಪ್ರದೇಶದ ಜನ ಪ್ರತಿನಿಧಿಗಳು ಶಿವಮೊಗ್ಗದ ಭದ್ರಾ ಡ್ಯಾಂ ನಿಂದ ಹೊಸಪೇಟೆ ತುಂಗಭದ್ರ ಡ್ಯಾಂಗೆ ಎಳು ಟಿಎಂಸಿ ನೀರು ಬಿಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ ದಾವಣಗೆರೆ ಭಾರತೀಯ ರೈತ ಒಕ್ಕೂಟ ಸಂಘದವರು ಭದ್ರಾ ಡ್ಯಾಂ ನಿಂದ ತುಂಗಭದ್ರ ಡ್ಯಾಂ ನೀರು ಹರಿಸದಂತೆ ಆಗ್ರಹಿಸಿದ್ದು, ಭದ್ರಾ ಡ್ಯಾಂ ನಲ್ಲಿ ಈಗ 47 ಟಿಎಂಸಿ ನೀರಿದೆ. 10 ಸಿಎಂಸಿ ನೀರು ಡೆಡ್ ಸ್ಟೋರೇಜ್, ಇನ್ನು 7 ಟಿಎಂಸಿ ನೀರು ಕುಡಿಯುವ ನೀರಿಗೆ ಬೇಕು. ಇಂತಹ ಪರಿಸ್ಥಿತಿಯಲ್ಲಿ ತುಂಗಭದ್ರ ಡ್ಯಾಂ ಗೆ ಎಳು ಟಿಎಂಸಿ ನೀರು ಬಿಟ್ಟರೇ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಅಡಿಕೆ, ತೆಂಗು ಹಾಗೂ ಭತ್ತದ ಬೆಳೆ ಸರ್ವ ನಾಶ ಆಗಲಿದೆ ಎಂದು ಭಾರತೀಯ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಮನೂರ ಲಿಂಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈ ಹಿಂದೆ ಕೂಡ ಅನೇಕ ಬಾರಿ ಕೃಷಿಗಾಗಿ ತುಂಗಭದ್ರಾ ಜಲಾಶಯಕ್ಕೆ ಆರು ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಭದ್ರಾ ಜಲಾಶಯದಿಂದ ನೀರು ಕೇಳಿತ್ತು, ಸರಕಾರ ಒಂದು ಹನಿ ನೀರನ್ನು ನಮ್ಮ ಡ್ಯಾಂನಿಂದ ಹರಿಸಬಾರದು ಎಂದು ಭದ್ರಾ ಜಲಾಶಯ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿ ಮತ್ತು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿತ್ತು. ಇದೀಗ ಮತ್ತೆ ತುಂಗಭದ್ರ ಡ್ಯಾಂಗೆ ಎಳು ಟಿಎಂಸಿ ನೀರು ಬಿಡುವಂತೆ ಆಗ್ರಹಿಸಿದ್ದಾರೆ. ಈಗ ಸಧ್ಯ 47 ಟಿಎಂಸಿ ನೀರಿದೆ. ಅದರಲ್ಲಿ 10 ಟಿಎಂಸಿ ಡೆಡ್ ವೆಸ್ಟ್ ವಾಸ್ತವ ಹೀಗಿರುವಾಗ ತುಂಗಭದ್ರಾ ಜಲಾಶಯಕ್ಕೆ 7 ಟಿಎಂಸಿ ನೀರು ಬಿಟ್ಟರೆ ಇಲ್ಲಿನ ರೈತರು ಬೆಳೆದ ಬೆಳೆಗಳು ನಾಶವಾಗಲಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:04 am, Thu, 9 February 23