AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Davanagere: ಕಂತೆ ಕಂತೆ ದುಡ್ಡು ಕೊಟ್ರೆ ಮಾತ್ರ ಇಲ್ಲಿ ಕೆಲಸ; ಲೋಕೋಪಯೋಗಿ ಇಲಾಖೆಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಭ್ರಷ್ಟಾಚಾರ

ಬಿಲ್ ಪಾಸ್ ಆಗಿಲ್ಲ ಅಂತಾ ಓರ್ವ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾದ. ಇದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ತಲೆ ದಂಡವಾಗಬೇಕಾಯಿತು. ಇಷ್ಟಾದ್ರು ಸಹ ರಾಜ್ಯದಲ್ಲಿ ಬದಲಾವಣೆ ಬರುತ್ತಿಲ್ಲ. ಇದಕ್ಕೆ ಹೇಳಿ ಮಾಡಿಸಿದಂತಿದೆ ದಾವಣಗೆರೆ ಲೋಕೋಪಯೋಗಿ ಇಲಾಖೆ. ಕಂತೆ ಕಂತೆ ದುಡ್ಡು ಕೊಟ್ರೆ ಮಾತ್ರ ಇಲ್ಲಿ ಕೆಲ್ಸಾ. ಇಂತಹದೊಂದು ವಿಡಿಯೋ ಬಿಡುಗಡೆ ಆಗಿದೆ.

Davanagere: ಕಂತೆ ಕಂತೆ ದುಡ್ಡು ಕೊಟ್ರೆ ಮಾತ್ರ ಇಲ್ಲಿ ಕೆಲಸ; ಲೋಕೋಪಯೋಗಿ ಇಲಾಖೆಯಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಭ್ರಷ್ಟಾಚಾರ
ದಾವಣಗೆರೆ ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Feb 09, 2023 | 1:09 PM

Share

ದಾವಣಗೆರೆ: ಕುರ್ಚಿ ಮೇಲೆ ಕುಳಿತು ಮಾತಾಡುತ್ತಿರುವ ಈ ವ್ಯಕ್ತಿಯ ಹೆಸರು ನರೇಂದ್ರ ಬಾಬು ಅಂತಾ. ಇತ ದಾವಣಗೆರೆ ಲೋಕೋಪಯೋಗಿ ಇಲಾಖೆಯ ಎಇಇ, ಯಾರಾದ್ರು ಲಂಚಾ ಕೊಡುವಾಗ ಸ್ವಲ್ಪ ಕಡಿಮೆ ಕೊಟ್ಟರೇ ಕೆಂಡದಂತಹ ಕೋಪ. ದುಡ್ಡು ಕೈಯಿಂದ ಮುಟ್ಟಲ್ಲ. ನಾ ಈ ಕುರ್ಚಿಗೆ ಬರಬೇಕಾದ್ರೆ 25 ಲಕ್ಷ ಹಣವನ್ನ ಕೊಟ್ಟು ಬಂದಿರುವೆ. ನಿನ್ನ ಈ 20 ರಿಂದ 30 ಸಾವಿರ ಯಾವ ಲೆಕ್ಕಾ ಎನ್ನುತ್ತಾರೆ. ಇವರಿಗೆ ಸಹಾಯ ನೀಡುತ್ತಿರುವ ಸಹಾಯಕ ಇಂಜಿನೀಯರ್ ವೀರಪ್ಪ ಹಾಗೂ ವಿಜಯಕುಮಾರ ಅಂತೆ. ಹೀಗೆ ಕಚೇರಿಯಲ್ಲಿ ಬಹಿರಂಗವಾಗಿಯೇ ಭ್ರಷ್ಟಾಚಾರ ನಡೆಯುತ್ತಿದೆ. ಮೇಲಾಗಿ ಇತ 25 ಲಕ್ಷ ಹಣವನ್ನ ಕೊಟ್ಟಿದ್ದು ಯಾರಿಗೆ? ಆ ಪುಣ್ಯತ್ಮನ ಹೆಸರು ಎನು, ಲೋಕೋಪಯೋಗಿ ಸಚಿವನಾ, ಇಲ್ಲ ಜಿಲ್ಲಾ ಉಸ್ತುವಾರಿ ಸಚಿವನಾ ಅಥವಾ ಸಂಸದನಾ ಹೀಗೆ ಹತ್ತು ಹಲವಾರು ಪ್ರಶ್ನೆಗಳು ಹುಟ್ಟುತ್ತವೆ. ಇವೆಲ್ಲಾ ವಿಡಿಯೋದಲ್ಲಿ ದಾಖಲಾಗಿದೆ. ಇದೇ ವಿಡಿಯೋ ಇಟ್ಟುಕೊಂಡು ಶ್ರೀರಾಮಸೇನೆ ಕಾರ್ಯಕರ್ತರು ಲೋಕಾಯುಕ್ತರಿಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ. ಮೇಲಾಗಿ ಇಲ್ಲಿ ಕೆಲ್ಸಾ ಆಗಬೇಕು ಎಂದರೆ ದುಡ್ಡು ಕೊಡಲೇ ಬೇಕು.

ಕಳೆದ ಹಲವಾರು ದಿನಗಳಿಂದ ನರೇಂದ್ರ ಬಾಬು ಇಲ್ಲಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಕಾಮಗಾರಿ ಇಲ್ಲಿ ನಡೆಯುತ್ತಿವೆ. 115ಕ್ಕೂ ಹೆಚ್ಚು ಗುತ್ತಿಗೆದಾರರು ಕೆಲ್ಸಾ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಕೆಲವರು ಸರ್ಕಾರಿ ಹಾಸ್ಟೇಲ್​ಗಳಿಗೆ ಕಟ್ಟಡಗಳನ್ನ ಬಾಡಿಗೆ ಕೊಡುತ್ತಾರೆ. ಹೀಗೆ ಬಾಡಿಗೆ ಕೊಡಬೇಕಾದ್ರೆ ನರೇಂದ್ರಬಾಬು ಅವರು ಪರಿಶೀಲನೆ ಮಾಡಿ ಅದು ಯೋಗ್ಯವಿದೆಯಾ. ಅಲ್ಲಿ ಮಕ್ಕಳಿಗೆ ವಾಸಿಸಲು ಗಾಳಿ ಬೆಳಕು ಅಗತ್ಯಕ್ಕೆ ತಕ್ಕಂತೆ ಬರುತ್ತದೆಯಾ ಎಂಬಿತ್ಯಾದಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ಕೊಡಬೇಕು. ಇಂತಹ ಪ್ರಮಾಣ ಪತ್ರಕೊಡಲು ಲಂಚ ಕೇಳಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದೊಂದೆ ಅಲ್ಲ, ಯಾವುದೇ ಕಾಮಗಾರಿ ಆದರೂ ಸಹ ಇಲ್ಲಿ ಕಡ್ಡಾಯವಾಗಿ ಲಂಚ ಕೊಡಲೇ ಬೇಕು ಎಂಬ ಅಲಿಖಿತ ನಿಯಮವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:ಗದಗದಲ್ಲಿ ಇಂದು ಪ್ರಜಾಧ್ವನಿ ಬೃಹತ್​ ಸಮಾವೇಶ: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಜನರ ಮುಂದಿಡಲು ಕಾಂಗ್ರೆಸ್​ ಪ್ಲಾನ್

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅವರ ಮೇಲೆ ಬಂದಿರುವ ಆರೋಪಗಳಿಗೆ ಉತ್ತರ ನೀಡಲು ನರೇಂದ್ರಬಾಬು ಕಚೇರಿಯಲ್ಲಿ ಲಭ್ಯವಿರಲಿಲ್ಲ. ಜೊತೆಗೆ ಅವರ ಪೋನ್ ಸಹ ಸಿಗಲಿಲ್ಲ. ಇದೇ ಕಾರಣಕ್ಕೆ ಶ್ರೀರಾಮ ಸೇನೆಯ ಕಾರ್ಯ ಕರ್ತರು ನಿರಂತರವಾಗಿ ಹೋರಾಟ ಮಾಡಿ ದಾವಣಗೆರೆ ಹಳೇ ಪಿಬಿ ರಸ್ತೆಯ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಂದೆ ಹೋಗಿ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದು. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಇಷ್ಟಕ್ಕೂ ದೂರು ದಾಖಲಾದ ಮೇಲಾದ್ರು ಇವರು ಯಾರಿಗೆ 25 ಲಕ್ಷ ರೂಪಾಯಿ ಕೊಟ್ಟು ಇಲ್ಲಿಗೆ ಬಂದು ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂಬ ಸತ್ಯ ಹೊರಬರಬೇಕಾಗಿದೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ