ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಆಗಮನ ವಿಳಂಬ, ರೊಚ್ಚಿಗೆದ್ದ ಅಭಿಮಾನಿಗಳು: ನೂರಾರು ಕುರ್ಚಿಗಳು ಪೀಸ್ ಪೀಸ್
ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ ಆಗಮಿಸಬೇಕಿತ್ತು. ಆದರೆ ಅವರ ಆಗಮನದಲ್ಲಿ ಸ್ವಲ್ಪ ವಿಳಂಬವಾದ ಹಿನ್ನೆಲೆ ಅವರ ಅಭಿಮಾನಿಗಳು ರೊಚ್ಚಿಗೆದ್ದು, ಕಿಚ್ಚಾ, ಕಿಚ್ಚಾ ಎಂದು ಘೋಷಣೆ ಕೂಗಿದ್ದಾರೆ.
ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿ ರಾಜನಹಳ್ಳಿ ವಾಲ್ಮೀಕಿ ಮಠದ ಐದನೇ ವರ್ಷದ ಉತ್ಸವಕ್ಕೆ ನಿನ್ನೆ (ಫೆ. 08) ಅದ್ಧೂರಿ ಚಾಲನೆ ದೊರೆತಿದೆ. ಇಂದು (ಫೆ. 09) ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್ (Actor Sudeep) ಆಗಮಿಸಬೇಕಿತ್ತು. ಆದರೆ ಅವರ ಆಗಮನದಲ್ಲಿ ಸ್ವಲ್ಪ ವಿಳಂಬವಾದ ಹಿನ್ನೆಲೆ ಅವರ ಅಭಿಮಾನಿಗಳು ರೊಚ್ಚಿಗೆದ್ದು, ಕಿಚ್ಚಾ, ಕಿಚ್ಚಾ ಎಂದು ಘೋಷಣೆ ಕೂಗಿದ್ದಾರೆ. ಜೊತೆಗೆ ಆಕ್ರೋಶಗೊಂಡಿದ್ದ ಅಭಿಮಾನಿಗಳು ನೂರಾರು ಕುರ್ಚಿ ಮುರಿದು ಹಾಕಿದ್ದಾರೆ. ಇನ್ನು ನಾಲ್ಕೈದು ಸಲ ಲಾಠಿ ಪ್ರಹಾರ ನಡೆಸಿದರೂ ಅಭಿಮಾನಿಗಳು ಸುಮ್ಮನಾಗಿಲ್ಲ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಸುದೀಪ್ ಆಗಮನದ ಬಗ್ಗೆ ಕಾರ್ಯಕ್ರಮದ ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ನೆಚ್ಚಿನ ನಟನನ್ನು ನೋಡಲು ನೂರಾರು ಅಭಿಮಾನಿಗಳು ಕಾಯುತ್ತಿದ್ದಾರೆ.
ವಾಲ್ಮೀಕಿ ಪ್ರಸನಾನಂದ ಪುರಿ ಸ್ವಾಮೀಜಿ ಸ್ಪಷ್ಟನೆ
ಈ ವಿಚಾರವಾಗಿ ವಾಲ್ಮೀಕಿ ಪ್ರಸನಾನಂದ ಪುರಿ ಸ್ವಾಮೀಜಿ ಮಾತನಾಡಿ, ನಟ ಸುದೀಪ್ ಜಾತ್ರೆಗೆ ಬರಲ್ಲವೆಂದು ಸ್ಪಷ್ಟನೆ ನೀಡಿದರು. ದಾವಣಗೆರೆ SP ರಿಷ್ಯಂತ್ ಮನವಿ ಮೇರೆಗೆ ಶ್ರೀಗಳು ಸ್ಪಷ್ಟನೆ ನೀಡಿದರು. ಹೆಲಿಕಾಪ್ಟರ್‌ನಲ್ಲಿ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಬರಬೇಕಿತ್ತು. ಬೆಂಗಳೂರಿನಲ್ಲಿ ಏರ್‌ಶೋ ಹಿನ್ನೆಲೆ ಹೆಲಿಕಾಪ್ಟರ್‌ನಲ್ಲಿ ಬರಲು ಆಗಿಲ್ಲ. ಹೀಗಾಗಿ ವಾಲ್ಮೀಕಿ ಜಾತ್ರೆಗೆ ನಟ ಸುದೀಪ್ ಬರಲ್ಲವೆಂದು ತಿಳಿಸಿದರು. ವಾಲ್ಮೀಕಿ ಪ್ರಸನ್ನಾನಂದಪುರಿಶ್ರೀ ಸ್ಪಷ್ಟನೆ ಬಳಿಕ ಬೆಂಬಲಿಗರು ಸುಮ್ಮನಾದರು. ಒಬ್ಬೊಬ್ಬರಾಗಿ ಜಾತ್ರೆಯಿಂದ ವಾಪಸಾದರು.
ಇದನ್ನೂ ಓದಿ: Shikhar Dhawan: ಕಿಚ್ಚ ಸುದೀಪ್-ಶಿಖರ್ ಧವನ್ ನಡುವಿನ ಆತ್ಮೀಯತೆಗೆ ಈ ಫೋಟೋಗಳೇ ಸಾಕ್ಷಿ; ಇಲ್ಲಿದೆ ಗ್ಯಾಲರಿ
ವಾಲ್ಮೀಕಿ ಜಾತ್ರೆಗೆ ಒಂದು ದೊಡ್ಡ ಶಕ್ತಿ ಬಂದಿದೆ: ಸಿಎಂ ಬೊಮ್ಮಾಯಿ
ವಾಲ್ಮೀಕಿ ಜಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ವಾಲ್ಮೀಕಿ ಜಾತ್ರೆಗೆ ಒಂದು ದೊಡ್ಡ ಶಕ್ತಿ ಬಂದಿದೆ. ವಾಲ್ಮೀಕಿ ಸಮಾಜವನ್ನ ಯಾರು ಅಲಿಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ವಿಜಯ ನಗರದ ಸಾಮ್ರಾಜ್ಯವನ್ನ ರಕ್ಷಣೆ ಮಾಡಿದ್ದು ವಾಲ್ಮೀಕಿ ಸಮಾಜ. ಹೈದರಾಲಿಗೆ ಪಾಠ ಕಲಿಸಿದ್ದು ಮದರಕರಿನಾಯಕ. ವಾಲ್ಮೀಕಿ ಅಂದ್ರೆ ಪರಿವರ್ತನೆ. ವಾಲ್ಮೀಕಿ ರಾಮಾಯಣದಲ್ಲಿ ಜೀವನ ಕ್ರಮ ಹಾಗೂ ಜೀವನ ಶೈಲಿ ಸಂಬಂಧ ದ ಬಗ್ಗೆ ಹೇಳಿದ್ದಾರೆ ಎಂದು ಹೇಳಿದರು.
ನಟ ಸುದೀಪ್ ಬಗ್ಗೆ ಮೆಚ್ಚುಗೆ ಮಾತನಾಡಿದ ಸಿಎಂ ಬೊಮ್ಮಾಯಿ
ಪರಿಶಿಷ್ಟ ಪಂಗಡದ ಮೇಲೆ ಪ್ರಧಾನಿಗೆ ಅಪಾರ ಗೌರವವಿದೆ. ರಾಷ್ಟ್ರಪತಿಯಂತ ಹುದ್ದೆಯನ್ನ ಬುಡಕಟ್ಟು ಮಹಿಳೆಗೆ ನೀಡಿದ್ದಾರೆ. ನಾನು ಒಂದು ರೀತಿ ವಾಲ್ಮೀಕಿ ಸಮಾಜ ನನ್ನ ಸಮಾಜ. ನನ್ನ ಜೀವನದ ಕೊನೆಯ ಉಸಿರು ಇರುವ ತನಕ ವಾಲ್ಮೀಕಿ ಸಮಾಜದ ಹಿತಕ್ಕಾಗಿ ಕೆಲಸ ಮಾಡುತ್ತೇನೆ. ನಿಮಗೆಲ್ಲ ಸುದೀಪ್ ನನಗೆ ಆತ ದೀಪು. ಆತ ಸಣ್ಣ ಹುಡುಗನಾಗಿದ್ದಾಗಿನಿಂದ ಆತನ ಸಂಬಂಧವಿದೆ. ನಾನು ಪೋನ್ ಮಾಡಿ ಮಠಕ್ಕೆ ಬರುವಂತೆ ಹೇಳುವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.