- Kannada News Photo gallery Kichcha Sudeep and Shikhar Dhawan spend good time together: Photos go viral
Shikhar Dhawan: ಕಿಚ್ಚ ಸುದೀಪ್-ಶಿಖರ್ ಧವನ್ ನಡುವಿನ ಆತ್ಮೀಯತೆಗೆ ಈ ಫೋಟೋಗಳೇ ಸಾಕ್ಷಿ; ಇಲ್ಲಿದೆ ಗ್ಯಾಲರಿ
Kichcha Sudeep | Shikhar Dhawan: ಶಿಖರ್ ಧವನ್ ಮತ್ತು ಕಿಚ್ಚ ಸುದೀಪ್ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Updated on: Feb 06, 2023 | 5:11 PM

ನಟ ಕಿಚ್ಚ ಸುದೀಪ್ ಅವರಿಗೆ ಸಿನಿಮಾದ ಜೊತೆಗೆ ಕ್ರಿಕೆಟ್ ಬಗ್ಗೆಯೂ ಅಪಾರ ಆಸಕ್ತಿ ಇದೆ. ಸಮಯ ಸಿಕ್ಕಾಗಲೆಲ್ಲ ಅವರು ಕ್ರಿಕೆಟ್ ಆಗುತ್ತಾರೆ. ಕ್ರಿಕೆಟ್ ಲೋಕದ ಅನೇಕರ ಜೊತೆಗೆ ಅವರಿಗೆ ಆತ್ಮೀಯ ಒಡನಾಟ ಇದೆ.

ಕ್ರಿಕೆಟರ್ ಶಿಖರ್ ಧವನ್ ಅವರನ್ನು ಕಿಚ್ಚ ಸುದೀಪ್ ಅವರು ಭೇಟಿ ಆಗಿದ್ದಾರೆ. ಈ ಸೆಲೆಬ್ರಿಟಿಗಳ ಸಮಾಗಮದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರೂ ಕೂಡ ಪರಸ್ಪರ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕಿಚ್ಚ ಸುದೀಪ್ ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಸಲುವಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಫೆಬ್ರವರಿ 18ರಂದು ಈ ಪಂದ್ಯಗಳು ಆರಂಭ ಆಗಲಿವೆ. ಅದಕ್ಕೂ ಮುನ್ನ ಅವರು ಶಿಖರ್ ಧವನ್ ಅವರನ್ನು ಭೇಟಿ ಆಗಿರುವುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಶಿಖರ್ ಧವನ್ ಮತ್ತು ಕಿಚ್ಚ ಸುದೀಪ್ ಅವರು ಜೊತೆಯಾಗಿ ಒಂದಷ್ಟು ಸಮಯ ಕಳೆದಿದ್ದಾರೆ. ‘ಎಂಥ ಅತ್ಯುತ್ತಮ ಮತ್ತು ಪರಿಪೂರ್ಣ ರಾತ್ರಿ. ಮುಂಬರುವ ಐಪಿಎಲ್ ಪಂದ್ಯಕ್ಕೆ ಶಿಖರ್ ಧವನ್ ಅವರಿಗೆ ನನ್ನ ಶುಭ ಹಾರೈಕೆಗಳು’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಸುದೀಪ್ ಹಂಚಿಕೊಂಡಿರುವ ಈ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಇಬ್ಬರು ಫೇವರೇಟ್ ಸೆಲೆಬ್ರಿಟಿಗಳನ್ನು ಒಂದೇ ಫ್ರೇಮ್ನಲ್ಲಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
























