ಮಂಗಳೂರಿನಲ್ಲಿ ನಂದಿನಿ ನದಿ ಹಬ್ಬ: ಬಿಂದಾಸ್ ಮೂಡ್‌ನಲ್ಲಿ ಎಂಜಾಯ್ ಮಾಡಿದ್ರು ಜನ, ಚಿತ್ರಗಳಲ್ಲಿ ನೋಡಿ
ಮಂಗಳೂರಿನ ನಂದಿನಿ ನದಿ ನಿನ್ನೆ ಭಾನುವಾರ ಫುಲ್ ಕಲರ್‌ಫುಲ್ ಆಗಿತ್ತು. ನದಿಯಲ್ಲಿ ನಡೆದ ಹಲವು ಸ್ಪರ್ಧೆಗಳು ನೋಡುಗರ ಕಣ್ಮನ ಸೆಳೆದಿತ್ತು. ಅದ್ದೂರಿಯಾಗಿ ನಡೆದ ಈ ರಿವರ್ ಫೆಸ್ಟಿವಲ್ ಹಲವು ವಿಶೇಷಗಳಿಗೆ ಸಾಕ್ಷಿಯಾಗಿತ್ತು. ಅದ್ರ ಒಂದು ಝಲಕ್ ಇಲ್ಲಿದೆ.
Updated on: Feb 06, 2023 | 3:09 PM

ಮಂಗಳೂರಿನ ನಂದಿನಿ ನದಿ ನಿನ್ನೆ ಭಾನುವಾರ ಫುಲ್ ಕಲರ್‌ಫುಲ್ ಆಗಿತ್ತು. ನದಿಯಲ್ಲಿ ನಡೆದ ಹಲವು ಸ್ಪರ್ಧೆಗಳು ನೋಡುಗರ ಕಣ್ಮನ ಸೆಳೆದಿತ್ತು. ಅದ್ದೂರಿಯಾಗಿ ನಡೆದ ಈ ರಿವರ್ ಫೆಸ್ಟಿವಲ್ ಹಲವು ವಿಶೇಷಗಳಿಗೆ ಸಾಕ್ಷಿಯಾಗಿತ್ತು. ಅದ್ರ ಒಂದು ಝಲಕ್ ಇಲ್ಲಿದೆ.

ಕಣ್ಣು ಹಾಯಿಸಿದಲ್ಲೆಲ್ಲಾ ನೀರು. ಈ ನೀರಿನಲ್ಲಿ ಯುವಕ-ಯುವತಿಯರು ಎನ್ನದೇ ಕಯಾಕಿಂಗ್ ಸೇರಿದಂತೆ ವಿವಿಧ ಸರ್ಧೆಗಳಲ್ಲಿ ಭಾಗವಹಿಸಿರುವ ಸ್ಪರ್ಧಾಳುಗಳು.

ನಾವೇನು ಕಮ್ಮಿ ಇಲ್ಲ ಅಂತಾ ಮೀನುಗಾರರು ಸಾಂಪ್ರದಾಯಕ ದೋಣಿ ರೇಸ್ ಸ್ಪರ್ಧೆಯಲ್ಲಿ ತಮ್ಮ ಸಾಮಾರ್ಥ್ಯ ಪ್ರದರ್ಶನ ಮಾಡಿದ್ರು.

ಭಾನುವಾರ ಆದ್ರಿಂದ ಮಂಗಳೂರಿಗರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬಂದು ಎಂಜಾಯ್ ಮಾಡಿದ್ರು. ಒಟ್ಟಿನಲ್ಲಿ ಅದ್ದೂರಿಯಾಗಿ ನಡೆದ ನಂದಿನಿ ನದಿ ಉತ್ಸವಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.

ಇನ್ನು ಇಲ್ಲಿ ಆಕರ್ಷಣೆಯನ್ನುಂಟು ಮಾಡಿದ್ದು ಆಹಾರ ಮೇಳ. ಆಹಾರ ಮೇಳದಲ್ಲಿ ಮೀನು ಫ್ರೈ, ಮೀನಿನ ಚಟ್ನಿ, ಬಿರಿಯಾನಿ, ಕಬಾಬ್, ಗಂಜಿ ಊಟ ಸೇರಿದಂತೆ ವಿವಿಧ ಖಾದ್ಯವನ್ನು ಎಲ್ಲರು ಸವಿದರು.




ಸ್ಥಳೀಯರು, ಜಿಲ್ಲೆಯ ಮಂದಿ ಮಾತ್ರವಲ್ಲದೇ ಹೊರ ಜಿಲ್ಲೆಯವರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ 10 ಸಾವಿರ, 7 ಸಾವಿರ ಸೇರಿದಂತೆ ನಗದು ಬಹುಮಾನ ಸಹ ಇತ್ತು.

ಇದರ ಜೊತೆಗೆ ಯುವಕರ ಹಾಗೂ 35 ವರ್ಷ ಮೇಲ್ಪಟ್ಟವರ ಈಜು ಸ್ಪರ್ಧೆಯನ್ನು ನಡೆಸಲಾಯಿತು.

ನಂದಿನಿ ನದಿ ಉತ್ಸವದಲ್ಲಿ ಕಯಾಕಿಂಗ್ ಕಾಂಪೀಟೇಶನ್ ನಡೆಯಿತು. ಕಯಾಕಿಂಗ್ ಸಿಂಗಲ್, ಡಬಲ್, ಸ್ಟ್ಯಾಡಿಂಗ್ ಅಪ್ ಪೆಡಲ್ ಸ್ಪರ್ಧೆಗಳನ್ನು ನಡೆಸಲಾಯಿತು. ಕಯಾಕ್‌ಗಳು ರೋಚಕ ಸ್ಪರ್ಧೆ ಮೂಲಕ ಸೇರಿದಿದ್ದವರನ್ನು ರಂಜಿಸಿದರು.

ವಜ್ರಮಹೋತ್ಸವ ಸಂಭ್ರಮದಲ್ಲಿರುವ ಸಸಿಹಿತ್ಲುವಿನ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ ವತಿಯಿಂದ ಇಲ್ಲಿ ಮೂರು ದಿನಗಳ ನದಿ ಉತ್ಸವವನ್ನು ಆಯೋಜಿಸಲಾಗಿತ್ತು. ಕೊನೆಯ ದಿನವಾದ ಭಾನುವಾರ ನದಿಯಲ್ಲಿ ಹಲವು ಸರ್ಧೆಗಳು ನಡೆದವು.

ಎಸ್ ಇಂತಹದ್ದೊಂದು ಕಲರ್ ಫುಲ್ ದೃಶ್ಯಗಳು ಕಾಣಸಿಕ್ಕಿದ್ದು ಮಂಗಳೂರಿನ ಸಸಿಹಿತ್ಲು ಬಳಿಯಿರುವ ನಂದಿನಿ ನದಿಯಲ್ಲಿ.

ನದಿ ತಟದಲ್ಲಿ ಬಿಂದಾಸ್ ಮೂಡ್‌ನಲ್ಲಿ ಸ್ಪರ್ಧೆಯನ್ನು ಕ್ಯೂರಿಯಾಸಿಟಿಯಿಂದ ನೋಡುತ್ತಿರುವ ಯುವಕ ಯುವತಿಯರು.

ಇವರಿಗೆ ಜೋಶ್ ತುಂಬಲು ಸಂಚಾರಿ ಬೋಟ್‌ನಲ್ಲಿರುವ ಬ್ಯಾಂಡ್ ವಾದನದವರು, ಚೆಂಡೆ ಮದ್ದಳೆಯವರು. (ವರದಿ: ಅಶೋಕ್, ಟಿವಿ 9, ಮಂಗಳೂರು)



















