Updated on: Feb 06, 2023 | 12:34 PM
ಕಾರ್ತಿಕ್ ಆರ್ಯನ್ ಅವರು ಬಾಲಿವುಡ್ನ ಬೇಡಿಕೆಯ ಹೀರೋ. 2022ರಲ್ಲಿ ರಿಲೀಸ್ ಆದ ಅವರ ನಟನೆಯ ‘ಭೂಲ್ ಭುಲಯ್ಯ 2’ ಚಿತ್ರ ಒಳ್ಳೆಯ ಕಮಾಯಿ ಮಾಡಿತು. ಈಗ ಅವರು ‘ಶಹಜಾದಾ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.
ತೆಲುಗಿನ ‘ಅಲ ವೈಕುಂಠಪುರಮುಲೋ’ ಸಿನಿಮಾ ಅನ್ನು ‘ಶಹಜಾದಾ’ ಶೀರ್ಷಿಕೆ ಅಡಿಯಲ್ಲಿ ಹಿಂದಿಗೆ ರಿಮೇಕ್ ಮಾಡಲಾಗಿದೆ. ಕಾರ್ತಿಕ್ ಆರ್ಯನ್ ಹಾಗೂ ಕೃತಿ ಸನೋನ್ ಈ ಚಿತ್ರದಲ್ಲಿ ನಟಿಸಿದ್ದಾರೆ.
‘ಶಹಜಾದಾ’ ಚಿತ್ರದ ಪ್ರಚಾರಕ್ಕಾಗಿ ಕಾರ್ತಿಕ್ ಹಾಗೂ ಕೃತಿ ಬೇರೆ ಬೇರೆ ನಗರಗಳಿಗೆ ತೆರಳುತ್ತಿದ್ದಾರೆ. ಅವರನ್ನು ನೋಡೋಕೆ ಸಾಕಷ್ಟು ಜನರು ನೆರೆಯುತ್ತಿದ್ದಾರೆ.
‘ಶಹಜಾದಾ’ ಚಿತ್ರದ ಪ್ರಚಾರಕ್ಕಾಗಿ ಕೃತಿ ಹಾಗೂ ಕಾರ್ತಿಕ್ ತಾಜ್ ಮಹಲ್ ತೆರಳಿದ್ದಾರೆ. ಈ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಫೆಬ್ರವರಿ 10ರಂದು ‘ಶಹಜಾದ’ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ.