ಮಾಘ ಮಾಸ ಹುಣ್ಣಿಮೆ: ಕಾವೇರಿ ತಟದಲ್ಲಿ ಮಿಂದೆದ್ದು ತಾಯಿ ನಿಮಿಷಾಂಭ ದರ್ಶನ ಪಡೆದು ಪುನೀತರಾದ ಜನ, ಚಿತ್ರಗಳಲ್ಲಿ ನೋಡಿ
ನಿನ್ನೆ ಭಾನುವಾರ ಮಾಘ ಮಾಸದ ಹುಣ್ಣಿಮೆ ಯಾವ ರೀತಿ ಇತ್ತು. ನಿಮಿಷಾಂಭ ದೇವಾಲಯಕ್ಕೆ ಆಗಮಿಸಿದ ಭಕ್ತಗಣ ಹೇಳಿದ್ದೇನು, ಗಂಜಾಂನಲ್ಲಿ ನಡೆದ ಮಾಘ ಮಾಸ ಹುಣ್ಣಿಮೆ ಯಾವ ರೀತಿ ಇತ್ತು? ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ನಿನ್ನೆ ಭಾನುವಾರ ಮಾಘ ಮಾಸದ ಹುಣ್ಣಿಮೆ ಯಾವ ರೀತಿ ಇತ್ತು. ನಿಮಿಷಾಂಭ ದೇವಾಲಯಕ್ಕೆ ಆಗಮಿಸಿದ ಭಕ್ತಗಣ ಹೇಳಿದ್ದೇನು, ಗಂಜಾಂನಲ್ಲಿ ನಡೆದ ಮಾಘ ಮಾಸ ಹುಣ್ಣಿಮೆ ಯಾವ ರೀತಿ ಇತ್ತು? ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
1 / 7
ಈ ಎಲ್ಲಾ ದೃಶ್ಯ ಕಣ್ಣಿಗೆ ಬಿದ್ದಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲಕಿನ ಗಾಂಜಾಂನಲ್ಲಿ.. ಇಂದು ಮಾಘ ಮಾಸ ಹುಣ್ಣಿಮೆ ಹಿನ್ನೆಲೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತ ಗಣ ಆಗಮಿಸಿದ್ರು. ಕಾವೇರಿ ತಟದಲ್ಲಿ ಮಿಂದೆದ್ದ ಭಕ್ತ ಗಣ ಬಳಿಕ ತಾಯಿಯ ದರ್ಶನ ಪಡೆದು ಪುನೀತರಾದರು. (ವರದಿ: ಸೂರಜ್ ಪ್ರಸಾದ್, ಟಿವಿ 9, ಮಂಡ್ಯ)
2 / 7
ಅದೇನೆ ಹೇಳಿ ಇಂದಿನ ಮಾಘ ಮಾಸ ಹುಣ್ಣಿಮೆಯೆಂದು ಜಿಲ್ಲೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಲಕ್ಷಾಂತರ ಭಕ್ತ ಗಣ ಕಾವೇರಿ ತಟದಲ್ಲಿ ಮಿಂದೆದ್ದು ಪುನೀತರಾದರು. ತಾಯಿ ನಿಮಿಷಾಂಭ ಅಶೀರ್ವಾದಕ್ಕೆ ಪಾತ್ರರಾದ್ರು
3 / 7
ಇನ್ನು ದೇವಿಯ ದರ್ಶನಕ್ಕೆ ಬಂದಿದ್ದ ಭಕ್ತಾದಿಗಳಿಗೆ.. ಸಂಗೀತ ರಸಮಂಜರಿ ಕಾರ್ಯಕ್ರಮ ಮನ ಸೆಳೆಯಿತು... ಜ್ಯೂನಿಯರ್ ರಾಜ್ ಕುಮಾರ್ ಅವರ ನೃತ್ಯ.. ಪುನೀತ್ ರಾಜ್ ಕುಮಾರ್ ಅವರ ಚಾಲಕನ ಹಾಡುಗಾರಿಕೆ.. ಎಲ್ಲರಿಗೂ ಮನ ದುಂಬಿ ಬರುವಂತೆ ಮಾಡ್ತು..
4 / 7
ಪವರ್ ಸ್ಟಾರ್ ಅಪ್ಪು ಬಾಸ್ ನನ್ನ ನೆನೆದು ಅವರ ಚಾಲಕ ಹಾಗೂ ಜ್ಯೂನಿಯರ್ ರಾಜ್ ಕುಮಾರ್ ಭಾವುಕರಾದ ಪ್ರಸಂಗ ಕೂಡ ನಡೆಯಿತು.
5 / 7
ಕಾವೇರಿ ತಟದಲ್ಲಿ ಮಿಂದೇಳುತ್ತಿರುವ ಭಕ್ತ ಗಣ.. ಕಿಲೋ ಮೀಟರ್ ಗಟ್ಟಲೆ ಸಾಲು ಗಟ್ಟಿ ನಿಂತಿರೊ ಜನ ಸಾಗರ.. ಕೈಯಲ್ಲಿ ಹಣ್ಣು ಕಾಯಿ ಹಿಡಿದು ಸರದಿ ಸಾಲಿನಲ್ಲಿ ನಿಂತ ಜನ..