AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗದಲ್ಲಿ ಇಂದು ಪ್ರಜಾಧ್ವನಿ ಬೃಹತ್​ ಸಮಾವೇಶ: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಜನರ ಮುಂದಿಡಲು ಕಾಂಗ್ರೆಸ್​ ಪ್ಲಾನ್

ಗದಗ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಇಂದು(ಜ.18) ಕಾಂಗ್ರೆಸ್​ ಪಕ್ಷದಿಂದ ಪ್ರಜಾಧ್ವನಿ ಬೃಹತ್​ ಸಮಾವೇಶ ನಡೆಯಲಿದೆ.

ಗದಗದಲ್ಲಿ ಇಂದು ಪ್ರಜಾಧ್ವನಿ ಬೃಹತ್​ ಸಮಾವೇಶ: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಜನರ ಮುಂದಿಡಲು ಕಾಂಗ್ರೆಸ್​ ಪ್ಲಾನ್
ಪ್ರಜಾಧ್ವನಿ ಕಾರ್ಯಕ್ರಮದ ಸಿದ್ದತೆ
TV9 Web
| Updated By: ಕಿರಣ್ ಹನುಮಂತ್​ ಮಾದಾರ್|

Updated on: Jan 18, 2023 | 9:54 AM

Share

ಗದಗ: ನಗರದಲ್ಲಿ ಇಂದು(ಜ.18) ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಬೃಹತ್ ಸಮಾವೇಶ ನಡೆಯಲಿದೆ. ಇದಕ್ಕಾಗಿ ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಭರದ ಸಿದ್ಧತೆ ನಡೆದಿದ್ದು, ಬೃಹತ್ ವೇದಿಕೆಯನ್ನ ಸಿದ್ಧಪಡಿಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಸುಮಾರು 40 ಸಾವಿರ ಜನರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಶಾಸಕ ಎಚ್ ಕೆ ಪಾಟೀಲ್ ಹೇಳಿದ್ದಾರೆ.

ಇಂದು ಮದ್ಯಾಹ್ನ 4 ಘಂಟೆಗೆ ಕಾರ್ಯಕ್ರಮ ನಡೆಯಲಿದ್ದು, ನಗರದಲ್ಲಿ ಎಲ್ಲೆಲ್ಲೂ ಫ್ಲೆಕ್ಸ್, ಬ್ಯಾನರ್​ಗಳ ಅಬ್ಬರ ಬಲು ಜೋರಾಗಿದೆ. ಕಾರ್ಯಕರ್ತರಿಗಾಗಿ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಲಿದ್ದು ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನ ಜನರ ಮುಂದಿಡಲು ಸಜ್ಜಾಗಿದ್ದಾರೆ. ಇನ್ನು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​, ವಿರೋಧ ಪಕ್ಷದ ನಾಯಕ ಸಿಧ್ದರಾಮಯ್ಯ, ಎಂ ಬಿ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ ಎಸ್ ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ಮುಖಂಡರು ಭಾಗಿಯಾಗಲಿದ್ದಾರೆ.

ಕೆಪಿಸಿಸಿ ಕಚೇರಿಯಿಂದ ಆರಂಭವಾದ ಈ ಯಾತ್ರೆ ಇಂದು ಗದಗಕ್ಕೆ ಬಂದಿದೆ. ನಿನ್ನೆ ಕೊಪ್ಪಳದಲ್ಲಿ ನಡೆದಿದ್ದ ಕಾಂಗ್ರೆಸ್​ ಪ್ರಜಾಧ್ವನಿ ಸಮಾವೇಶದಲ್ಲಿ ಕಾಂಗ್ರೆಸ್​ ನಾಯಕರು ಬಿಜೆಪಿ ವಿರುದ್ದ ಕಿಡಿಕಾರಿದ್ದರು. ಗಾಂಧೀಜಿಯವರು ಬ್ರಿಟಿಷರಿಗೆ ಭಾರತ ಬಿಟ್ಟು ತೊಲಗಿ ಎಂದು ಹೇಳಿದ ಸ್ಥಳದಿಂದ ನಾವು ಯಾತ್ರೆ ಆರಂಭ ಮಾಡಿದ್ದೇವೆ. ಗಾಂಧಿಯವರು ಬ್ರಿಟಿಷರನ್ನ ಭಾರತ ಬಿಟ್ಟು ತೊಲಗಿ ಎಂದಿದ್ದರು, ನಾವು ಬಿಜೆಪಿಯವರನ್ನ ರಾಜ್ಯದಿಂದ ಒದ್ದೋಡಿಸಿ ಎನ್ನುವ ಕರೆ ನೀಡಿದ್ದೇವೆ. ಎನ್ನುವ ಮೂಲಕ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.

ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಪ್ರತಿ ವರ್ಷ 5 ಸಾವಿರ ಕೋಟಿ ರೂ.: ಡಿ.ಕೆ ಶಿವಕುಮಾರ್​ ಘೋಷಣೆ

ಇನ್ನು ಪ್ರತಿ ವರ್ಷ 50 ಸಾವಿರ ಸರ್ಕಾರಿ ಉದ್ಯೋಗ ನೀಡುತ್ತೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಪ್ರತಿ ವರ್ಷ ಐದುಸಾವಿರ ಕೋಟಿ ರೂಪಾಯಿ ನೀಡುತ್ತೇವೆ. ನಾವು ನಿಮ್ಮ ಬದುಕಿನ ಬಗ್ಗೆ ಮಾತನಾಡುತ್ತಿವಿ. ಬಿಜೆಪಿಯವರು ಜನರ ಭಾವನೆಗಳ ಬಗ್ಗೆ ಚೆಲ್ಲಾಟ ಆಡುತ್ತಿದ್ದಾರೆ. ರಾಜ್ಯ ಆಳುತ್ತಿರುವ ಪಕ್ಷದ ಅಧ್ಯಕ್ಷ ಏನ್ ಹೇಳಿದ್ರು ಅವರಿಗೆ ನಾಚಿಕೆಯಾಗಬೇಕು. ಕಾಂಟ್ರಾಕ್ಟರ್ ಅಸೋಸಿಯೇಶನ್ ಮೋದಿಯವರಿಗೆ ಪತ್ರ ಬರೀತು. ಅದಕ್ಕೆ ಉತ್ತರ ನೀಡಿಲ್ಲ. ಕೊನೆಗೆ ಅವರನ್ನೆ ಅರೆಸ್ಟ್ ಮಾಡುವ ಸಂಚು‌ ನಡೀತು. ಅವರ ಪಾಪದ ಪುರಾಣ ಮನೆ ಮನೆಗೆ ಹಂಚುತ್ತೇವೆ. ಎಂದು ನಿನ್ನೆ(ಜ.17) ಕೊಪ್ಪಳದಲ್ಲಿ ನಡೆದ ಕಾಂಗ್ರೆಸ್​  ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ