AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಇದ್ದಕ್ಕಿದ್ದಂತೆ ಶೇ 100ರ ರಷ್ಟು ಹೆಚ್ಚಾದ ಟೋಲ್ ದರ, ಸವಾರರು ಗರಂ

ಒಂದು ಲಾರಿ ಬೆಂಗಳೂರಿನಿಂದ ಮುಂಬಯಿಗೆ ಹೋಗಿ ವಾಪಸ್ಸು ಬೆಂಗಳೂರಿಗೆ ಬರಬೇಕಾದ್ರು 24 ಸಾವಿರ ರೂಪಾಯಿ ಟೋಲ್ ಗೇಟ್ ಶುಲ್ಕ ಕಟ್ಟಬೇಕು. ಇದಕ್ಕೆ ಪರಿಹಾರವೇ ಇಲ್ಲವೆ.

ದಾವಣಗೆರೆ: ಇದ್ದಕ್ಕಿದ್ದಂತೆ ಶೇ 100ರ ರಷ್ಟು ಹೆಚ್ಚಾದ ಟೋಲ್ ದರ, ಸವಾರರು ಗರಂ
ಹೆಬ್ಬಾಳ್ ರಾಷ್ಟ್ರೀಯ ಹೆದ್ದಾರಿ 48
ಆಯೇಷಾ ಬಾನು
|

Updated on:Feb 23, 2023 | 8:55 AM

Share

ದಾವಣಗೆರೆ: ದಾವಣಗೆರೆ- ಹೆದ್ದಾರಿಗಳು ಅಂದ್ರೆ ವಾಹನ ಸವಾರಿಗೆ ಬಲು ಪ್ರೀತಿ. ಕಾರಣ ಮಸ್ತಾದ ರಸ್ತೆ ಯಾವುದೇ ಎದುರಿಗೆ ವಾಹನ ಬರುವ ಭೀತಿ ಇಲ್ಲಾ. ಇಂತಹ ಹೆದ್ದಾರಿಯಲ್ಲಿ ನಿಮಗೆ ಬೇಕಾದ ಸ್ಪೀಡ್​ನಲ್ಲಿ ಹೋಗಬಹುದು. ಆದ್ರೆ ಟೋಲ್ ಗೇಟ್​ಗೆ ಹೋದ್ರೆ ಸಾಕು ನೀವು ಹೇಗೆ ಸ್ಪೀಡ್​ನಲ್ಲಿ ಹೋಗುತ್ತಿರಿ ಅದೇ ರೀತಿ ಟೋಲ್ ಶುಲ್ಕ ಕೂಡಾ ಹೆಚ್ಚಾಗುತ್ತಿದೆ. ಅದು ಒಂದಲ್ಲ ಎರಡಲ್ಲ ಬರೋಬರಿ ಶೇ-100ರ ರಷ್ಟು ಟೋಲ್ ಶುಲ್ಕ ಹೆಚ್ಚಾಗಿದೆ.

ಇದೊಂದು ರೀತಿಯಲ್ಲಿ ಹಗಲು ದರೋಡೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ವಿಶೇಷವಾಗಿ ಬೆಂಗಳೂರಿನಿಂದ ಬೆಳಗಾವಿವರೆಗೆ ರಾಜ್ಯದ ವ್ಯಾಪ್ತಿಯಲ್ಲಿ ಹೋಗುವು ರಾಷ್ಟ್ರೀಯ ಹೆದ್ದಾರಿ 48 ನಲ್ಲಿ ಕಳೆದ 15 ರಿಂದ ಹೆಚ್ಚು ಶುಲ್ಕದ ಬಿಸಿ ವಾಹನ ಸವಾರಿಗೆ ತಟ್ಟಿದೆ. ದಾವಣಗೆರೆ ಜಿಲ್ಲೆಯ ಹೆಬ್ಬಾಳ್ ಟೋಲ್ ಗೇಟ್ ಸೇರಿದಂತೆ ಬೆಂಗಳೂರಿನಿಂದ ಬೆಳಗಾವಿ ಜಿಲ್ಲೆಯ ವರೆಗೆ ಅಂದ್ರೆ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಮಹಾರಾಷ್ಟ್ರ ಪ್ರವೇಶ ಮಾಡುವ ತನಕ ಒಟ್ಟು ಹನ್ನೊಂದು ಟೋಲ್ ಗಳಿವೆ. ಈ ಹನ್ನೊಂದು ಟೋಲ್ ಗಳಲ್ಲಿ ಹೆದ್ದಾರಿ ಪ್ರಾಧಿಕಾರ ಬರೋಬರಿ ಶೇ- 100ರಷ್ಟು ಟೋಲ್ ಶುಲ್ಕ ಹೆಚ್ಚಳ ಮಾಡಿದೆ. ಅನಿರೀಕ್ಷಿತವಾಗಿ ಡಬಲ್ ದುಡ್ಡು ಕಟ್ಟುವುದಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಆ ಆಕ್ರೋಶಕ್ಕೆ ಟೋಲ್ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ. ಕಾರಣ ಇದನ್ನ ಮಾಡಿದ್ದು ರಾಷ್ಟ್ರೀಯ ಹೆದ್ದಾರಿಪ್ರಾಧಿಕಾರ.

ಇದನ್ನೂ ಓದಿ: ವಿಮಾನ ಆಯ್ತು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿ ಮೇಲೆ ಮೂತ್ರ ಮಾಡಿದ ಸಹ ಪ್ರಯಾಣಿಕ

ಒಂದು ಲಾರಿ ಬೆಂಗಳೂರಿನಿಂದ ಮುಂಬಯಿಗೆ ಹೋಗಿ ವಾಪಸ್ಸು ಬೆಂಗಳೂರಿಗೆ ಬರಬೇಕಾದ್ರು 24 ಸಾವಿರ ರೂಪಾಯಿ ಟೋಲ್ ಗೇಟ್ ಶುಲ್ಕ ಕಟ್ಟಬೇಕು. ಇದಕ್ಕೆ ಪರಿಹಾರವೇ ಇಲ್ಲವೆ. ನಿಜಕ್ಕೂ ಇದೊಂದು ಹಗಲು ದರೋಡೆ ಆಗಿದೆ. ದಾವಣಗೆರೆ ತಾಲೂಕಿನ ಹೆಬ್ಬಾಳ್ ಟೋಲ್ ಗೇಟ್ ನಲ್ಲಿ ಈ ಹಿಂದೆ ಇದ್ದ ಟೋಲ್ ಗೇಟ್ ಶುಲ್ಕ ಹಾಗೂ ಈಗ ಅಂದ್ರೆ ಫೆಬ್ರುವರಿ 15 ರಿಂದ ಜಾರಿಗೆ ಬಂದ ಶುಲ್ಕ ನೋಡಿದ್ರೆ ಅಚ್ಚರಿ ಆಗುತ್ತದೆ.

  • ಕಾರು ಜೀಪು, ಲಘುವಾಹನ- ಹಳೆದರ- 60 ರೂಪಾಯಿ, ಹೊಸದರ 120 ರೂಪಾಯಿ
  • ಲಘು ವಾಣಿಜ್ಯ ವಾಹನಗಳು ಹಳೆದರ 95 ರೂಪಾಯಿ, ಹೊಸದರ 195 ರೂಪಾಯಿ
  • ಬಸ್ ಮತ್ತು ಟ್ರಕ್ ಹಳೆದರ 195, ಹೊಸ ದರ 410ರೂಪಾಯಿ
  • ತ್ರಿ ಆಕ್ಸಲ್ ವಾಹನ ಹಳೆದರ 215, ಹೊಸದರ 645 ರೂಪಾಯಿ
  • ಭಾರಿ ನಿರ್ಮಾಣ ವಾಹನ ಹಳೆ ದರ 630 ರೂಪಾಯಿ, ಹೊಸದರ 780 ರೂಪಾಯಿ. ಹೀಗೆ ನಿರಂತರವಾಗಿ ಟೋಲ್ ಶುಲ್ಕ ಹೆಚ್ಚಳವಾಗುತ್ತಿದೆ. ಜೊತೆಗೆ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ. ಇದರ ಜೊತೆಗೆ ಹೆದ್ದಾರಿ ಶುಲ್ಕ ಜಾಸ್ತಿಯಾಗಿ ಈ ಹಿಂದೆ ಎಂಟರಿಂದ ಹತ್ತು ರೂಪಾಯಿ ಕಿಲೋ ಮೀಟರ್ ಬಾಡಿಗೆ ಬರುತ್ತಿದ್ದ ಕಾರ್ ಚಾಲಕರು ಈಗ 15 ರೂಪಾಯಿ ಕಿಲೋ ಮೀಟರ್ ಬಾಡಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ರಾಷ್ಟ್ರೀಯ ಹೆದ್ದಾರಿ ಪೂಣಾ ಬೆಂಗಳೂರು ಬಹುತೇಕ ಕಡೆ ದುರಸ್ತಿ ನಡೆದಿದೆ. ಇಂತಹ ಪರಿಸ್ಥಿತಿ ವಾಹನ ಸಾಗುವುದು ಕಷ್ಟ. ಜೊತೆಗೆ ದುಪ್ಪಟ್ಟು ಶುಲ್ಕ ವಿಧಿಸಿದ್ದು ವಾಹನ ಸವಾರರಿಗೆ ಬರೆ ಎಳೆದಂತಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕಾಗಿದೆ.ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ

Published On - 8:55 am, Thu, 23 February 23