ದಾವಣಗೆರೆ: ಲಂಚ ಪಡೆಯುತ್ತಿದ್ದ ದಸ್ತು ಬರಹಗಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ(Sub Registrar officer) ದಸ್ತು ಬರಹಗಾರ ಪರಮೇಶ್ವರ್ ಎಂಬುವವರು 13 ಸಾವಿರ ಹಣ ಲಂಚ(Bribe) ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ದಾಳಿ ನಡೆದಿದ್ದು ಅಧಿಕಾರಿಗಳು ಪರಮೇಶ್ವರ್ನನ್ನು ಬಂಧಿಸಿದ್ದಾರೆ.
ಮನೆ ಖರೀದಿಯ ಸೇಲ್ ಡೀಡ್ ನೋಂದಣಿ ಪತ್ರ ನೀಡಲು ಹರಿಹರದ ಮಂಜುನಾಥ್ ಎನ್ನುವರ ಬಳಿ ಪರಮೇಶ್ವರ್ 20 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಮಂಜುನಾಥ್ ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ನಿನ್ನೆ ರಾತ್ರಿ ಸಬ್ ರಿಜಿಸ್ಟರ್ ಕಚೇರಿ ಬಳಿ ಮಂಜುನಾರ್ನಿಂದ 13 ಸಾವಿರ ಲಂಚ ಪಡೆಯುವಾಗ ಪರಮೇಶ್ವರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅರೋಪಿಯಿಂದ 40 ಸಾವಿರ ನಗದು ಸೇರಿದಂತೆ ವಿವಿಧ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಎಸ್ಪಿ, ಎಂಎಸ್ ಕೌಲಾಪುರೆ, ಇನ್ಸ್ಪೆಕ್ಟರ್ ರಾಷ್ಟ್ರಪತಿ ಎಚ್ ಎಸ್, ಅಂಜನೇಯ ನೇತೃತ್ವದಲ್ಲಿ ದಾಳಿ ನಡೆದಿತ್ತು.
ಇದನ್ನೂ ಓದಿ: ಬೆಂಗಳೂರು: ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ; ಕಿಡ್ನಾಪ್ ಮಾಡಿ ಕೊಲೆ ಮಾಡಿರುವ ಶಂಕೆ
ರಾಯಚೂರು: ಕುಡಿಯುವ ನೀರಿಗಾಗಿ ನದಿಗೆ ಇಳಿದಿದ್ದ ಬಾಲಕನನ್ನ ಮೊಸಳೆ ಹೊತ್ತೊಯ್ದ ಘಟನೆ ತಾಲೂಕಿನ ಕುರವಕಲಾ ಗ್ರಾಮದಲ್ಲಿ ನಡೆದಿದೆ. ನವೀನ್(9) ಮೃತ ಬಾಲಕ. ಪೋಷಕರ ಜತೆ ನದಿ ಬಳಿ ಇರುವ ಜಮೀನಿಗೆ ನವೀನ್ ತೆರಳಿದ್ದ. ಈ ವೇಳೆ ಪೋಷಕರು ನದಿಗೆ ಹೋಗಿ ಕುಡಿಯಲು ನೀರು ತರಲು ಹೇಳಿದ್ದರು. ಕುಡಿಯುವ ನೀರಿಗಾಗಿ ನದಿಗೆ ತೆರಳಿದ್ದ ನವೀನ್ ಹಾಗೂ ಮತ್ತೊಬ್ಬ ಬಾಲಕ, ಬಾಟಲಿಗೆ ನೀರು ತುಂಬಿಸಲು ಮುಂದಾಗಿದ್ದಾರೆ. ಇದೇ ಸಂದರ್ಭದಲ್ಲಿ ನವೀನನ ಮೇಲೆ ಮೊಸಳೆ ದಾಳಿ ಮಾಡಿದ್ದು, ಹೊತ್ತೊಯ್ದಿದೆ. ನವೀನ್ ಜತೆ ಇದ್ದ ಮತ್ತೊಬ್ಬ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಬಾಲಕ ನವೀನ್ಗಾಗಿ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭವಾಗಿದ್ದು, ಯಾಪಲದಿನ್ನಿ ಪೊಲೀಸರು, ಅಗ್ನಿಶಾಮಕ ದಳ ಜೊತೆ ಸ್ಥಳೀಯರಿಂದ ಕಾರ್ಯಾಚರಣೆ. ನಡೆಸಿದ್ದಾರೆ. ಈ ಕುರಿತು ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ