ದಾವಣಗೆರೆ: ಜಿಲ್ಲೆಯ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಅಧೀನದ 2 ಮೆಡಿಕಲ್ ಕಾಲೇಜುಗಳು ನಿಯಮಾನುಸಾರ ಶೇಕಡಾ 75ರಷ್ಟು ಬೆಡ್‌ಗಳನ್ನು ನೀಡಿಲ್ಲ. ಜಿಲ್ಲಾಡಳಿತಕ್ಕೆ ಬೆಡ್ ಬಿಟ್ಟುಕೊಡದಿದ್ದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತೆ ಎಂದು ದಾವಣಗೆರೆಯಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯ ಶಾಸಕ ಶಾಮನೂರ ಶಿವಶಂಕರಪ್ಪ ಕುಟುಂಬದ ಅಧೀನದಲ್ಲಿ ಇರುವ ಬಾಪೂಜಿ, ಎಸ್.ಎಸ್.ಮೆಡಿಕಲ್ ಕಾಲೇಜುಗಳು ನಿಯಮಾನುಸಾರ ಶೇಕಡಾ 75ರಷ್ಟು ಬೆಡ್‌ಗಳನ್ನು ಜಿಲ್ಲಾಡಳಿತಕ್ಕೆ ನೀಡುತ್ತಿಲ್ಲ. ಹೀಗಾಗಿ ಆರೋಗ್ಯ ಸಚಿವ ಡಾ ಕೆ.ಸುಧಾಕರ ಗರಂ ಆಗಿದ್ದು ಆದಷ್ಟು ಬೇಗ ಬೆಡ್ಗಳನ್ನು ಬಿಟ್ಟುಕೊಡಬೇಕು ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
2 ಮೆಡಿಕಲ್ ಕಾಲೇಜುಗಳಿಂದ ಕೇವಲ 91 ಬೆಡ್ ನೀಡಲಾಗಿದೆ. ಆದರೆ ರಾಜ್ಯದ ಬೇರೆ ಯಾವುದೇ ಮೆಡಿಕಲ್ ಕಾಲೇಜು ಹೀಗೆ ಮಾಡಿಲ್ಲ. ಹೀಗಾಘಿ ನಿಮಗ್ಯಾಕೆ ಪ್ರತ್ಯೇಕ ವ್ಯವಸ್ಥೆ ಎಂದು ಡಾ.ಸುಧಾಕರ್ ಪ್ರಶ್ನೆ ಮಾಡಿದ್ದಾರೆ. ರಾಜಕೀಯ ಹಿನ್ನೆಲೆ ಇದೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೀಗೆ ಮಾಡಬಾರದು. ರಾಜ್ಯ ಪ್ರತಿಷ್ಠಿತ ಮಠಾಧೀಶರು ನಡೆಸುವ ಮೆಡಿಕಲ್ ಕಾಲೇಜ್ ನಲ್ಲಿ ಶೇಖಡಾ 75 ಬೆಡ್ ನೀಡಿದ್ದಾರೆ. ಆದ್ರೆ ಶಾಮನೂರ ಶಿವಶಂಕರಪ್ಪ ಕೊಟ್ಟಿಲ್ಲ ಅಂದ್ರೆ ಹೇಗೆ. ಸಂಕಷ್ಟದ ಪರಿಸ್ಥಿತಿಯಲ್ಲಿ ಸಂಘರ್ಷ ಬೇಡ. ಸರ್ಕಾರದ ಆದೇಶದನ್ವಯ ಜಿಲ್ಲಾಡಳಿತಕ್ಕೆ ಬೆಡ್ ನೀಡಿ ಎಂದು 2 ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರಿಗೆ ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಕೊರೊನಾ, ಬ್ಲಾಕ್ ಫಂಗಸ್ ಮುನ್ನೆಚ್ಚರಿಕಾ ಕ್ರಮಗಳ ಪರಿಶೀಲನೆಗಾಗಿ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡ ಸಚಿವ ಸುಧಾಕರ್