Davanagere News: ಮನೆ ಬುನಾದಿಯಲ್ಲಿ ಸಿಕ್ಕ ಚಿನ್ನ ಎಂದು ಉಡುಪಿ ಮೂಲಕದ ವ್ಯಕ್ತಿಗೆ 5 ಲಕ್ಷ ರೂ. ಪಂಗನಾಮ

| Updated By: ಆಯೇಷಾ ಬಾನು

Updated on: Jun 09, 2023 | 10:56 AM

ನಮ್ಮ ಮನೆಯ ಅಡಿಪಾಯ ತೆಗೆಯುವಾಗ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿ ದಾವಣಗೆರೆಯ ಸಿದ್ದನಮಠದ ಗ್ರಾಮದ ಅಡಿಕೆ ತೋಟಕ್ಕೆ ಕರಿಸಿ ಉಡುಪಿ ವ್ಯಕ್ತಿಗೆ ಪಂಗನಾಮ.

Davanagere News: ಮನೆ ಬುನಾದಿಯಲ್ಲಿ ಸಿಕ್ಕ ಚಿನ್ನ ಎಂದು ಉಡುಪಿ ಮೂಲಕದ ವ್ಯಕ್ತಿಗೆ 5 ಲಕ್ಷ ರೂ. ಪಂಗನಾಮ
ನಕಲಿ ಚಿನ್ನದ ನಾಣ್ಯಗಳು
Follow us on

ದಾವಣಗೆರೆ: ನಿಧಿಸಿಕ್ಕಿದೆ ಎಂದು ನಂಬಿಸಿ ವಂಚಿಸುವ ಜಾಲ ಹೆಚ್ಚು ಆಕ್ಟಿವ್ ಆಗುತ್ತಿದೆ. ಉಡುಪಿ ಮೂಲದ ವ್ಯಕ್ತಿಯಿಂದ ಐದು ಲಕ್ಷ ರೂಪಾಯಿ ಪಡೆದು 200 ಗ್ರಾಂ ನಕಲಿ ಚಿನ್ನದ ನಾಣ್ಯ ಕೊಟ್ಟು ಕೊಟ್ಟು ವಂಚಿಸಲಾಗಿದೆ. ಕೈಗೆ ಕುಂಕುಮದಲ್ಲಿ ಮಿಕ್ಸ್ ಮಾಡಿದ ಚಿನ್ನದ ನಾಣ್ಯಗಳು ಸಿಕ್ಕ ಬಳಿಕ ಆತನ ಹರ್ಷಕ್ಕೆ ಪಾರವೇ ಇರಲಿಲ್ಲ. ನಂತರ ಗೊತ್ತಾಯಿತು ಅದು ನಕಲಿ ಚಿನ್ನ ಅಂತಾ. ಹೀಗೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ವಾರಕ್ಕೊಂದಾದ್ರು ನಕಲಿ ಚಿನ್ನದ ದೋಖಾ ಇದ್ದೇ ಇರುತ್ತದೆ. ಈಗ ಈ ಪಟ್ಟಿಗೆ ಮತ್ತೊಂದು ಪ್ರಕರಣ ಸೇರಿದೆ.

ದಾವಣಗೆರೆ ಜಿಲ್ಲೆಯಲ್ಲಿ ನಕಲಿ ಚಿನ್ನ ನೀಡಿ ಹಣ ಪಡೆದು ವಂಚನೆ ಮಾಡ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ರೀತಿ ನಂಬಿ ಹಣ ನೀಡಿ ಮೋಸ ಹೋಗ್ಬೇಡಿ ಜಾಗೃತರಾಗಿರಿ ಎಂದು ಪೋಲಿಸ್ ಇಲಾಖೆ ಮನವಿ ಮಾಡಿದ್ರು ಕಿವಿ ಕೊಡದ ಜನ ಈ ನಕಲಿ ಬಂಗಾರದ ಜಾಲೆಗೆ ಬಲಿಯಾಗುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ವ್ಯಕ್ತಿ ನೋರ್ವ ನಕಲಿ ಚಿನ್ನದ ಜಾಲಕೆ ಬಲಿಯಾಗಿ 5.20ಲಕ್ಷ ರೂಪಾಯಿ ವಂಚನೆಗೊಳಗಾಗಿರುವ ಘಟನೆ ಇಂದು ನಡೆದಿದೆ. ಉಡುಪಿ ಜಿಲ್ಲೆಯ ಪೇಡೂರು ‌ಮೂಲದ ಸಂತೋಷ ಶೆಟ್ಟಿ ಎಂಬ ವ್ಯಕ್ತಿ ವಂಚನೆಗೊಳಗಾಗಿದ್ದು, ಸಂತೋಷ ಎಂದು ಹೆಸರು ಹೇಳಿದ ವ್ಯಕ್ತಿಯಿಂದ ವಂಚನೆಯಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿದ್ದನಮಠ ಕ್ರಾಸ್ ಬಳಿ ಮಾವಿನ ತೋಟದಲ್ಲಿ ಘಟನೆ ನಡೆದಿದೆ. ನಕಲಿ ಚಿನ್ನದ ನಾಣ್ಯ ನೀಡಿ ಹಣ ಪಡೆದು ವಂಚಿಸಲಾಗಿದೆ. ಮನೆಯ ಪಾಯಾ ತೆಗೆಯುವಾಗ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಕಡಿಮೆ ದರದಲ್ಲಿ ಚಿನ್ನ ಕೊಡುವುದಾಗಿ ಸಂತೋಷ ಶೆಟ್ಟಿಗೆ ಯವರಿಗೆ ಪುಸಲಾಯಿಸಿ 5.20 ಲಕ್ಷ ಹಣ ಪಡೆದು ಖದೀಮರು ವಂಚನೆ ಮಾಡಿದ್ದಾರೆ. 20 ಲಕ್ಷ ಇದ್ರೆ ಹೇಳಿ ಕೆಜಿ ಗಂಟಲೇ ಚಿನ್ನದ ನಾಣ್ಯ ಕೊಡುತ್ತೇವೆ ಎಂದು ಹೇಳಿದ್ದರು. ತಮಿಳುನಾಡಿನಲ್ಲಿ 34, ಕೇರಳದಲ್ಲಿ 18 ಆಂಧ್ರ ಪ್ರದೇಶದಲ್ಲಿ 63 ಹಾಗೂ ಕರ್ನಾಟಕದಲ್ಲಿ 108 ಪ್ರಕರಣಗಳು. ಈ ಅಂಕಿ ಸಂಖ್ಯೆ ಕೇಳುತ್ತಿದ್ದಂತೆ ಮೈ ಜುಮ್ ಎನ್ನುತ್ತದೆ. ಕಾರಣ ಇಷ್ಟೊಂದು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರುದ್ಧ ದಾಖಲಾದ್ರೆ ಎನು ಮಾಡುತ್ತೀರಿ.

ಇದನ್ನೂ ಓದಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ: ಅಧಿಕಾರಿಗಳಿಗೆ ಬಂಧನ ಭೀತಿ

ಜಾಮೀನು ತೆಗೆದುಕೊಳ್ಳುವುದರಲ್ಲಿಯೇ ನಿಮ್ಮ ಜೀವನ ಮುಕ್ತಾಯವಾಗುತ್ತದೆ. ಇದು ದಾವಣಗೆರೆ ಜಿಲ್ಲಾ ಪೊಲೀಸ್ ರಿಕಾರ್ಡ್ ನಲ್ಲಿ ಕಂಡು ಬಂದ ಪ್ರಕರಣ ಸಂಖ್ಯೆ ಬರೋಬರಿ 214. ಇದಕ್ಕೆ ಹೊಸ ಸೇರ್ಪಡೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಪ್ರಕರಣ. ಪೊಲೀಸ್ ತನಿಖೆಯಿಂದ ಪತ್ತೆಯಾಗಿದ್ದು ಇತ್ತೀಚಿಗೆ ಇಂತಹ ನಕಲಿ ಗೋಲ್ಡ ದಂಧೆ ಮಾಡುವವರು ಆಯಾ ರಾಜ್ಯ ಆ ಪ್ರದೇಶದ ಭಾಷೆ ಬರುವ ಜನರನ್ನ ಸಂಬಳಕೊಟ್ಟು ಗುರ್ತಿಸಿರುತ್ತಾರೆ. ಇದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಪಕ್ಕದ ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ಸುತ್ತ ಮುತ್ತಲು ಹತ್ತಾರು ನಕಲು ಗೋಲ್ಡ ಗ್ಯಾಂಗ್ ಗಳು ಕೆಲ್ಸಾ ಮಾಡುತ್ತಿವೆ.

ಅದು ವಂಚನೆ ಅಂತಾ ಪೊಲೀಸರು ಅರಿವು ಮೂಡಿಸುವ ಕೆಲ್ಸಾ ಮಾಡುತ್ತಲೇ ಇದ್ದಾರೆ. ಹೀಗೆ ಬೇರೆ ಬೇರೆ ವಂಚನೆ ಮಾಡಿದ ನಕಲಿ ಗೋಲ್ಡ ಗ್ಯಾಂಗ್ ಗಳ ಪಟ್ಟಿ ಕೂಡಾ ಪೊಲೀಸರ ಬಳಿ ಇದ. ಇದರ ಸಹಾಯದಿಂದ ಇತ್ತೀಚಿಗೆ ಇದೇ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಹತ್ತು ಲಕ್ಷ ರೂಪಾಯಿ ಆರೋಪಿಗಳಿಂದ ವಸೂಲಿ ಮಾಡಿ ಹಣ ಕಳೆದುಕೊಂಡವರಿಗೆ ನೀಡಲಾಗಿತ್ತು. ಹೀಗೆ ಹತ್ತರಲ್ಲಿ ಮೂರು ಪ್ರಕರಣಗಳು ಪತ್ತೆಯಾಗುತ್ತಿವೆ. ಆದ್ರೆ ಎಳು ಪ್ರಕರಣದಲ್ಲಿ ಹಣ ಕಳೆದುಕೊಂಡವರು ಅತಿ ಆಸೆಗೆ ಬಿದ್ದು ಬೀದಿ ಪಾಲಾದ್ರು ಅಂತಲೇ ಅರ್ಥ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜಕೀಯ ಹಾಗೂ ಮಳೆಯ ಲೇಟೆಸ್ಟ್ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ