Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ: ಅಧಿಕಾರಿಗಳಿಗೆ ಬಂಧನ ಭೀತಿ

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ವಿರುದ್ಧ ಕೇಸ್ ದಾಖಲಿಸಲು ನಾಲ್ಕನೇ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ: ಅಧಿಕಾರಿಗಳಿಗೆ ಬಂಧನ ಭೀತಿ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 09, 2023 | 8:40 AM

ಬೆಳಗಾವಿ: ನಗರಾಭಿವೃದ್ಧಿ ಪ್ರಾಧಿಕಾರ(Belagavi Urban Development Authority Office)ದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ. ಅಧಿಕಾರಿ ಕಳ್ಳಾಟದ ಕುರಿತು ರಾಜು ಟೋಪಣ್ಣವರ್ ಎಂಬುವವರು ಲೋಕಾಯುಕ್ತ(Lokayukta)ದಲ್ಲಿ ದೂರು ಸಲ್ಲಿಸಿದ್ದರು. ಈ ಕುರಿತು ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ವಿರುದ್ಧ ಕೇಸ್ ದಾಖಲಿಸಲು ನಾಲ್ಕನೇ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ಇದೀಗ ನಿವೇಶನ ಹಂಚಿಕೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿದ್ದ ಅಧಿಕಾರಿಗಳಿಗೆ ಬಂಧನದ ಭೀತಿ ಶುರುವಾಗಿದೆ.

ದೂರು ಸಲ್ಲಿಸಿದರೂ ಕೇಸ್ ದಾಖಲಿಸಿಕೊಂಡಿರಲಿಲ್ಲ ಲೋಕಾಯುಕ್ತ

ಹೌದು ದೂರು ಸಲ್ಲಿಸಿದರೂ ಲೋಕಾಯುಕ್ತ ಕೇಸ್ ದಾಖಲಿಸಿಕೊಂಡಿರಲಿಲ್ಲ. ಈ ಹಿನ್ನೆಲೆ ರಾಜು ಟೋಪಣ್ಣವರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕುರಿತು ಅಧಿಕಾರಿ ವಿರುದ್ಧ 120ಬಿ, 405, 406, 420, 425, 463, 464, 465, 466, 468, 477a ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿ ವಿಚಾರಣೆ ನಡೆಸಿ, ವರದಿ ನೀಡುವಂತೆ ಆದೇಶಿಸಲಾಗಿದೆ.

ಕೋರ್ಟ್ ಆದೇಶದ ಬೆನ್ನಲ್ಲೇ ಅಧಿಕಾರಿಗಳಿಗೆ ಶುರುವಾಯಿತು ಬಂಧನದ ಭೀತಿ

2023 ಜನವರಿ 24ರಂದು ಅಧಿಕಾರಿಗಳ ಕಳ್ಳಾಟದ ಕುರಿತು ಟಿವಿ9 ವಿಸ್ತೃತವಾದ ವರದಿ ಬಿತ್ತರಿಸಿತ್ತು. ಟಿವಿ9 ವರದಿ ಬೆನ್ನಲ್ಲೇ ಕೆಲವರು ಲೋಕಾಯುಕ್ತ ಮೋರೆ ಹೋಗಿದ್ದರು. ಸರ್ಕಾರದ ಬೊಕ್ಕಸಕ್ಕೆ 100 ಕೋಟಿಗೂ ಅಧಿಕ ಹಣ ನಷ್ಟ ಮಾಡಿ ಯಾವುದೇ ಜಾಹೀರಾತು ನೀಡದೇ ಆಫ್ ಲೈನಲ್ಲಿ ಸೈಟ್ ಹಂಚಿಕೆ ಮಾಡಿದ್ದು, ಒಂದು ಕೋಟಿಗೆ ಆನ್ ಲೈನ್ ನಲ್ಲಿ ಹರಾಜಾದ್ರೇ, ಅದರ ಪಕ್ಕದ ಸೈಟ್ ಕೇವಲ 25-30ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಜೊತೆಗೆ ಇಎಂಡಿ ಹಣ ಕಟ್ಟಿಸಿಕೊಳ್ಳದೇ, ಎದುರಾಳಿಗಳಿಲ್ಲದೇ ತಮಗೆ ಬೇಕಾದವರಿಗೆ ನಿವೇಶನ ಹಂಚಿಕೆಯಾಗಿತ್ತು.

ಇದನ್ನೂ ಓದಿ:ಅನರ್ಹ ವ್ಯಕ್ತಿಗೆ ಪರಿಹಾರ, ನಿವೇಶನಗಳ ಅಕ್ರಮ ಹಂಚಿಕೆ: ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ ವೇಳೆ ಹಲವು ಅಕ್ರಮಗಳು ಬಯಲಿಗೆ

ಅಕ್ರಮವಾಗಿ ನಿವೇಶನ ಹಂಚಿಕೆ ಪ್ರಕರಣ ಕುರಿತು ಮಾತನಾಡಿದ ದೂರುದಾರ ರಾಜು ಟೋಪಣ್ಣವರ್

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ನಿವೇಶನ ಹಂಚಿಕೆ ಪ್ರಕರಣ ಕುರಿತು ಮಾತನಾಡಿದ ದೂರುದಾರ ರಾಜು ಟೋಪಣ್ಣವರ್ ‘ಬುಡಾ ಆಯುಕ್ತ ಪ್ರೀತಮ್ ನಸಲಾಪುರೆ ವಿರುದ್ಧ FIR ದಾಖಲಿಸಲು ಕೋರ್ಟ್ ಸೂಚನೆ ನೀಡಿದೆ. 2021ಮಾರ್ಚ್ 18ರಂದು‌ ಬುಡಾ ಸೈಟ್‌ಗಳ ಮ್ಯಾನುವಲ್ ಹರಾಜು ವೇಳೆ ಅವ್ಯವಹಾರ ನಡೆದಿದ್ದು, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಇದೀಗ ಅವರ ವಿರುದ್ಧ FIR ದಾಖಲಿಸಲು ಕೋರ್ಟ್‌ನಿಂದ ಆದೇಶ ಬಂದಿದೆ ಎಂದರು. ಇನ್ನು ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟಾಚಾರ ವಿರುದ್ಧ ಕೆಲಸ ಮಾಡ್ತಾರೋ, ಭ್ರಷ್ಟಾಚಾರಿಗಳ ಪರ ಕೆಲಸ ಮಾಡ್ತೋರು ಅನುಮಾನ ಕಾಡುತ್ತಿದೆ. ಕೋರ್ಟ್‌ಗೆ ಹೋಗಿ ಎಫ್ಐಆರ್ ದಾಖಲಿಸುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಭ್ರಷ್ಟ ಅಧಿಕಾರಿಗಳನ್ನು ಉಳಿಸುವ ಕೆಲಸ ಲೋಕಾಯುಕ್ತ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಲೋಕಾಯುಕ್ತದ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ಸೈಟ್‌ಗಳ ಹರಾಜು ಪ್ರಕ್ರಿಯೆ ಬಗ್ಗೆ ವಾರ್ತಾ ಇಲಾಖೆಯ ಮೂಲಕ ಪತ್ರಿಕೆಗಳಿಗೆ ಜಾಹೀರಾತು ನೀಡಬೇಕು

50 ಲಕ್ಷ ರೂ. ಮೇಲ್ಪಟ್ಟ ಯಾವುದೇ ಕಾಮಗಾರಿ ಇದ್ದರೂ ಪ್ರಾದೇಶಿಕ, ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡಬಾರದು. ರಾಜ್ಯ ಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡಬೇಕು ಎಂಬ ನಿಯಮ ಇದೆ. ಸೈಟ್‌ಗಳ ಮ್ಯಾನುವಲ್ ಹರಾಜು ಬಗ್ಗೆ ಬುಡಾ ಅಧಿಕಾರಿಗಳೇ ನೇರವಾಗಿ ಪ್ರಾದೇಶಿಕ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ. ಹೌದು ಬುಡಾ ಅಧಿಕಾರಿಗಳು ಪ್ರತಿಯೊಂದು ಜಾಹೀರಾತನ್ನು ಇಂಡಿಯನ್ ಎಕ್ಸ್‌ಪ್ರೆಸ್, ಪ್ರಜಾವಾಣಿಗೆ ಕೊಟ್ಟಿದ್ದು, ಮಾರ್ಚ್ 16, 17 ರಂದು ಆನ್‌ಲೈನ್ ಆಕ್ಷನ್ ಮೆನ್ಷನ್ ಮಾಡಿ ಜನರಿಗೆ ಕನ್ಪ್ತೂಸ್ ಮಾಡಿದ್ದಾರೆ. ಲೋಕವಾರ್ತೆ, ಲೋಕಧ್ವನಿ ಪತ್ರಿಕೆಗೆ ಮ್ಯಾನುವಲ್ ಆಕ್ಷನ್ ಕೊಟ್ಟಿದ್ದಾರೆ ಎಂದರು.

ಇದನ್ನೂ ಓದಿ:ಪೊಲೀಸರ ಸೈಟ್​ ಅಡ ಇಟ್ಟು ಕೋಟ್ಯಂತರ ಸಾಲ ಪಡೆದು ವಂಚನೆ: ದಿ ಅಂಬರೀಶ್ ಆಪ್ತ ಅಮರಾವತಿಯ ವಂಚನೆ ಕೇಸ್​ ಎಲ್ಲಿವರೆಗೆ ಬಂತು?

ಎಲ್ಲಾ ಜಾಹೀರಾತು ವಾರ್ತಾ ಇಲಾಖೆ ಮೂಲಕ‌ ನೀಡುವಾಗ ಇದನ್ನೇಕೆ ಡೈರೆಕ್ಟ್ ಕೊಟ್ಟಿದ್ದೀರಿ. ಹರಾಜು ಪ್ರಕ್ರಿಯೆಯ ವಿಡಿಯೋ ಪ್ರಕ್ರಿಯೆ ಮಾಡಬೇಕೆಂಬ ನಿಯಮ ಇದೆ. ಆದರೆ ಅಧಿಕಾರಿಗಳು ಮಾಡಿದ ವಿಡಿಯೋದಲ್ಲಿ ಆಡಿಯೋ ಏನೂ ಇಲ್ಲ. ವಿಡಿಯೋ ಮೇಲೆ ಅನುಮಾನವಿದ್ದು, ನಕಲಿ ವಿಡಿಯೋ ಪ್ರೊಡ್ಯೂಸ್ ಮಾಡಿದ್ದಾರೆ. ಜಾಹೀರಾತು ನೀಡಿದ್ದೂ ಸುಳ್ಳು, ವಿಡಿಯೋಗ್ರಾಫಿ ಮಾಡಿದ್ದು ಸುಳ್ಳು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶೀಘ್ರ ಕ್ರಮವಾಗಬೇಕು ಎಂದು ರಾಜು ಟೋಪಣ್ಣವರ್ ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ