ಅನರ್ಹ ವ್ಯಕ್ತಿಗೆ ಪರಿಹಾರ, ನಿವೇಶನಗಳ ಅಕ್ರಮ ಹಂಚಿಕೆ: ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ ವೇಳೆ ಹಲವು ಅಕ್ರಮಗಳು ಬಯಲಿಗೆ

ದಾಖಲೆಗಳ ಪರಿಶೀಲನೆ ವೇಳೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು, ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದೆ, ಅನರ್ಹ ವ್ಯಕ್ತಿಗೆ ಪರಿಹಾರ ಹಂಚಿಕೆ ಮಾಡಿರುವ ವಿವರಗಳು ಪತ್ತೆಯಾದವು.

ಅನರ್ಹ ವ್ಯಕ್ತಿಗೆ ಪರಿಹಾರ, ನಿವೇಶನಗಳ ಅಕ್ರಮ ಹಂಚಿಕೆ: ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ ವೇಳೆ ಹಲವು ಅಕ್ರಮಗಳು ಬಯಲಿಗೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 23, 2021 | 7:37 PM

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (Bengaluru Development Authority – BDA) ಐದು ಕಚೇರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau – ACB) ಅಧಿಕಾರಿಗಳು ಮಂಗಳವಾರ ನಡೆಸಿದ ದಾಳಿಯಲ್ಲಿ ಹಲವು ಅಕ್ರಮಗಳು ಬಯಲಾಗಿವೆ. ನಗರದ ಎಚ್​ಎಸ್​ಆರ್ ಲೇಔಟ್​ನಲ್ಲಿರುವ ಕಚೇರಿಯಲ್ಲಿ ಎಸಿಬಿ ಡಿವೈಎಸ್​ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ನಡೆಯಿತು.

ದಾಖಲೆಗಳ ಪರಿಶೀಲನೆ ವೇಳೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು, ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದೆ, ಅನರ್ಹ ವ್ಯಕ್ತಿಗೆ ಪರಿಹಾರ ಹಂಚಿಕೆ ಮಾಡಿರುವ ವಿವರಗಳು ಪತ್ತೆಯಾದವು. ಇದರ ಜೊತೆಗೆ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪದ ಜೊತೆಗೆ ಉತ್ತರಹಳ್ಳಿಯ ಭಾರತ್ ಎಚ್​ಬಿಸಿಎಸ್ ಲೇಔಟ್​ನಲ್ಲಿ ಹಲವು ಅಕ್ರಮಗಳು ನಡೆದಿರುವ ವಿಚಾರವು ಬೆಳಕಿಗೆ ಬಂತು.

ನಕ್ಷೆ ರೀತ್ಯಾ ಕಟ್ಟಡ ನಿರ್ಮಾಣ ಮಾಡದಿದ್ದರೂ ಅಧಿಕಾರಿಗಳು ಕ್ರಮ ಜರುಗಿಸಿಲ್ಲ. ಹಂಚಿಕೆಯಾದ ಸ್ಥಳ ಬಿಟ್ಟು ಬೇರೆಡೆ ನಿವೇಶನಗಳನ್ನು ಹಂಚಲಾಗಿದೆ. ಹಳೇ ಬಡಾವಣೆಯ ಖಾಲಿ ನಿವೇಶನಗಳಲ್ಲಿ‌ ಶೆಡ್‌ ನಿರ್ಮಿಸಲು ಖಾಸಗಿ ವ್ಯಕ್ತಿಗಳಿಗೆ ಅವಕಾಶ ನೀಡಲಾಗಿದೆ. ನಿವೇಶನ ಬೇರೊಬ್ಬರಿಗೆ ನೀಡಿ, ಭೂಸ್ವಾಧೀನಪಡಿಸಿಕೊಂಡ ನಿವೇಶನದ ಮಾಲೀಕರಿಗೆ ಪರಿಹಾರ ನೀಡುವಲ್ಲಿ ಲೋಪ ಎಸಗಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಹರಾಜು ಪ್ರಕ್ರಿಯೆ ಇಲ್ಲದೆ ಮೂಲೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ವಿಭಾಗವಾರು ಕಡತಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಕೆಂಪೇಗೌಡ ಬಡಾವಣೆಗೆ ಸಂಬಂಧಿಸಿದಂತೆ ಭೂಮಾಲೀಕರನ್ನು ಬಿಟ್ಟು 3ನೇ ವ್ಯಕ್ತಿಗೆ ಪರಿಹಾರ ನೀಡಿರುವುದು ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ. ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹದಳದ ದಾಳಿ ವೇಳೆ ಪತ್ತೆಯಾದ ಅಕ್ರಮಗಳು 1) ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆ 75 ಕೋಟಿ ಬೆಲೆ ಬಾಳುವ 6 ನಿವೇಶನಗಳನ್ನ ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆ ಸೃಷ್ಠಿಸಿರುವುದು ಪತ್ತೆ 2) ಕೆಂಗೇರಿ ಹೊಬಳಿಯಲ್ಲಿ ಉಲ್ಲಾಳ ಗ್ರಾಮದಲ್ಲಿ 1.5 ಕೋಟಿ ಮೌಲ್ಯದ ಅಕ್ರಮ ನಿವೇಶನಗಳು ಮಂಜೂರು 3) ಸ್ಯಾಟಲೈಟ್ ಟೌನ್ ಬಳಿ 80 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು 4) ಚಂದ್ರಾಲೇಔಟ್ ನಲ್ಲಿ2400 ಚದರ ಅಡಿಯ 5 ಕೋಟಿ ಮೌಲ್ಯದ ನಿವೇಶನ ಅಕ್ರಮ ಮಂಜೂರು 5) ಕೆಂಪೇಗೌಡ ಲೇಔಟ್ ನಲ್ಲಿ 30 ಲಕ್ಷ ಮೌಲ್ಯದ ಅಕ್ರಮ ನಿವೇಶನ ಮಂಜೂರು 6) ಒಂದು ನಿವೇಶನವನ್ನ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ನೊಂದಣಿ ಈ ಕುರಿತು ತನಿಖೆ 7) ವಿಶ್ವೇಶ್ವರಯ್ಯ ಲೇಔಟ್ ನಲ್ಲಿ 52 ಲಕ್ಷ ಮೌಲ್ಯದ ನಿವೇಶನ ಅಕ್ರಮವಾಗಿ ಮಂಜೂರು 8) ಅರ್ಕಾವತಿ ಲೇಔಟ್ ನಲ್ಲಿ ಪಲಾನುಭವಿಗಳಿಗಲ್ಲದೆ ಬೇರೆಯವರಿಗೆ ನಿವೇಶನ ಮಂಜೂರು 9) ಕೆಂಪೇಗೌಡ ಲೇಔಟ್, ಶಿವರಾಮ ಕಾರಂತ ಲೇಔಟ್, ಮೊದಲಾದ ಕಡೆ ಅಧಿಕಾರಿಗಳು ಮತ್ತು ಮದ್ಯವರ್ತಿಗಳೊಂದಿಗೆ ಅಕ್ರಮವಾಗಿ ಸೈಟ್ ಗಳ ಮಂಜೂರು 10) ಕೋಟ್ಯಾಂತರ ಮೌಲ್ಯದ ಪರಿಹಾರ ಧನ ಸದರಿ ವ್ಯಕ್ತಿಗಳಿಗೆ ನೀಡದೆ ಬೇರೆಯವರಿಗೆ ನೀಡಿರುವುದು ಪತ್ತೆ 11) ಅಂಜನಾಪುರ ಬಡಾವಣೆಯಲ್ಲಿ ಮೂಲ ಮಾಲೀಕನಿಗಲ್ಲದೆ ಬೇರೆಯವರಿಗೆ ನಿವೇಶನ ನೀಡಿರುವ ದಾಖಲೆ ಪತ್ತೆ 12) ಅರ್ಕಾವತಿ ಲೇಔಟ್ ಸೇರಿದಂತೆ ಇತರೆ ಕಡೆ ಅರ್ಜಿದಾರರಿಂದ ಹಣ ಪಡೆದು ನಿವೇಶನ ನೀಡದೆ ತೊಂದರೆ ಕೊಟ್ಟಿರುವ ಅಧಿಕಾರಿಗಳು 13) ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ವಿಳಂಬ ಮಾಡಿರುವುದು ಪತ್ತೆ

ಇದನ್ನೂ ಓದಿ: ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ: 75 ಕೋಟಿ ಮೌಲ್ಯದ 6 ನಿವೇಶನಗಳ ನಕಲಿ ದಾಖಲೆ ಪತ್ತೆ ಇದನ್ನೂ ಓದಿ: ಎಸಿಬಿ ದಾಳಿ ಸ್ವಾಗತಿಸುವೆ, ದಾಖಲೆಗಳ ನೀಡಿ ಸಹಕರಿಸುವೆ, ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯಲಿ -ಬಿಡಿಎ ಅಧ್ಯಕ್ಷ ವಿಶ್ವನಾಥ್

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್