ಮನೆಗೆ ಬಂದವರನ್ನು ಪ್ರೇರೇಪಿಸಿದ ಶಾಸಕ ರೇಣುಕಾಚಾರ್ಯ; 100ಕ್ಕೂ ಹೆಚ್ಚು ಯುವಕರಿಂದ ನೇತ್ರದಾನದ ಪತ್ರಕ್ಕೆ ಸಹಿ

| Updated By: preethi shettigar

Updated on: Nov 28, 2021 | 12:54 PM

ಶಾಸಕರ ಮಾತಿಗೆ ಒಪ್ಪಿದ 100ಕ್ಕೂ ಹೆಚ್ಚು ಯುವಕರು ನೇತ್ರದಾನದ ಪತ್ರಕ್ಕೆ ಸಹಿ ಹಾಕಿದ್ದಾರೆ. ಬಳಿಕ ಮಾತನಾಡಿದ ಶಾಸಕ ರೇಣುಕಾಚಾರ್ಯ ಅವರು, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಕನಿಷ್ಟ ಐದು ಸಾವಿರ ಜನರಿಂದ ನೇತ್ರದಾನ ಪತ್ರಕ್ಕೆ ಸಹಿ ಹಾಕಿಸುವ ಗುರಿ ಇದೆ ಎಂದು ಹೇಳಿದ್ದಾರೆ.

ಮನೆಗೆ ಬಂದವರನ್ನು ಪ್ರೇರೇಪಿಸಿದ ಶಾಸಕ ರೇಣುಕಾಚಾರ್ಯ; 100ಕ್ಕೂ ಹೆಚ್ಚು ಯುವಕರಿಂದ ನೇತ್ರದಾನದ ಪತ್ರಕ್ಕೆ ಸಹಿ
100ಕ್ಕೂ ಹೆಚ್ಚು ಯುವಕರು ನೇತ್ರದಾನದ ಪತ್ರಕ್ಕೆ ಸಹಿ ಹಾಕಿದ್ದಾರೆ
Follow us on

ದಾವಣಗೆರೆ: ಶಾಸಕ ರೇಣುಕಾಚಾರ್ಯ ಅವರು ತಮ್ಮ ಮನೆಗೆ ಬಂದ ಯುವಕರನ್ನು ನೇತ್ರದಾನಕ್ಕೆ ಪ್ರೇರೇಪಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ತಮ್ಮ ನಿವಾಸಕ್ಕೆ ಬಂದ ವಿದ್ಯಾರ್ಥಿಗಳಿಗೆ ನಟ ಪುನೀತ್ ರಾಜ್​ ಕುಮಾರ್ (Puneeth rajkumar)​ ಅವರ ಸಾಧನೆಯ ಬಗ್ಗೆ ಹೇಳಿ, ನೇತ್ರದಾನಕ್ಕೆ ಪ್ರೇರೇಪಣೆ ನೀಡಿದ್ದಾರೆ. ಶಾಸಕರ ಮಾತಿಗೆ ಒಪ್ಪಿದ 100ಕ್ಕೂ ಹೆಚ್ಚು ಯುವಕರು ನೇತ್ರದಾನದ (Eye donation) ಪತ್ರಕ್ಕೆ ಸಹಿ ಹಾಕಿದ್ದಾರೆ. ಬಳಿಕ ಮಾತನಾಡಿದ ಶಾಸಕ ರೇಣುಕಾಚಾರ್ಯ ಅವರು, ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಕನಿಷ್ಟ ಐದು ಸಾವಿರ ಜನರಿಂದ ನೇತ್ರದಾನ ಪತ್ರಕ್ಕೆ ಸಹಿ ಹಾಕಿಸುವ ಗುರಿ ಇದೆ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಅವಳಿ ತಾಲೂಕಿನಲ್ಲಿ ಐದು ಸಾವಿರ ಜನರು ನೇತ್ರಾದಾನ ಮಾಡಿಸಲು ಸಚಿವ‌ ರೇಣುಕಾಚಾರ್ಯರು ಸಂಕಲ್ಪ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ನೇತ್ರದಾನದಿಂದ ಪ್ರೇರಣೆಗೊಂಡ‌ ರೇಣುಕಾಚಾರ್ಯ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಹೊನ್ನಾಳಿ ಶಾಸಕ ರೇಣುಕಾಚಾರ್ಯರ ಇಡೀ ಕುಟುಂಬ ನೇತ್ರದಾನ ಮಾಡಲು ನಿರ್ಧಾರ
ಈಗಾಗಲೇ ಮರಣೋತ್ತರವಾಗಿ ನೇತ್ರದಾನ ಮಾಡಲು ರೇಣುಕಾಚಾರ್ಯ ಕುಟುಂಬ ಶಿವಮೊಗ್ಗ ಮೂಲದ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ಶಾಸಕರ ಅವಿಭಕ್ತ ಕುಟುಂಬದಲ್ಲಿ ಒಟ್ಟು 62 ಜನರಿದ್ದಾರೆ. ಈ 62 ಮಂದಿ ನೇತ್ರದಾನ ಮಾಡಲು ನೋಂದಣಿ ಮಾಡಿಸಿದ್ದಾರೆ ಎಂದು ರೇಣುಕಾರ್ಚಾರ್ಯರ ಪತ್ನಿ ಸುಮಾ ತಿಳಿಸಿದ್ದಾರೆ. ಹೊನ್ನಾಳಿಯಲ್ಲಿ ನಟ ಪುನೀತ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನೇತ್ರದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ವಿಶೇಷ ನಮನ ಸಲ್ಲಿಸಲಾಯಿತು. ಇದೇ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಶಾಸಕ ರೇಣುಕಾಚಾರ್ಯ, ಪತ್ನಿ ಸುಮಾ, ಪುತ್ರ ಚಂದನ, ಪುತ್ರಿ ಚೇತನಾ ನೇತ್ರದಾನಕ್ಕೆ ಸಹಿ ಹಾಕಿದ್ದರು.

ಇದನ್ನೂ ಓದಿ:

ಪುನೀತ್ ರಾಜಕುಮಾರ್ ಅವರ ಆದರ್ಶ ಮತ್ತು ಸಮಾಜಮುಖಿ ಚಿಂತನೆ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ: ಎಮ್ ಪಿ ರೇಣುಕಾಚಾರ್ಯ

ಪುನೀತ್ ನೇತ್ರ ಕ್ರಾಂತಿ; ದಾವಣಗೆರೆಯ 100ಕ್ಕೂ ಹೆಚ್ಚು ಜನರಿಂದ ನೇತ್ರದಾನ ವಾಗ್ದಾನ ಪತ್ರಕ್ಕೆ ಸಹಿ

 

Published On - 12:47 pm, Sun, 28 November 21