ರೈಲಿನಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣ ವಾಪಸ್; ರೈಲ್ವೆ ಪೊಲೀಸರಿಂದ ಪ್ರಶಂಸನೀಯ ಕಾರ್ಯ

ಠಾಣೆಯ ಸಿಬ್ಬಂದಿಗಳು ಕರ್ತವ್ಯದಲ್ಲಿರುವಾಗ ಬ್ಯಾಗ್ ಹುಡುಕುವಂತೆ ಸೂಚಿಸಿದ ಮೇರೆಗೆ ಸಿಬ್ಬಂದಿಯವರು ಹುಡುಕಿಕೊಂಡು ಹೋದಾಗ ಆ ಬ್ಯಾಗ್ ಅದೇ ಸ್ಥಳದಲ್ಲಿ ಇತ್ತು. ಹೀಗೆ ಸಿಕ್ಕ ಬ್ಯಾಗ್​ನ್ನು ಪೊಲೀಸ್ ಸಿಬ್ಬಂದಿ ಠಾಣೆಗೆ ಒಪ್ಪಿಸಿದ್ದರು.

ರೈಲಿನಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನಾಭರಣ ವಾಪಸ್; ರೈಲ್ವೆ ಪೊಲೀಸರಿಂದ ಪ್ರಶಂಸನೀಯ ಕಾರ್ಯ
ರೈಲ್ವೆ ಪೊಲೀಸರು ಚಿನ್ನಾಭರಣವನ್ನು ಮರಳಿಸಿದ ದೃಶ್ಯ
Edited By:

Updated on: Aug 11, 2021 | 12:48 PM

ದಾವಣಗೆರೆ: ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸುವ ರೈಲು ಗಾಡಿ ಸಂಖ್ಯೆ 06242 ನಲ್ಲಿ ಪ್ರಯಾಣಿಕರಾದ ರುಕಾಯಭಾನು ಮುಲ್ಲಾ ಚಿನ್ನಾಭರಣ ಬಿಟ್ಟು ಹೋಗಿದ್ದಾರೆ. ಹುಬ್ಬಳ್ಳಿಯಿಂದ ರಾಣೆಬೆನ್ನೂರಿಗೆ ರೈಲು ಗಾಡಿಯಲ್ಲಿ ಪ್ರಾಯಾಣಿಸಿಕೊಂಡು ಬಂದ ರುಕಾಯಭಾನು ರಾಣೆಬೆನ್ನೂರಿನಲ್ಲಿ ಇಳಿಯುವಾಗ ತಮ್ಮ ಕಪ್ಪು ಹಸಿರು ಮಿಶ್ರಿತ ಬ್ಯಾಗನ್ನು ರೈಲಿನಲ್ಲಿಯೇ ಬಿಟ್ಟು ಇಳಿದಿದ್ದರು. ಇದನ್ನು ಮನಗಂಡ ದಾವಣಗೆರೆ ರೈಲ್ವೆ ಪೊಲೀಸರು ಚಿನ್ನಾಭರಣವನ್ನು ಮರಳಿಸಿದ್ದು, ಆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ರೈಲು ರಾಣೆಬೆನ್ನೂರು ನಿಲ್ದಾಣ ಬಿಟ್ಟ ಬಳಿಕ ರುಕಾಯಭಾನು ಮುಲ್ಲಾ ಅರಿವಿಗೆ ಬಂದಿದೆ. ತಕ್ಷಣವೆ ಇಂತಹ ರೈಲಿನಲ್ಲಿ, ಇಂತಹ ಬೋಗಿಯಲ್ಲಿ, ಈ ಬಣ್ಣದ ಬ್ಯಾಗ್ ಬಿಟ್ಟಿದ್ದೇವೆ ಎಂದು‌ ರೇಲ್ವೆ ಪೊಲೀಸರಿಗೆ ಪೋನ್ ಮಾಡಿ ಮಾಹಿತಿ ನೀಡಿದ್ದಾರೆ. ದಾವಣಗೆರೆ ರೇಲ್ವೆ ಪೊಲೀಸ್ ಠಾಣೆಗೆ ಕರೆ ಬಂದ ಬಳಿಕ ಇನ್ಸ್​ಪೆಕ್ಟರ್​ ಮುಸ್ತಾಕ್ ಅಹ್ಮದ್ ನೇತ್ರತ್ವದ ತಂಡ ಜಾಗೃತವಾಗಿದೆ.

ಠಾಣೆಯ ಸಿಬ್ಬಂದಿಗಳು ಕರ್ತವ್ಯದಲ್ಲಿರುವಾಗ ಬ್ಯಾಗ್ ಹುಡುಕುವಂತೆ ಸೂಚಿಸಿದ ಮೇರೆಗೆ ಸಿಬ್ಬಂದಿಯವರು ಹುಡುಕಿಕೊಂಡು ಹೋದಾಗ ಆ ಬ್ಯಾಗ್ ಅದೇ ಸ್ಥಳದಲ್ಲಿ ಇತ್ತು. ಹೀಗೆ ಸಿಕ್ಕ ಬ್ಯಾಗ್​ನ್ನು ಪೊಲೀಸ್ ಸಿಬ್ಬಂದಿ ಠಾಣೆಗೆ ಒಪ್ಪಿಸಿದ್ದರು. ಅದನ್ನು ಪರಿಶೀಲಿಸಿ ನೋಡಿದಾಗ ಸುಮಾರು 60 ಗ್ರಾಂ ಬಂಗಾರದ ಒಡವೆಗಳು, 430 ರೂಪಾಯಿ ನಗದು. ಜತೆಗೆ ಬಟ್ಟೆಗಳು ಇದ್ದವು. ಹೀಗಾಗಿ ಬ್ಯಾಗ್​ನ ವಾರಸುದಾರಾದ ರುಕಾಯಭಾನು ಮುಲ್ಲಾ ಮತ್ತು ಅವರ ಗಂಡ ಮಹಮ್ಮದ್ ಯಾಸೀನ್ ಮುಲ್ಲಾರನ್ನು ಕರೆಯಿಸಿದ ಪೊಲೀಸರು ಬ್ಯಾಗ್​ ಒಪ್ಪಿಸಿದ್ದಾರೆ.

ಬ್ಯಾಗ್​ ಅನ್ನು ಇನ್ಸ್​ಪೆಕ್ಟರ್​ ಮುಸ್ತಾಕ್ ಅಹ್ಮದ್ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ವಾರಸುದಾರರಿಗೆ ಒಪ್ಪಿಸಲಾಯಿತು. ಈ ವೇಳೆ ಭಾವುಕರಾದ ಬ್ಯಾಗ್ ಕಳೆದುಕೊಂಡಿದ್ದ ರುಕಾಯಭಾನು ಪೊಲೀಸರಿಗೆ ವಂದಿಸಿದ್ದರು. ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಹೋಗಿದ್ದೇವು. ಬರುವಾಗ ಬ್ಯಾಗ್​ನಲ್ಲಿ ಬಂಗಾರದ ಒಡೆವೆ ಇಟ್ಟಿದ್ದೇವು. ಆದರೆ ನಾಲ್ಕು ಬ್ಯಾಗ್​ನಲ್ಲಿ ಮೂರು ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಿದ್ದೇವು. ದೇವರ ರೂಪದಲ್ಲಿ ಪೊಲೀಸರು ಬಂದು ನಮ್ಮ ಒಡೆವೆ ಕಾಪಾಡಿದ್ದಾರೆ ಎಂದು ಬ್ಯಾಗ್ ಕಳೆದುಕೊಂಡ ರುಕಾಯಭಾನು ಪೊಲೀಸರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
ಶಹಬ್ಬಾಸ್​! ಚಿನ್ನದ ಬ್ರೇಸ್​ಲೆಟ್ ಸಿಕ್ತು ಅಂತಾ ಜೇಬಿಗೆ ಇಳಿಸದೆ ಮಾಲೀಕನಿಗೆ ಹಿಂದಿರುಗಿಸಿದ ಏರ್​ಪೋರ್ಟ್​ ಸಿಬ್ಬಂದಿ

ಚಿನ್ನಾಭರಣ ವ್ಯಾಪಾರಿಯ ಕಾರಿನ ಕಿಟಕಿ ಒಡೆದು 10 ಲಕ್ಷ ನಗದು ಕಳವು, ಯಾವೂರಲ್ಲಿ?

Published On - 12:47 pm, Wed, 11 August 21