ದಾವಣಗೆರೆ: ವಿಷ ಕುಡಿದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ ಹರಿಹರ ಶಾಸಕ; ಮಾನವೀಯ ಕೆಲಸಕ್ಕೆ ಮೆಚ್ಚುಗೆ
Harihara MLA Ramappa: ಆಂಬುಲೆನ್ಸ್ ಬರುವುದು ತಡವಾಗಿದ್ದರಿಂದ ಅಲ್ಲೇ ಇದ್ದ ಶಾಸಕರು ಮಾನವೀಯ ಕಾರ್ಯ ಮಾಡಿದ್ದಾರೆ. ಶಾಸಕ ರಾಮಪ್ಪ ಸ್ವಂತ ವಾಹನದಲ್ಲೇ ವಿಷ ಕುಡಿದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ದಾವಣಗೆರೆ: ವಿಷ ಕುಡಿದಿದ್ದ ವ್ಯಕ್ತಿಯನ್ನು ಹರಿಹರ ಶಾಸಕ ಆಸ್ಪತ್ರೆಗೆ ಸೇರಿಸಿದ ಮಾನವೀಯ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ದೀಟೂರು ಗ್ರಾಮದಲ್ಲಿ ನಡೆದಿದೆ. ಆಂಬುಲೆನ್ಸ್ ಬರುವುದು ತಡವಾಗಿದ್ದರಿಂದ ಅಲ್ಲೇ ಇದ್ದ ಶಾಸಕರು ಮಾನವೀಯ ಕಾರ್ಯ ಮಾಡಿದ್ದಾರೆ. ಶಾಸಕ ರಾಮಪ್ಪ ಸ್ವಂತ ವಾಹನದಲ್ಲೇ ವಿಷ ಕುಡಿದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಉತ್ತಮ ಕಾರ್ಯಕ್ಕೆ, ಹರಿಹರ ಶಾಸಕ ರಾಮಪ್ಪಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕೊರೊನಾ ಸಂದರ್ಭದಲ್ಲಿ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಕಾರ್ಯಗಳು ಜನರ ಮೆಚ್ಚುಗೆ ಗಳಿಸಿದ್ದವು. ರೇಣುಕಾಚಾರ್ಯ ಕೊವಿಡ್19 ನಿರ್ವಹಣೆಗೆ ಕೊವಿಡ್ ಕೇರ್ ಸೆಂಟರ್ನಲ್ಲಿ ಸೋಂಕಿತರ ಜೊತೆ ತಂಗಿದ್ದರು. ಅವರಿಗೆ ಆಹಾರ ಒದಗಿಸುವುದು, ಚಪಾತಿ ಮಾಡಿಕೊಡುವುದು, ಧನಸಹಾಯ ಮಾಡುವುದು, ಮನರಂಜನಾ ಕಾರ್ಯಕ್ರಮ, ಬೀಳ್ಕೊಡುಗೆ, ಸಿಹಿ ಊಟ ಹೀಗೆ ಹಲವು ಕಾರ್ಯಗಳನ್ನು ನಡೆಸಿದ್ದರು. ಆ ಕೆಲಸಗಳು ಕೂಡ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಹರಿಹರದ ಶಾಸಕ ರಾಮಪ್ಪ ಮಾನವೀಯ ಕಾರ್ಯ ಜನರಿಂದ ಉತ್ತಮ ಅಭಿಪ್ರಾಯ ಪಡೆದುಕೊಂಡಿದೆ.
ವಿಷಾಹಾರ ಸೇವಿಸಿ 49ಕ್ಕೂ ಹೆಚ್ಚು ಜನರು ಅಸ್ವಸ್ಥ ವಿಷಾಹಾರ ಸೇವಿಸಿ 49ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಭಾನುವಳ್ಳಿಯಲ್ಲಿ ನಡೆದಿದೆ. ಭಾನುವಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಆದರೆ, ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಸ್ವಸ್ಥರಿಗೆ ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ನಿನ್ನೆ ರಾತ್ರಿ (ಆಗಸ್ಟ್ 9) ತೊಟ್ಟಿಲು ಕಾರ್ಯಕ್ರಮ ಹಿನ್ನೆಲೆ ಸಿಹಿ ಅಡುಗೆ ಮಾಡಲಾಗಿತ್ತು. ಸಿಹಿ ಅಡುಗೆ ಸೇವಿಸಿದ 45ಕ್ಕೂ ಹೆಚ್ಚು ಜನರಿಗೆ ವಾಂತಿ ಉಂಟಾಗಿದೆ. ತಕ್ಷಣವೇ ಹರಿಹರದ ಸಾರ್ವಜನಿಕ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿದೆ. ಚಿಕಿತ್ಸೆಯ ನಂತರ ಬಹುತೇಕ ಎಲ್ಲರೂ ಗುಣಮುಖ ಆಗಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಗುವೊಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ತೊಟ್ಟಿಲು ಕಾರ್ಯಕ್ರಮದಲ್ಲಿ ವಿಷಾಹಾರ ಸೇವನೆ ಮಾಡಿದ್ದರಿಂದ ಹೀಗೆ ಮಕ್ಕಳು, ವಯಸ್ಕರು ಸೇರಿ 49 ಜನ ಅಸ್ವಸ್ಥರಾಗಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಜಪಾನ್ ಮಿಯಾ ವಾಕಿ ಮಾದರಿಯಲ್ಲಿ ಹಸಿರು ಬೆಳೆಸಲು ಮುಂದಾದ ಮಹಾನಗರ ಪಾಲಿಕೆ
ದಾವಣಗೆರೆ: ಅನೈತಿಕ ಪೊಲೀಸ್ ಗಿರಿ; ಕೆಆರ್ಎಸ್ ಪಕ್ಷದ ಮೂರು ಕಾರ್ಯಕರ್ತರ ಬಂಧನ
(Poison intake Poison consumed person admitted to Hospital by Harihar MLA Ramappa)
Published On - 4:45 pm, Tue, 10 August 21