ರೀಲ್ಸ್ ಹುಚ್ಚು! ಚೆಕ್ ಡ್ಯಾಂ ರೀಲ್ಸ್ ಮಾಡುವಾಗ ಇಬ್ಬರು ಯುವಕರು ನೀರುಪಾಲು, ರೀಲ್ಸ್ ಮಾಡ್ತಿದ್ದ 6 ಮಹಿಳಾ ಪೊಲೀಸ್​ ಸಿಬ್ಬಂದಿ ಸೀದಾ ಮನೆಗೆ!

| Updated By: ಸಾಧು ಶ್ರೀನಾಥ್​

Updated on: Oct 01, 2022 | 2:37 PM

Reels Craze: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಗನಹಳ್ಳಿ ಚೆಕ್ ಡ್ಯಾಂ ನಲ್ಲಿ ಮುಳುಗಿ ಇಬ್ಬರು ಯುವಕರು ಜಲಸಮಾಧಿಯಾಗಿರುವ ದುರ್ಘಟನೆ ನಡೆದಿದೆ. ಹರಿಹರ ನಗರದ ಆಶ್ರಯ ಬಡಾವಣೆಯ ಪವನ್ (25) ಮತ್ತು ಪ್ರಕಾಶ್ (24) ಎಂಬ ಸ್ನೇಹಿತರಿಬ್ಬರು ಸಾವನ್ನಪ್ಪಿದ್ದಾರೆ.

ರೀಲ್ಸ್ ಹುಚ್ಚು! ಚೆಕ್ ಡ್ಯಾಂ ರೀಲ್ಸ್ ಮಾಡುವಾಗ ಇಬ್ಬರು ಯುವಕರು ನೀರುಪಾಲು, ರೀಲ್ಸ್ ಮಾಡ್ತಿದ್ದ 6 ಮಹಿಳಾ ಪೊಲೀಸ್​ ಸಿಬ್ಬಂದಿ ಸೀದಾ ಮನೆಗೆ!
ಚೆಕ್ ಡ್ಯಾಂ ರೀಲ್ಸ್ ಮಾಡುವಾಗ ಇಬ್ಬರು ಯುವಕರು ನೀರುಪಾಲು
Follow us on

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಗನಹಳ್ಳಿ ಚೆಕ್ ಡ್ಯಾಂ ನಲ್ಲಿ ಮುಳುಗಿ ಇಬ್ಬರು ಯುವಕರು ಜಲಸಮಾಧಿಯಾಗಿರುವ ದುರ್ಘಟನೆ ನಡೆದಿದೆ. ಹರಿಹರ ನಗರದ ಆಶ್ರಯ ಬಡಾವಣೆಯ ಪವನ್ (25) ಮತ್ತು ಪ್ರಕಾಶ್ (24) ಎಂಬ ಸ್ನೇಹಿತರಿಬ್ಬರು ಸಾವನ್ನಪ್ಪಿದ್ದಾರೆ. ಪ್ರಕಾಶ ರೀಲ್ಸ್ ಮಾಡಲು ಹೋಗಿ ನೀರಲ್ಲಿ ಬಿದ್ದಿದ್ದಾನೆ. ಅವನನ್ನ ರಕ್ಷಿಸಲು ಹೋದ ಪವನ್ ಸಹ ನೀರಲ್ಲಿ ಮುಳುಗಿ ಕಣ್ಮರೆಯಾಗಿದ್ದಾನೆ. ಹರಿಹರದ ರಾಘವೇಂದ್ರ ಮಠದ ಬಳಿ ತುಂಗಭದ್ರ ನದಿಯಲ್ಲಿ ಓರ್ವನ ಶವ ಪತ್ತೆಯಾಗಿದೆ. ಇನ್ನೊಬ್ಬನ ಶವಕ್ಕಾಗಿ ಶೋಧ‌ ನಡೆದಿದೆ.

ಕಳೆದ ಮೂರು ದಿನಗಳ ಹಿಂದೆ ಯುವಕರಿಬ್ಬರೂ ನೀರಲ್ಲಿ ಮುಳುಗಿದ್ದಾರೆ. ಮತ್ತೊಬ್ಬ ಸ್ನೇಹಿತ, ದೃಶ್ಯ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಅಗ್ನಿಶಾಮಕ ದಳ ಹಾಗು ಪೊಲೀಸರಿಂದ ಮೃತದೇಹಕ್ಕಾಗಿ ಶೋಧ ಮುಂದುವರಿದಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರೀಲ್ಸ್ ಮಾಡ್ತಿದ್ದ 6 ಮಹಿಳಾ ಪೊಲೀಸ್​ ಸಿಬ್ಬಂದಿ ಸೀದಾ ಮನೆಗೆ 

ರೀಲ್ಸ್​ ಎಂಬ ಮಾಯೆಯ ಬೆನ್ನುಹತ್ತಿ ಅನೇಕರು ತಮ್ಮ ಜೀವನಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿಯೂ ಇಂತಹುದೇ ರೀಲ್ಸ್​ ಹಾವಳಿಗೆ 6 ಮಹಿಳಾ ಪೊಲೀಸ್​ ಸಿಬ್ಬಂದಿ ಸೀದಾ ಮನೆಗೆ ಹೋಗಿದ್ದಾರೆ. ರೀಲ್ಸ್ ಮಾಡುತ್ತಿದ್ದ 6 ಪೊಲೀಸ್​ ಸಿಬ್ಬಂದಿಯನ್ನು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿ & ಐಜಿಪಿ) ಸಸ್ಪೆಂಡ್​ ಮಾಡಿ ಆದೇಶ ನೀಡಿದ್ದಾರೆ. ಉಳಿದ ಅಧಿಕಾರಿಗಳು, ಸಿಬ್ಬಂದಿ ರೀಲ್ಸ್​ ಮಾಡದಂತೆ ಡಿಜಿ & ಐಜಿಪಿ ಖಡಕ್ ಆದೇಶ ಹೊರಡಿಸಿದ್ದಾರೆ.

ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ರಾಯಚೂರು: ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಳ್ಳೆ ಫ್ರೆಂಡ್ಸ್ ಆಗಿದ್ವಿ.. ನೆಮ್ಮದಿಯಾಗಿ ಇರಿ ಅಂತ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ಘಟನೆ ನಡೆದಿದೆ.

ಸಾರಿಕಾ (16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಸಾರಿಕಾ, ಸಿಂಧನೂರು ಪಟ್ಟಣದ ಖಾಸಗಿ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ. ಸಿಂಧನೂರು ಪಟ್ಟಣದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಿಂಧನೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದೆ.