ದಾವಣಗೆರೆ, ಡಿಸೆಂಬರ್ 17: ನಿಮ್ಮ ಮನೆಗಳಿಗೆ ಟಿಪ್ಪು ನಿಲಯ ಅಥವಾ ಘಜ್ನಿ ಔರಂಗಜೇಬ ನಿಲಯ ಎಂದು ಇಟ್ಟುಕೊಳ್ಳಿ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವುದನ್ನು ಖಂಡಿಸುತ್ತೇವೆ ಎಂದು ಕಾಂಗ್ರೆಸ್ ವಿರುದ್ದ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ವಾಗ್ದಾಳಿ ಮಾಡಿದ್ದಾರೆ. ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರಿಗೆ ಟಿಪ್ಪು, ಬಾಬರ್, ಔರಂಗಜೇಬು, ಘಜ್ನಿ ಮಹಮ್ಮದ್ ಹೆಸರು ಮಾತ್ರ ನೆನಪು ಬರುತ್ತೆ. ಶಾಸಕರು, ಸಚಿವರು ಟಿಪ್ಪು ಜಪ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಓಟ್ ಬ್ಯಾಂಕ್ಗಾಗಿ ಅಲ್ಪಸಂಖ್ಯಾತರ ಜಪ ಮಾಡುತ್ತಾರೆ. ಕುಕ್ಕರ್ ಬ್ಲಾಸ್ಟ್ ಆದಾಗ ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ಸಹೋದರರು ಅಂತ ಹೇಳುತ್ತಾರೆ. ಮೈಸೂರು ಮಹರಾಜ, ಸುತ್ತುರು ಶ್ರೀಗಳು ಸೇರಿದಂತೆ ದಾರ್ಶನಿಕರ ಹೆಸರು ಇಡೀ. ಆದರೆ ಓಟ್ ಬ್ಯಾಂಕ್ಗಾಗಿ ಈ ರೀತಿ ಮತಾಂದರ ಹೆಸರು ಜಪ ಮಾಡುತ್ತಾರೆ ಎಂದಿದ್ದಾರೆ.
ನಿಮಗೆ ರೈತರ ಬಗ್ಗೆ ಕಾಳಜಿ ಇದ್ದಾರೆ 25 ಸಾವಿರ ರೂಪಾಯಿ ಪರಿಹಾರ ಕೊಡಿ. ನೀವು ಘೋಷಣೆ ಮಾಡಿದ ಭರವಸೆಗಳು ಭರವಸೆಯಾಗಿಯೇ ಉಳಿದಿವೆ. ಈ ಸರ್ಕಾರ ಬಂದಾಗಿನಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಬಿಡುಗಡೆಯಾಗಿಲ್ಲ. ರೈತರಿಗೆ ನೌಕರರಿಗೆ ನೀವು ನೀಡಿದ ಭರವಸೆ ಈಡೇರಿಲ್ಲ. ಆದ್ದರಿಂದ ನಾವು ಹೊನ್ನಾಳಿಯಲ್ಲಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಮೈಸೂರು ವಿಮಾನ ನಿಲ್ದಾಣ ನಾಮಕರಣ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಜಟಾಪಟಿ, ಕ್ರೆಡಿಟ್ ವಾರ್ ಆರಂಭ
ಕಾಂಗ್ರೆಸ್ ಔತಣಕೂಟಕ್ಕೆ ಬಿಜೆಪಿ ಶಾಸಕರು ಹೋದ ವಿಚಾರವಾಗಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಆಹ್ವಾನ ಮಾಡಿದ್ದಕ್ಕೆ ಔತಣಕೂಟಕ್ಕೆ ಮಾತ್ರ ಹೋಗಿದ್ದಾರೆ. ಔತಣ ಕೂಟಕ್ಕೆ ಹೋಗಿದ್ದಾರೆ ಎಂದರೆ ಪಕ್ಷ ವಿರೋಧಿ ಚಟುವಟಿ ಮಾಡುತ್ತಾರೆ ಎಂದರ್ಥನಾ ಎಂದು ಪ್ರಶ್ನಿಸಿದ್ದಾರೆ. ಅವರೇ ಹೇಳಿದ್ದಾರಲ್ಲ ಆಹ್ವಾನವಿತ್ತು ಆದ್ದರಿಂದ ಹೋಗಿ ಬಂದಿದ್ದೇವೆ ಎಂದು ಹೇಳಿದ್ದಾರೆ ಎಂದರು.
ವಿಜಯಪುರದಲ್ಲಿ ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಹೇಳಿಕೆ ನೀಡಿದ್ದು, ಟಿಪ್ಪು ಸುಲ್ತಾನ್ ಮೈಸೂರಿನ ಹುಲಿ, ಹೆಸರಿಟ್ಟರೆ ತಪ್ಪೇನು? ಟಿಪ್ಪು ಸುಲ್ತಾನ್ ಮೈಸೂರು ಸಂಸ್ಥಾನವನ್ನು ಅಭಿವೃದ್ಧಿ ಮಾಡಿದರು. ಮೈಸೂರು ಏರ್ಪೋರ್ಟ್ಗೆ ಟಿಪ್ಪು ಹೆಸರಿಟ್ಟರೆ ಸಂತೋಷಪಡುವೆ. ಮೊದಲು ಜಾತಿ ಧರ್ಮದ ಕೋಲಾಹಲ ಬಿಡಬೇಕು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.