ದಾವಣಗೇರಿ: ದಾವಣಗೆರೆ (Davangere) ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ನಡೆದ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರಿಗೆ ಸ್ಥಳಿಯರು ಕೇಳಿದ ಪ್ರಶ್ನೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉತ್ತರ ನೀಡಲು ತಡಕಾಡಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಜನರು ಪ್ರಶ್ನೆಗಳ ಹೊಳೆಯನ್ನೇ ಹರಿಸಿದ್ದಾರೆ.
ಚುನಾವಣೆ ಸುಧಾರಣೆ ಬಗ್ಗೆ ಮಾತಾಡುತ್ತೀರಿ, ನೀವು ಆರು ಸಲ ಶಾಸಕರಾಗಿದ್ದೀರಿ. ಮೊದಲ ಚುನಾವಣೆಯಲ್ಲಿ ಎಷ್ಟು ಖರ್ಚು ಮಾಡಿದ್ದೀರಿ. ಕಳೆದ ಚುನಾವಣೆಯಲ್ಲಿ ಎಷ್ಟು ಖರ್ಚು ಮಾಡಿದ್ದೀರಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ . ಇದಕ್ಕೆ ಉತ್ತರಿಸಲು ವಿಶ್ವೇಶ್ವರ ಹೆಗಡೆ ಕಾಗೇರಿಯವರು ಉತ್ತರ ಹೇಳಲು ತಡಕಾಡಿದ್ದಾರೆ.
ದಾನ ಮಾರಾಟಕ್ಕಿಲ್ಲ ಎಂಬ ಅಭಿಯಾನ ಆರಂಭಿಸಿದರೆ, ಚುನಾವಣೆ ಸುಧಾರಣೆ ಆಗುತ್ತದೆ ಎಂದು ಹೇಳುತ್ತೀರಿ. ಮತಗಳ ಖರೀದಿದಾರರ ತಡೆಯ ಬೇಕಲ್ಲವೆ ? ಎಂದು ಹಿರಿಯ ರೈತ ಮುಖಂಡ ತೇಜಸ್ವಿ ಪಟೇಲ್ ಪ್ರಶ್ನೆ ಕೇಳಿದ್ದಾರೆ.
ಎಲ್ಲದಕ್ಕೂ ಶಾಸಕಾಂಗವನ್ನೇ ಗುರಿ ಮಾಡುವುದು ಸರಿಯಲ್ಲ. ಉಳಿದ ಅಂಗಗಳು ಎನು ಮಾಡುತ್ತಿವೆ ಎಂಬುದರ ಬಗ್ಗೆ ಜನ ಗಮನ ಹರಿಸಬೇಕಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರಿಸಿದ್ದಾರೆ. .