ದಾವಣಗೆರೆಯಲ್ಲಿ ಮೊಬೈಲ್ ಟವರ್ ಜನರೇಟರ್​ಗೆ ಆಕಸ್ಮಿಕ ಬೆಂಕಿ! ಭಾರಿ ಪ್ರಮಾಣದಲ್ಲಿ ಆವರಿಸಿದ ಹೊಗೆ

| Updated By: sandhya thejappa

Updated on: Sep 25, 2021 | 8:46 AM

ಭಾರಿ ಪ್ರಮಾಣದಲ್ಲಿ ಹೊಗೆ ಆವರಿಸಿದೆ. ಸಕಾಲಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಿಯಂತ್ರಣ ಕಾರ್ಯದಲ್ಲಿ ತೊಡಗಿದೆ. ಮೊಬೈಲ್ ಟವರ್ ಜನರೇಟರ್ ಟಾಟಾ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ದಾವಣಗೆರೆಯಲ್ಲಿ ಮೊಬೈಲ್ ಟವರ್ ಜನರೇಟರ್​ಗೆ ಆಕಸ್ಮಿಕ ಬೆಂಕಿ! ಭಾರಿ ಪ್ರಮಾಣದಲ್ಲಿ ಆವರಿಸಿದ ಹೊಗೆ
ಜನರೇಟರ್​ನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ
Follow us on

ದಾವಣಗೆರೆ: ರಾಜ್ಯದಲ್ಲಿ ಸಾಲು ಸಾಲು ಬೆಂಕಿ ದುರಂತಗಳು ಸಂಭವಿಸುತ್ತಿವೆ. ದಿನಕ್ಕೊಂದು ಬೆಂಕಿ ಅನಾಹುತ ನಡೆಯುತ್ತಿದೆ. ದಾವಣಗೆರೆಯಲ್ಲಿ ಇಂದು (ಸೆ.25) ಮೊಬೈಲ್ ಟವರ್ ಜನರೇಟರ್​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಜಯದೇವ ವೃತ್ತದ ಬಳಿ ಬರುವ ಮಲ್ಲಿಕಾರ್ಜುನ ಲಾಡ್ಜ್ ಹಿಂಭಾಗ ಘಟನೆ ಸಂಭವಿಸಿದೆ. ಜನರೇಟರ್ ಹೊತ್ತಿ ಉರಿದಿದ್ದು, ಭಾರಿ ಪ್ರಮಾಣದಲ್ಲಿ ಹೊಗೆ ಆವರಿಸಿದೆ. ಸಕಾಲಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಬೆಂಕಿ ನಿಯಂತ್ರಣ ಕಾರ್ಯದಲ್ಲಿ ತೊಡಗಿದೆ. ಮೊಬೈಲ್ ಟವರ್ ಜನರೇಟರ್ ಟಾಟಾ ಕಂಪನಿಗೆ ಸೇರಿದ್ದು ಎಂದು ತಿಳಿದುಬಂದಿದೆ.

ರಾಸಾಯನಿಕ ಕಂಪೆನಿಯಲ್ಲಿ ಬಾಯ್ಲರ್ ಸ್ಫೋಟ
ಬೆಂಗಳೂರಿನ ಕೆಮಿಕಲ್ ಕಂಪನಿ ಒಂದರಲ್ಲಿ ಬಾಯ್ಲರ್ ಸ್ಫೋಟಗೊಂಡ ಘಟನೆ ನಿನ್ನೆ (ಸೆ.24) ನಡೆದಿದೆ. ಅತ್ತಿಬೆಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟವಾಗಿದೆ. ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟದಿಂದ ಗಾಳಿಯಲ್ಲಿ ವಾಸನೆ ಉಂಟಾಗಿದೆ. ಗಾಳಿಯಲ್ಲೆಲ್ಲಾ ಕೆಮಿಕಲ್ ತುಂಬಿ ಬಟ್ಟೆಗಳಲ್ಲಿಯೂ ವಾಸನೆ ಉಂಟಾಗಿದೆ. ಈ ಕೆಮಿಕಲ್ ವಾಸನೆಗೆ ಹೆದರಿ ಜನರು ಫ್ಯಾಕ್ಟರಿ ಸಮೀಪಕ್ಕೆ ತೆರಳುತ್ತಿಲ್ಲ.

ಬಾಯ್ಲರ್ ಬ್ಲಾಸ್ಟ್​ಗೆ ಇಡೀ ಪ್ರದೇಶದಲ್ಲಿ ಕೆಮಿಕಲ್ ವಾಸನೆ ಹರಡಿದೆ. ಉಸಿರು ತೆಗೆದುಕೊಳ್ಳಲೂ ಸ್ಥಳೀಯರು ಯೋಚಿಸುವಂತಾಗಿದೆ. ಕೂಡಲೇ ಕಂಪನಿ ಸ್ಥಳಾಂತರಿಸಲು ಸ್ಥಳೀಯರು ಆಗ್ರಹಿಸಿದ್ದಾರೆ. ಲೇಕ್ ಕೆಮಿಕಲ್ ಕಂಪನಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಜನರನ್ನು ಪೊಲೀಸರು ಚದುರಿಸಿದ್ದಾರೆ. ಬಾಯ್ಲರ್ ಬ್ಲಾಸ್ಟ್​ನಿಂದ ಮೂರು ನಾಲ್ಕು ಕಿ.ಮಿ.ವರೆಗೂ ವಿಷಮಯ ವಾತಾವರಣ ಉಂಟಾಗಿದೆ.

ಇದನ್ನೂ ಓದಿ

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಹೈದರಾಬಾದ್-ಪಂಜಾಬ್: ಸೋತರೆ ಬಹುತೇಕ ಟೂರ್ನಿಯಿಂದ ಔಟ್

ಹಾಸನ: ಅಂತ್ಯಸಂಸ್ಕಾರ ಮಾಡಿದ 3 ತಿಂಗಳ ಬಳಿಕ ಸಮಾಧಿಯಿಂದ ಶವ ನಾಪತ್ತೆ; ವಾಮಾಚಾರಕ್ಕಾಗಿ ಶವ ಹೊತ್ತೊಯ್ದಿರುವ ಶಂಕೆ

(Tata company mobile tower generator is on fire at Davanagere)

Published On - 8:44 am, Sat, 25 September 21