ದಾವಣಗೆರೆ: ಇಲ್ಲಿರುವುದು ಸುಮ್ಮನೇ ಅಲ್ಲಿರುವುದು ನಮ್ಮನೆ ಎಂಬ ಮಾತೊಂದಿದೆ. ಅಂದ್ರೆ ಸತ್ತ ಮೇಲೆ ಸ್ಮಶಾನದಲ್ಲಿ(Graveyard) ಸ್ಥಳ ಶಾಶ್ವತ ಎಂಬುದು ಈ ಮಾತಿನ ಅರ್ಥ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಸ್ಮಶಾನಕ್ಕೆ ಹೋಗಲು ದಾರಿಯೇ ಇಲ್ಲ. ದಾರಿ ಇಲ್ಲದ ಹಿನ್ನೆಲೆ ಅಜ್ಜಿಯೊಬ್ಬರ ಶವವನ್ನ(Dead Body) ಬರೋಬ್ಬರಿ ಆರು ಗಂಟೆಗಳ ಕಾಲ ರಸ್ತೆಯಲ್ಲಿ ಇಡಲಾಗಿತ್ತು. ಹೀಗಾಗಿ ಇಡಿ ಗ್ರಾಮದಲ್ಲಿ ಒಂದು ರೀತಿ ಬಿಗುವಿನ ವಾತಾವರಣ ಉಂಟಾಗಿತ್ತು.
ದಾವಣಗೆರೆ ಮಹಾನಗರ ಪಾಲಿಕೆಯ ಯರಗುಂಟೆ ಗ್ರಾಮದಲ್ಲಿ ಒಂದು ರೀತಿಯ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದ ಹಿರಿಯ ಜೀವ ದ್ಯಾಮಜ್ಜಿ ಸಾವನ್ನಪ್ಪಿದ್ದರು. ಏಳು ದಶಕಗಳ ಕಾಲ ಗ್ರಾಮಕ್ಕೆ ಆದರ್ಶವಾಗಿ ಬದುಕಿದ್ದ ದ್ಯಾಮಜ್ಜಿ ಸಾವನ್ನಪ್ಪಿದಾಗ ಶವ ತೆಗೆದುಕೊಂಡು ಹೋಗಲು ರಸ್ತೆ ಇಲ್ಲದ ಸ್ಥಿತಿ ಇದ್ದರಿಂದ ದಾರಿಗಾಗಿ ಗ್ರಾಮಸ್ಥರೆಲ್ಲಾ ಸೇರಿ ಶವ ರಸ್ತೆಯಲ್ಲಿ ಇಟ್ಟು ದಾವಣಗೆರೆಯಿಂದ ಕೊಂಡಜ್ಜಿ ಹೋಗುವ ರಸ್ತೆಯನ್ನೆ ಬಂದ್ ಮಾಡಿದ್ದರು. ವಿಚಾರ ತಿಳಿದು ದಾವಣಗೆರೆ ತಹಶೀಲ್ದಾರ ಬಸನಗೌಡ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು ಪರಿಸ್ಥಿತಿ ಅರಿತು ಪೊಲೀಸ್ ಡಿಆರ್ ವ್ಯಾನ್ ಗಳು ಸಹ ಬಂದವು. ಹೀಗಾಗಿ ಪರಿಸ್ಥಿತಿ ಕೈಮೀರುವಸ್ಥಿತಿ ತಲುಪಿತ್ತು. ಇದನ್ನೂ ಓದಿ: Markandeya Dam: ವರ್ಷದಲ್ಲಿ ಎರಡನೇ ಬಾರಿಗೆ ತುಂಬಿದ ಮಿನಿ ಕೆ.ಆರ್.ಎಸ್ ಡ್ಯಾಂ, ಪ್ರವಾಸಿಗರಿಗೆ ಹಬ್ಬ
ಸ್ಮಶಾನಕ್ಕೆ ಹೋಗಲು ಶತ ಶತಮಾನಗಳಿಂದ ಒಂದು ದಾರಿ ಮಾಡಲಾಗಿತ್ತು. ಅದೇ ಮಾರ್ಗದಲ್ಲಿ ಶವ ತೆಗೆದುಕೊಂಡು ಹೋಗಲಾಗುತ್ತಿತ್ತು. ದಾರಿ ನಡುವೆ ದೇವರ ಕಟ್ಟೆ ಇದೆ. ಆ ಕಟ್ಟೆಯ ಬಳಿಯ ಶವದ ಮುಂದೆ ಹಿಡಿದುಕೊಂಡು ಹೋಗುವ ಮಡಿಕೆ ಒಡೆಯುವುದು ಸಂಪ್ರದಾಯ. ಆದ್ರೆ ಇಲ್ಲಿದ್ದ ದಾರಿಯೇ ಬಂದ್ ಆಗಿದೆ. ಇಲ್ಲಿನ ಪ್ರಭಾವಿಗಳಾದ ನಾರಪ್ಪ ಎಂಬುವವರು ಅದು ನಮ್ಮ ಸ್ಥಳ ಎಂದು ಕೋರ್ಟ್ ನಿಂದ ಆದೇಶ ಪಡೆದು ದಾರಿಗೆ ದೊಡ್ಡ ಗಾತ್ರದ ಕಲ್ಲು ಹಾಕಿ ಬಂದ್ ಮಾಡಿದ್ದಾರೆ. ಮೇಲಾಗಿ ಮಹಾನಗರ ಪಾಲಿಕೆಗೆ ಸೇರಿದ ಸರ್ಕಾರ ಜಾಗವನ್ನ ಸಹ ಕಬಳಿಸಲಾಗಿದೆ ಎಂಬುವುದು ಸ್ಥಳೀಯರ ಆರೋಪ. ಕೋರ್ಟ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬುದು ಆರೋಪ. ಹೀಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ ಎಂದು ಗೊತ್ತಾಗಿದ್ದೆ ತಡ ಸ್ವತಹ ದಾವಣಗೆರೆ ತಹಶೀಲ್ದಾರ ಬಸವನಗೌಡ ಕೊಟ್ಟೂರು ಅವರು ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ಬಂದರು. ಪರಿಶೀಲನೆ ನಡೆಸಿದ್ರು. ಇಲ್ಲಿ ಮೊದಲಿನಿಂದಲೂ ದಾರಿ ಇದೇ ಎಂದು ಸ್ಥಳೀಯರು ಹೇಳಿದರು. ಸ್ಮಶಾನ ಅಂದ್ರೆ ಅದಕ್ಕೊಂದು ದಾರಿ ಇದ್ದೆ ಇರಬೇಕು ಎಂಬುದು ತಹಶೀಲ್ದಾರವಾದ. ಆದ್ರೆ ಯಾವುದು ದಾರಿ ಎಂಬುದು ಸ್ಪಷ್ಟವಾಗಿ ಹೇಳುವ ಸ್ಥಿತಿಯಲ್ಲಿ ತಹಶೀಲ್ದಾರ ಇರಲಿಲ್ಲ. ಇತ್ತ ಹೋರಾಟ ಮಾತ್ರ ತೀವ್ರವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಸ್ಮಶಾನಕ್ಕೆ ದಾರಿ ಮಾಡುವುದಾಗಿ ಹೇಳಿ ತಹಶೀಲ್ದಾರರು ಹೊರಟು ಹೋದರು.
ಹೀಗೆ ತಹಶೀಲ್ದಾರ ಹೋಗುತ್ತಿದ್ದಂತೆ ಹೋರಾಟ ಮಾಡುತ್ತಿದ್ದ ಜನರೆಲ್ಲಾ ಶವ ಎತ್ತಿಕೊಂಡರು. ಇನ್ನೊಂದು ದಾರಿ ಸ್ಮಶಾನಕ್ಕಿದೆ. ಅದು ಮೂರರಿಂದ ನಾಲ್ಕು ಕಿಲೋ ಮೀಟರ್ ಸುತ್ತು ಹಾಯ್ದು ಬರಬೇಕು. ಅತ್ತ ಹೋಗುತ್ತಾರೆ ಎಂದು ಪೊಲೀಸರು ಸುಮ್ಮನಾದ್ರು. ಆದ್ರೆ ಶವ ಹೊತ್ತ ಜನರೆಲ್ಲಾ ನೇರವಾಗಿ ಬಂದ್ ಆದ ರಸ್ತೆಯಲ್ಲಿ ಶವ ತೆಗೆದುಕೊಂಡು ಹೋಗಿದ್ದಾರೆ. ಕಲ್ಲಿನಿಂದ ಬಂದ್ ಮಾಡಿದ ರಸ್ತೆಯಲ್ಲಿ ಶವ ಸಾಗಿಸಿ ನಮ್ಮ ಸಂಪ್ರದಾಯ ಬಿಡಲ್ಲ ಎಂದು ರೇಗಾಡಿದ್ದಾರೆ. ಆದ್ರೆ ಇಲ್ಲಿ ಆಗಿರುವ ತಪ್ಪಾದ್ರು ಏನು? ದಾಖಲೆಗಳು ತಪ್ಪಾದದ್ದು ಹೇಗೆ? ಎಂಬುದರ ಬಗ್ಗೆ ಜಿಲ್ಲಾಡಳಿತ ಪರಿಶೀಲನೆ ಮಾಡಸಬೇಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ