ಅಪ್ಪನ ಆಸ್ತಿಯಲ್ಲಿ ಸಿಗಬೇಕಾದ ಪಾಲಿಗಾಗಿ 22 ವರ್ಷಗಳಿಂದ ಹೋರಾಟ; ಪಾಲು ಕೇಳಿದ ಅವಿವಾಹಿತ ಮಹಿಳೆಗೆ ಅಣ್ಣಂದಿರೆ ವೈರಿಗಳು

| Updated By: ಆಯೇಷಾ ಬಾನು

Updated on: Nov 03, 2021 | 4:35 PM

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಮ್ಮತ್ರಹಳ್ಳಿ ಗ್ರಾಮದ ನಿವಾಸಿ ಸಾವಿತ್ರಮ್ಮಗೆ ವಿಜಯಕುಮಾರ ಹಾಗೂ ಚಿದಾನಂದಪ್ಪ ಅಂತಾ ಇಬ್ಬರು ಅಣ್ಣಂದಿರಿದ್ದಾರೆ. ರಕ್ತ ಹಂಚಿಕೊಂಡು ಹುಟ್ಟಿದ ಇವರೇ ಈಗ ಸಾವಿತ್ರಮ್ಮನಿಗೆ ಶತ್ರುಗಳಾಗಿದ್ದಾರೆ.

ಅಪ್ಪನ ಆಸ್ತಿಯಲ್ಲಿ ಸಿಗಬೇಕಾದ ಪಾಲಿಗಾಗಿ 22 ವರ್ಷಗಳಿಂದ ಹೋರಾಟ; ಪಾಲು ಕೇಳಿದ ಅವಿವಾಹಿತ ಮಹಿಳೆಗೆ ಅಣ್ಣಂದಿರೆ ವೈರಿಗಳು
ಅಪ್ಪನ ಆಸ್ತಿಯಲ್ಲಿ ಸಿಗಬೇಕಾದ ಪಾಲಿಗಾಗಿ 22 ವರ್ಷಗಳಿಂದ ಹೋರಾಟ; ಪಾಲು ಕೇಳಿದ ಅವಿವಾಹಿತ ಮಹಿಳೆಗೆ ಅಣ್ಣಂದಿರೆ ವೈರಿಗಳು
Follow us on

ದಾವಣಗೆರೆ: ಸಾವಿತ್ರಮ್ಮ ಎಂಬ ಅವಿವಾಹಿತ ಮಹಿಳೆ ಅಪ್ಪನ ಆಸ್ತಿಗಾಗಿ 22 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾಳೆ. ಆದ್ರೆ ಆಕೆಗೆ ಇದರ ಬದಲಿಗೆ ಸಿಕ್ಕಿದ್ದು ಹಲ್ಲೆ ನಿಂದನೆ, ಪೊಲೀಸ್ ಠಾಣೆಗೆ ಅಲೆದಾಟ ಬಿಟ್ಟರೇ ಏನು ಆಗಿಲ್ಲ. ಸ್ವಂತ ಸಹೋದರರಿಂದಲೇ ಸಾವಿತ್ರಮ್ಮನ ಮೇಲೆ ಹಲ್ಲೆಯಾಗುತ್ತಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಮ್ಮತ್ರಹಳ್ಳಿ ಗ್ರಾಮದ ನಿವಾಸಿ ಸಾವಿತ್ರಮ್ಮಗೆ ವಿಜಯಕುಮಾರ ಹಾಗೂ ಚಿದಾನಂದಪ್ಪ ಅಂತಾ ಇಬ್ಬರು ಅಣ್ಣಂದಿರಿದ್ದಾರೆ. ರಕ್ತ ಹಂಚಿಕೊಂಡು ಹುಟ್ಟಿದ ಇವರೇ ಈಗ ಸಾವಿತ್ರಮ್ಮನಿಗೆ ಶತ್ರುಗಳಾಗಿದ್ದಾರೆ. ಕಾರಣ ಇವರು ತಂದೆ ಆಸ್ತಿಯಲ್ಲಿ ಸಾವಿತ್ರಮ್ಮನಿಗೆ ಭಾಗ ನೀಡುತ್ತಿಲ್ಲ. ಮೇಲಾಗಿ ಸಾವಿತ್ರಮ್ಮ ಅವಿವಾಹಿತೆ. ಹಲವಾರು ಸಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಆದ್ರೆ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸರಿಗೆ ಸಾವಿತ್ರಮ್ಮನ ಸಮಸ್ಯೆಗೆ ಸ್ಪಂದಿಸಲು ಸಮಯವೇ ಇಲ್ಲದಂತಾಗಿದೆ.

ಸಾವಿತ್ರಮ್ಮನ ತಂದೆ ಹೊಂಬಣ್ಣ ಅವರು ಕಮ್ಮತ್ರಹಳ್ಳಿ, ಪುಣಬಘಟ್ಟಹೊಸಕೋಟೆ ಸೇರಿ ಒಂಬತ್ತು ವಿವಿಧ ಸರ್ವೇ ನಂಬರ್ ನಲ್ಲಿ 26.18 ಎಕರೆ ಜಮೀನು ಹೊಂದಿದ್ದರು. ಇದರಲ್ಲಿ ಕಾನೂನು ಪ್ರಕಾರ ಸಾವಿತ್ರಮ್ಮನಿಗೆ ಪಾಲು ಸಿಗಬೇಕು. 26 ಎಕರೆಯಲ್ಲಿ ಮೂರು ಭಾಗ ಮಾಡಿದರೇ ಕನಿಷ್ಟ ಎಂಟು ಎಕರೆ ಜಮೀನು ಬರಬೇಕು. ಕನಿಷ್ಟ ಒಂದು ಕಡೆಯಾದ್ರು ಭೂಮಿ ಕೊಡಿ ಅಂದ್ರೆ ಕೊಡುತ್ತಿಲ್ಲ. ಮೇಲಾಗಿ ಸಾವಿತ್ರಮ್ಮನನ್ನು ಮನೆಯಿಂದ ಹೊರ ಹಾಕಿದ್ದಾರೆ. ಅವಳ ಖರ್ಚು ವೆಚ್ಚಕ್ಕೆ ಹಣ ಕೂಡಾ ಕೊಡುತ್ತಿಲ್ಲ. ಹೀಗಾದ್ರೆ ಬದುಕುವುದು ಹೇಗೆ. ಕೋರ್ಟ ಕಚೇರಿ ಅಂತಾ ಸುತ್ತಾಡಲು ಸಾವಿತ್ರಮ್ಮನಿಗೆ ದುಡ್ಡು ಸಹವಿಲ್ಲ. ಹೀಗಾಗಿ ಸಾವಿತ್ರಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ. ಮೇಲಾಗಿ ಈಗ ಮೆಕ್ಕೆಜೋಳ ಬಂದಿದೆ. ತೆನೆ ಮುರಿದುಕೊಂಡು ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದೇನೆ. ಜಮೀನಿಗೆ ಹೋದ್ರೆ ಅಣ್ಣಂದಿರು ಹಲ್ಲೆ ಮಾಡಲು ಬರುತ್ತಾರೆ ಎಂದು ಸಾವಿತ್ರಮ್ಮ ಕಣ್ಣೀರು ಹಾಕಿದ್ದಾರೆ.

ಸಾವಿತ್ರಮ್ಮ ಕಳೆದ 22 ವರ್ಷಗಳಿಂದ ಆಸ್ತಿಗಾಗಿ ಹೋರಾಟ ಮಾಡುತ್ತಲೇ ಇದ್ದಾಳೆ. ಹಲವಾರು ಸಲ ಅರಸೀಕೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಆದ್ರೆ ಅವರು ಸಾವಿತ್ರಮ್ಮನ ದೂರಿನ ಬಗ್ಗೆ ಗಮನ ಹರಿಸುತ್ತಿಲ್ಲ. ಇದರಿಂದ ಅಸಹಾಯಕ ಹೆಣ್ಣು ಮಗಳು ಕಣ್ಣೀರು ಹಾಕುವಂತಾಗಿದೆ.

ಇದನ್ನೂ ಓದಿ: ಫಿಸಿಯೊಥೆರಪಿಗೆ ಬಂದಾಗ ಪುನೀತ್ ರಾಜಕುಮಾರ್​ಗೆ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿಲ: ಪಳನಿವೇಲ್, ಫಿಸಿಯೊಥೆರಪಿಸ್ಟ್