ಕರ್ನಾಟಕ ರಾಜ್ಯದ ಮೊದಲ ಹಿಮೋಫಿಲಿಯಾ ಸಂಸ್ಥೆ: 32 ವರ್ಷಗಳ ಸಾರ್ಥಕ ಸೇವೆಗೆ ಒಲಿದು ಬಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

| Updated By: Digi Tech Desk

Updated on: Nov 01, 2021 | 12:05 PM

Karnataka Rajyotsava 2021: ಸಣ್ಣ ಪುಟ್ಟ ಗಾಯಗಳಾದರೂ ರಕ್ತ ಶ್ರಾವ ಆಗಿ ದೇಹದ ಒಳಭಾಗದಲ್ಲಿ ಗಂಟುಗಳಾಗಿ ಮಕ್ಕಳು ಬಹುತೇಕ ಅಂಗವಿಕಲರಾಗುವ ಸಾಧ್ಯತೆ ಹೆಚ್ಚು. ಹೀಗೆ ರಕ್ತ ಹೆಪ್ಪು ಗಟ್ಟದಂತೆ ಫ್ಯಾಕ್ಟ ಕೊಡಬೇಕು. ಇದನ್ನು ಕೊಡುವ ಕೆಲಸ ಹಿಮೋಫಿಲಿಯಾ ಸಂಸ್ಥೆ ಮಾಡುತ್ತಿದೆ.

ಕರ್ನಾಟಕ ರಾಜ್ಯದ ಮೊದಲ ಹಿಮೋಫಿಲಿಯಾ ಸಂಸ್ಥೆ: 32 ವರ್ಷಗಳ ಸಾರ್ಥಕ ಸೇವೆಗೆ ಒಲಿದು ಬಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಡಾ. ಸುರೇಶ ಹಣಗವಾಡಿ
Follow us on

ದಾವಣಗೆರೆ: ಹಿಮೋಫಿಲಿಯಾ ಎಂಬ ಹೆಸರು ಬಹುತೇಕರಿಗೆ ಗೊತ್ತಿಲ್ಲ. ಇದನ್ನು ಕನ್ನಡದಲ್ಲಿ ಕುಸುಮ ರೋಗ ಎಂದು ಸಹ ಕರೆಯುತ್ತಾರೆ. ಕ್ಯಾನ್ಸರ್, ಏಡ್ಸ್ ಬಗ್ಗೆ ಬಹುತೇಕರಿಗೆ ಗೊತ್ತಿದೆ. ಆದರೆ ಮಕ್ಕಳನ್ನು ಕಾಡುವ ಈ ಕಾಯಿಲೆ ಹಿಮೋಫಿಲಿಯಾ ಬಗ್ಗೆ ಗೊತ್ತಿಲ್ಲ. ಸಾವಿರಾರು ಮಕ್ಕಳಲ್ಲಿ ಒಬ್ಬರಿಗೆ ಇದು ಬರುತ್ತದೆ. ಈ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೇ ಇದಕ್ಕೆ ಪರಿಹಾರವಾಗಿ ಸಂಸ್ಥೆ ಕಟ್ಟಿದ್ದಾರೆ. ಅದುವೇ ಹಿಮೋಫಿಲಿಯಾ ಸಂಸ್ಥೆ. ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜ್ ಪೆಥಾಲಜಿ ಪ್ರಾಧ್ಯಾಪಕ ಡಾ. ಸುರೇಶ ಹಣಗವಾಡಿ ಈ ಸಂಸ್ಥೆಯ ರೂವಾರಿ. ಇವರೂ ಕೂಡಾ ಹಿಮೋಫಿಲಿಯಾ ಕಾಯಿಲೆಯಿಂದ ಬಾಲ್ಯದಿಂದಲೂ ಹತ್ತಾರು ಹಿಂಸೆ ಅನುಭವಿಸಿದ್ದಾರೆ. ಹೀಗಾಗಿ ತನಗಾದ ಕಷ್ಟ ಇನ್ನೊಬ್ಬರಿಗೆ ಆಗಬಾರದು ಎಂದು ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ 1989-1990ರಲ್ಲಿ ಕರ್ನಾಟಕ ಹಿಮೋಫಿಲಿಯಾ ಸಂಸ್ಥೆಯನ್ನು ಆರಂಭಿಸಿದರು. ಸದ್ಯ 800ರಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿಯೇ ಇಂತಹವೊಂದು ಅಪರೂಪದ ಕಾಯಿಲೆಗಾಗಿ ಸೇವೆ ಮಾಡುತ್ತಿರುವ ಏಕೈಕ ಸಂಸ್ಥೆ ಎಂಬ ಖ್ಯಾತಿ ಇದಕ್ಕಿದೆ.

ಈ ಸಂಸ್ಥೆ ಇಷ್ಟೊಂದು ಮಟ್ಟಕ್ಕೆ ಬೆಳೆಯಲು ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಮಣ್ಯ ಕೂಡ ಕಾರಣ. ಅವರು ಈ ಸಂಸ್ಥೆಯ ರಾಯಭಾರಿ ಆಗಿ ಹತ್ತಾರು ಕಾರ್ಯಕ್ರಮ ನಡೆಸಿ ಸಂಸ್ಥೆ ಬೆಳೆಯಲು ಸಹಾಯ ಮಾಡಿದ್ದಾರೆ. ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟು ಸಂಸ್ಥೆ ಬೆಳೆಸಿದ್ದು ಡಾ. ಸುರೇಶ್ ಹಣಗವಾಡಿ. ಸಣ್ಣ ಪುಟ್ಟ ಗಾಯಗಳಾದರೂ ರಕ್ತ ಶ್ರಾವ ಆಗಿ ದೇಹದ ಒಳಭಾಗದಲ್ಲಿ ಗಂಟುಗಳಾಗಿ ಮಕ್ಕಳು ಬಹುತೇಕ ಅಂಗವಿಕಲರಾಗುವ ಸಾಧ್ಯತೆ ಹೆಚ್ಚು. ಹೀಗೆ ರಕ್ತ ಹೆಪ್ಪು ಗಟ್ಟದಂತೆ ಫ್ಯಾಕ್ಟ ಕೊಡಬೇಕು. ಇದನ್ನು ಕೊಡುವ ಕೆಲಸ ಹಿಮೋಫಿಲಿಯಾ ಸಂಸ್ಥೆ ಮಾಡುತ್ತಿದೆ.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂತಹ ಕಾಯಿಲೆ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಹಿಮೋಫಿಲಿಯಾ ರೋಗಿಗಳಿಗೆ ಬೇಕಾದ ಫ್ಯಾಕ್ಟ ಪೂರೈಕೆ ಆಗಬೇಕಾಗಿದೆ ಎಂದು ದಶಕಗಳಿಂದ ಡಾ.ಸುರೇಶ್ ಹಣಗವಾಡಿ ಹೋರಾಟ ಮಾಡುತ್ತಲೇ ಇದ್ದಾರೆ. ಸರ್ಕಾರ, ಸಾರ್ವಜನಿಕರು ಹೀಗೆ ಹತ್ತು ಹಲವಾರು ಜನರ ಸಹಕಾರದಿಂದ ಸಂಸ್ಥೆ ನಡೆಯುತ್ತಿದೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ಲಭ್ಯವಾಗುತ್ತಿದೆ. ಇಂತಹ ಅಪರೂಪದ ಸಂಸ್ಥೆಗೆ ಈಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಸಂತಸದ ವಿಚಾರ.

ಇದನ್ನೂ ಓದಿ:
Karnataka Rajyotsava 2021: ಕನ್ನಡಕ್ಕಿದೆ ಪ್ರಾದೇಶಿಕತೆಯ ಛಾಪು; ಆಯಾ ಸ್ಥಳ, ಜನಾಂಗಕ್ಕೆ ಅನುಗುಣವಾಗಿ ಬದಲಾಗುತ್ತದೆ ಆಡುನುಡಿ

Karnataka Rajyotsava 2021: ಸಾವಯವ ಕೃಷಿಕನಿಗೆ ಒಲಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Published On - 10:29 am, Mon, 1 November 21