Karnataka Rajyotsava 2021: ಸಾವಯವ ಕೃಷಿಕನಿಗೆ ಒಲಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಗುರುಲಿಂಗಪ್ಪ ಮೇಲ್ದೊಡ್ಡಿ ಮಾಡುವ ಸಾವಯವ ಕೃಷಿಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ, ಆಂಧ್ರ ಪ್ರದೇಶ, ಓಡಿಸಾ, ತೆಲಂಗಾಣ ಸೇರಿದಂತೆ ಐದಾರು ರಾಜ್ಯದಿಂದ ಕೃಷಿ ಅಧಿಕಾರಿಗಳು, ವಿಜ್ಜಾನಿಗಳು ಇವರ ಹೊಲಕ್ಕೆ ಭೇಟಿಕೊಟ್ಟು ಅಧ್ಯಯನ ನಡೆಸಿದ್ದಾರೆ.
ಬೀದರ್: ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದ ರೈತ ಗುರುಲಿಂಗಪ್ಪ ಮೇಲ್ದೊಡ್ಡಿ ಅವರು 2020-21ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಸರ್ಕಾರವು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಬಹು ಬೆಳೆ ಹಾಗೂ ದ್ವಿದಳ ಧಾನ್ಯ ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. 65 ವರ್ಷದ ಹಿರಿಯ ಜೀವಿಯಾದ ಇವರು ಪಿಯುಸಿವರೆಗೆ ಶಿಕ್ಷಣ ಒಡೆದುಕೊಂಡಿದ್ದು, ಕಳೆದ 45 ವರ್ಷದಿಂದ ಮಿಶ್ರ ಬೆಳೆಯಲ್ಲಿದೆ. ವಿಶೇಷವಾಗಿ ನಾಟಿ ತೊಗರಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಕಳೆದ 20 ವರ್ಷದಿಂದ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದು, 11 ವರ್ಷದಿಂದ ರೈತರು ಹಾಗೂ ಸಾರ್ವಜನಿಕರಿಗೆ ಸಾವಯವ ಕೃಷಿಯ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ.
ಕೃಷಿ ಅಧಿಕಾರಿಗಳು ಭೇಟಿ ಗುರುಲಿಂಗಪ್ಪ ಮೇಲ್ದೊಡ್ಡಿ ಮಾಡುವ ಸಾವಯವ ಕೃಷಿಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ, ಆಂಧ್ರ ಪ್ರದೇಶ, ಓಡಿಸಾ, ತೆಲಂಗಾಣ ಸೇರಿದಂತೆ ಐದಾರು ರಾಜ್ಯದಿಂದ ಕೃಷಿ ಅಧಿಕಾರಿಗಳು, ವಿಜ್ಜಾನಿಗಳು ಇವರ ಹೊಲಕ್ಕೆ ಭೇಟಿಕೊಟ್ಟು ಅಧ್ಯಯನ ನಡೆಸಿದ್ದಾರೆ.
ಗುರುಲಿಂಗಪ್ಪ ಮೇಲ್ದೊಡ್ಡಿ ಪಡೆದ ಪ್ರಶಸ್ತಿಗಳು ಗುರುಲಿಂಗಪ್ಪ ಮೇಲ್ದೊಡ್ಡಿ ಅವರ ಕೃಷಿ ಸೇವೆ ಪರಿಗಣಿಸಿ ರಾಜ್ಯ ಕೃಷಿ ಪಂಡಿತ್, ಸಾವಯವ ಕೃಷಿ ಪಂಡಿತ, ಧಾರವಾಡ ವಿಶ್ವವಿದ್ಯಾಲಯ ಶ್ರೇಷ್ಠ ಕೃಷಿ ಪ್ರಶಸ್ತಿ, 2013 ರಲ್ಲಿ ಗುಜರಾತ್ನಲ್ಲಿ ಉತ್ತಮ ಕೃಷಿಕ ಪ್ರಶಸ್ತಿ, 2017 ಮುಂಬೈನಲ್ಲಿ ಆಸ್ಪಿ ಕಂಪನಿಯಿಂದ ನಿವೃತ್ತ ಕೃಷಿ ಆಯುಕ್ತ ಪ್ರೋ, ಕೆಎಲ್ ಚಂದಾ ಅವರು 1 ಲಕ್ಷ ರೂಪಾಯಿ ನಗದಿನೊಂದಿಗೆ ಉತ್ತಮ ರೈತ ಪ್ರಶಸ್ತಿ ನೀಡಿ ಅಭಿನಂದಿಸಿದ್ದಾರೆ. ಕೃಷಿ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಸ್ಪೀ) ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದಲ್ಲಿ ಸಲ್ಲಿಸಿದವರಿಗೆ ನೀಡುವ 2017ನೇ ಸಾಲಿನ ಎಲ್.ಎಂ.ಪಟೇಲ್ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ 2021: ನಾಡಿನ ಸಮಸ್ತ ಜನತೆಗೆ ಶುಭಾಶಯ ತಿಳಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ