ದಾವಣಗೆರೆ: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪಶ್ರ(baraguru ramachandrappa,) ಅವರು ಬಂಡಾಯ ವೇದಿಕೆ ಕಾರ್ಯಕ್ರಮದಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ಇಂದು (ಜನವರಿ 29) ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ (Harihara) ಬಂಡಾಯ ವೇದಿಕೆ ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ ಭಾಗವಹಿಸಿದ್ದ ವೇಳೆ ಏಕಾಏಕಿ ಕುಸಿದುಬಿದ್ದಿದ್ದಾರೆ. ತಕ್ಷಣ ಅವರನ್ನು ಹರಿಹರದ ಅಕ್ಷಯ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ರಾಮಚಂದ್ರಪ್ಪ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧಾರ ಮಾಡಲಾಗಿದೆ. ಬಂಡಾಯ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬರಗೂರು ಅವರು ಭಾಷಣ ಮಾಡಿದ್ದಾರೆ. ನಂತರ ರಕ್ತದ ಒತ್ತಡದಲ್ಲಿ ಏರುಪೇರಾಗಿ ವೇದಿಕೆಯಲ್ಲೇ ಕುಸಿದುಬಿದ್ದಿದ್ದಾರೆ.
ಚೇತರಿಸಿಕೊಂಡಿರುವ ಬರಗೂರು ರಾಮಚಂದ್ರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕವಿಗೋಷ್ಠಿ ಉದ್ಘಾಟನೆ ನಂತರ ಸಭಾಂಗಣದ ಹೊರಗೆ ಪೋಸ್ಟರ್ ಬಿಡುಗಡೆ ಮಾಡಲು ಹೋಗಿದ್ದೆ. ಎಸ್ಸಿ ಎಸ್ಟಿ ಸ್ಪರ್ಧಾ ಪರೀಕ್ಷೆ ಗೆ ಪೋಸ್ಟರ್ ಬಿಡುಗಡೆ ಮಾಡಿದ್ವಿ.ಆ ಸಂದರ್ಭದಲ್ಲಿ ತಲೆ ಸುತ್ತು ಬಂತು. ಈ ಹಿನ್ನೆಲೆಯಲ್ಲಿ ಬೇಗ ಹೋಗಿ ಕಾರಲ್ಲಿ ಕುಳಿತುಕೊಂಡೆ. ನಂತರ ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದರು. ಕೆಲ ನಿಮಿಷಗಳ ಕಾಲ ನನಗೆ ಪ್ರಜ್ಞೆ ಇರಲಿಲ್ಲ. ನನಗೆ ಬಿಪಿ, ಶುಗರ್ ಇಲ್ಲ, ಆದರೆ ಇದೆಲ್ಲ ಆಗಿರುವ ಹಿನ್ನೆಲೆಯಲ್ಲಿ ECG, ಬಿಪಿ ಶುಗರ್ ಟೆಸ್ಟ್ ಮಾಡಿದ್ರು. ಹೆಚ್ಚು ಒತ್ತಡದಿಂದ ಈ ರೀತಿಯಾಗುತ್ತದೆ ಎಂದು ಹೇಳುತ್ತಾರೆ. ಡ್ರಿಪ್ಸ್ ಹಾಕಿದ್ರು. ವಿಶ್ರಾಂತಿ ಪಡೆದು ಈಗ ಡಿಸ್ಚಾರ್ಚ್ ಆಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅ ಕ್ಷಣದಲ್ಲಿ ಸ್ನೇಹಿತರಲ್ಲಿ ಆತಂಕ ಹುಟ್ಟಿಸಿದ್ದು ನಿಜ. ಕಾಳಜಿ ವಹಿಸಿದ ಸ್ನೇಹಿತರಿಗೂ ಮಾಧ್ಯಮ ಮಿತ್ರರಿಗೂ ಧನ್ಯವಾದಗಳು. ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಬೆಂಗಳೂರಿಗೆ ಹೋದ ಮೇಲೆ ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಿಸುತ್ತೇನೆ. ವೈದ್ಯರು ವಿಶ್ರಾಂತಿ ಬೇಕು ಎಂದು ಹೇಳಿದ್ದು, ಅದನ್ನು ಪಾಲಿಸುತ್ತೇನೆ ಎಂದು ಹೇಳಿದರು.
Published On - 4:08 pm, Sun, 29 January 23