ರಾಮನಗರ-ಚನ್ನಪಟ್ಟಣ ಅಭಿವೃದ್ಧಿ; ಅಧಿಕಾರಿಗಳ ಜೊತೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್

| Updated By: ಆಯೇಷಾ ಬಾನು

Updated on: Apr 11, 2021 | 7:49 AM

ರಾಮನಗರ ಹಾಗೂ ಚನ್ನಪಟ್ಟಣ ಅವಳಿ ನಗರಳನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ರಾಮನಗರ-ಚನ್ನಪಟ್ಟಣ ಅಭಿವೃದ್ಧಿ; ಅಧಿಕಾರಿಗಳ ಜೊತೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್
ಅಧಿಕಾರಿಗಳ ಜೊತೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ್
Follow us on

ರಾಮನಗರ: ರಾಜಧಾನಿ ಬೆಂಗಳೂರು ಹಾಗೂ ಅರಮನೆ ನಗರಿ ಮೈಸೂರು ಮಾರ್ಗದ ಆಯಕಟ್ಟಿನ ಜಾಗದಲ್ಲಿರುವ ನಗರಗಳು ಎಂದರೆ ರೇಷ್ಮೆನಗರಿ ರಾಮನಗರ ಹಾಗೂ ಬೊಂಬೆನಗರಿ ಚನ್ನಪಟ್ಟಣ. ಇದೀಗ ಈ ಎರಡು ನಗರಗಳನ್ನ ಅಭಿವೃದ್ಧಿಪಡಿಸಿ, ಸಿಲಿಕಾನ್ ಸಿಟಿಯ ಭಾರವನ್ನ ಕಡಿಮೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಅವಳಿ ನಗರಳನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ್ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಈಗಾಗಲೇ ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಬೆಂಗಳೂರು ನಗರದಲ್ಲಿ ಜನಸಾಂದ್ರತೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಪಾಯ ಕೂಡ ಇದೆ. ಹೀಗಾಗಿ ಜನಸಾಂದ್ರತೆ ಹಾಗೂ ಒತ್ತಡವನ್ನ ಕಡಿಮೆ ಮಾಡವ ನಿಟ್ಟಿನಲ್ಲಿ, ರಾಜಧಾನಿ ಬೆಂಗಳೂರಿನ ಸಮೀಪವೇ ಇರುವ ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನ ಹೆಚ್ಚು ಅಭಿವೃದ್ದಿಪಡಿಸಲು ಸರ್ಕಾರ ಮುಂದಾಗಿದೆ. ಈ ಮೂಲಕ ನವರಾಮನಗರ ಜಿಲ್ಲೆ ಮಾಡಲು ಸರ್ಕಾರದ ಪ್ಲಾನ್ ಆಗಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಾ. ಸಿಎನ್ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ

2007ರಲ್ಲಿ ರಾಮನಗರ ಜಿಲ್ಲಾಕೇಂದ್ರವಾಗಿ ಮಾರ್ಪಟ್ಟು, ಬೆಂಗಳೂರು ಸಮೀಪವೇ ಇದ್ದರೂ, ಅಷ್ಟಾಗಿ ಅಭಿವೃದ್ಧಿ ಕಂಡಿಲ್ಲ. ಇಂದಿಗೂ ಸಾಕಷ್ಟು ಸಮಸ್ಯೆಗಳು ಇವೆ. 1995ರಲ್ಲಿ ಅವಳಿ ನಗರಗಳ ಬಗ್ಗೆ ಮಾಸ್ಟರ್ ಪ್ಲಾನ್ ಮಾಡಿದ್ದು ಬಿಟ್ಟರೇ ಇಂದಿಗೂ ಕೂಡ ಆಗಿಲ್ಲ. ಈ ಹಿಂದೆ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿಯವರು, ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನ ಅವಳಿ ನಗರಗಳನ್ನ ಮಾಡಿ ಅಭಿವೃದ್ಧಿ ಪಡಿಸಬೇಕೆಂಬ ಚಿಂತನೆಯಲ್ಲಿ ಇದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ರಾಜ್ಯ ಸರ್ಕಾರದ ಈ ಯೋಜನೆ ಜಾರಿಗೆ ಬಂದರೆ ಎರಡು ನಗರಗಳು ಸಾಕಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಡಾ. ಸಿಎನ್ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.

ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪಡಿಸಲು ಚಿಂತನೆ

ಅಲ್ಲದೇ ಹೊರಗಿನವರು ಕೂಡ ಬಂದು ವಾಸಮಾಡಲು ಶುರುಮಾಡುತ್ತಾರೆ. ಈ ಮೂಲಕ ಬೆಂಗಳೂರಿನ ಒತ್ತಡ ಸ್ವಲ್ಪಮಟ್ಟಿಗೆ ಕಡಿಮೆ ಆಗಲಿದೆ. ಇನ್ನು ಸರ್ಕಾರ ಈ ಪ್ಲಾನ್ ಬಗ್ಗೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎರಡು ನಗರಗಳು ಅಭಿವೃದ್ಧಿ ಹೊಂದಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ಒಟ್ಟಾರೆ ರಾಮನಗರ ಮತ್ತು ಚನ್ನಪಟ್ಟಣ ನಗರಗಳನ್ನ ಅಭಿವೃದ್ಧಿಪಡಿಸಿ ಬೆಂಗಳೂರಿನ ಒತ್ತಡವನ್ನ ಕಡಿಮೆ ಮಾಡಲು ಸರ್ಕಾರ ಯೋಜನೆ ಮಾಡಿದ್ದು, ಇದು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎನ್ನವುದನ್ನು ಮಾತ್ರ ಕಾದು ನೋಡಬೇಕಿದೆ.

ಇದನ್ನೂ ಓದಿ:

ರಾಮನಗರ ಜಿಲ್ಲೆಯ ಕೆರೆಯಲ್ಲಿ ಬೀಡುಬಿಟ್ಟಿವೆ ವಿವಿಧ ಜಾತಿಯ ಪಕ್ಷಿಗಳು; ಬೇಸಿಗೆಯಲ್ಲೂ ತುಂಬಿ ತುಳುಕುತ್ತಿದೆ ತಿಟ್ಟಮಾರನಹಳ್ಳಿ ಕೆರೆ

ಅಂಗನವಾಡಿ ಸುಧಾರಣೆಗಾಗಿ ತೆಲಂಗಾಣಕ್ಕೆ ಪ್ರವಾಸ ಕೈಗೊಂಡ ರಾಮನಗರ ಜಿಲ್ಲಾ ಪಂಚಾಯತಿ, ಪ್ರೇಮ್ ಜೀ ಫೌಂಡೇಷನ್ ನೆರವು

(DCM Ashwath Narayan says Ramanagara and channapatna will be developed as twin city)