ಏಪ್ರಿಲ್ ತಿಂಗಳಿನಲ್ಲಿ ಬೆಡ್, ಆಕ್ಸಿಜನ್ ಸಿಗದೆ 100 ಸೋಂಕಿತರು ಸಾವು; ಬಿಬಿಎಂಪಿ ನಡೆಸಿರುವ ಡೆತ್ ಆಡಿಟ್ನಲ್ಲಿ ಬಯಲು
ಸರ್ಕಾರ ಮಾತ್ರ ಈ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಕಾಣುತ್ತಿಲ್ಲ ಎಂದು ಮೃತ ಸಂಬಂಧಿಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಬಿಬಿಎಂಪಿ ನಡೆಸಿರುವ ಡೆತ್ ಆಡಿಟ್ನಲ್ಲಿ ಆಕ್ಸಿಜನ್ ಸಿಗದೆ ಸಾವನ್ನಪ್ಪಿರುವ ಅಂಶ ಬಯಲಾಗಿದೆ.
ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೊರತು ಇಳಿಮುಖವಾಗುವ ಹಾಗೆ ಕಂಡುಬರುತ್ತಿಲ್ಲ. ಕೆಲ ಸೋಂಕಿತರು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪುತಿದ್ದರೆ, ಇನ್ನು ಕೆಲವರು ಆಕ್ಸಿಜನ್ ಕೊರತೆ ಹಾಗೂ ಬೆಡ್ಗಳ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ಪ್ರತಿದಿನ ಟಿವಿ9 ನಲ್ಲಿ ವರದಿಯಾಗುತ್ತಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಕಾಣುತ್ತಿಲ್ಲ ಎಂದು ಮೃತ ಸಂಬಂಧಿಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಬಿಬಿಎಂಪಿ ನಡೆಸಿರುವ ಡೆತ್ ಆಡಿಟ್ನಲ್ಲಿ ಆಕ್ಸಿಜನ್ ಸಿಗದೆ ಸಾವನ್ನಪ್ಪಿರುವ ಅಂಶ ಬಯಲಾಗಿದೆ.
ಬೆಂಗಳೂರಿನಲ್ಲೂ ಆಕ್ಸಿಜನ್ ಸಿಗದೆ ಸೋಂಕಿತರು ಸದ್ದಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಹೋಮ್ ಐಸೋಲೇಶನ್ನಲ್ಲಿದ್ದ ಸುಮಾರು 100 ಸೋಂಕಿತರು ಮೃತಪಟ್ಟಿದ್ದಾರೆ. ಏಪ್ರಿಲ್ನಲ್ಲಿ ಒಟ್ಟು 1,907 ಜನ ಸೋಂಕಿತರು ಮೃತಪಟ್ಟಿದ್ದು, ಈ ಪೈಕಿ 100 ಜನ ಹೋಮ್ ಐಸೋಲೇಶನ್ನಲ್ಲಿ ಮತ್ತು ದಾರಿ ಮಧ್ಯೆ ಮರಣ ಹೊಂದಿರುತ್ತಾರೆ. ಸಾಕಷ್ಟು ಸೋಂಕಿತರು ಏರುಸಿರು ಎಳೆಯುತ್ತಾ ಆಕ್ಸಿಜನ್ ನೀಡುವಂತೆ ಆಸ್ಪತ್ರೆಗೆ ಅಲೆದು ಅಲೆದು ಮರಣ ಹೊದಿರುತ್ತಾರೆ. ಕೊನೆಗೆ ಮನೆಯಲ್ಲೇ ಮೃತಪಟ್ಟಿದ್ದಾರೆ, ಇನ್ನೂ ಕೆಲವರು ಆಸ್ಪತ್ರೆಯ ಎದುರು ಸಾವನ್ನಪ್ಪಿದ್ದಾರೆಂದು ಬಿಬಿಎಂಪಿ ನಡೆಸಿರುವ ಡೆತ್ ಆಡಿಟ್ನಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ
24 ಸಾವು ಪ್ರಕರಣ: ಸಾವಿನ ಸಂಖ್ಯೆ ಮುಚ್ಚಿಡುತ್ತಿದ್ದಾರೆ; ಕಾಂಗ್ರೆಸ್ ಶಾಸಕ ಆರ್.ನರೇಂದ್ರ ಗಂಭೀರ ಆರೋಪ
ಈಗಲಾದರೂ ಮೌಢ್ಯದ ಪೊರೆ ಕಳಚಿ ಚಾಮರಾಜನಗರಕ್ಕೆ ಭೇಟಿ ನೀಡ್ತಾರಾ ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
(Death audit conducted by BBMP reveals that 100 infected people died in April without bed and oxygen in Bengaluru)