ಬೆಂಗಳೂರು: ದೊಡ್ಡ ನೆಕ್ಕುಂದಿ ರಸ್ತೆಯಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ LCA ತೇಜಸ್ ಘಟಕ ಪ್ಲಾಂಟ್-2 ಪ್ರೊಡಕ್ಷನ್ ಲೈನ್ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಉದ್ಘಾಟಿಸಿದರು. ಈ ಬಳಿಕ ಮಾತನಾಡಿದ ಅವರು, ತೇಜಸ್ ಘಟಕ ಉದ್ಘಾಟಿಸಿರುವುದರಿಂದ ಖುಷಿಯಾಗಿದೆ. ಕೊರೊನಾ ಸಂಕಷ್ಟದ ನಡುವೆ ಘಟಕ ನಿರ್ಮಾಣವಾಗಿದೆ. ನಮಗೆ ಇದು ಸ್ವಾಭಿಮಾನದ ಸಂಕೇತವಾಗಿದೆ. ಇದು ಆತ್ಮನಿರ್ಭರದ ಸಂದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಕುರಿತಂತೆ ಮಾತನಾಡುತ್ತಿದ್ದ ರಾಜನಾಥ್ ಸಿಂಗ್, ಇದು ಕೇವಲ ಭಾರತಕ್ಕಲ್ಲ, ವಿಶ್ವಕ್ಕೆ ನೀಡುವ ಸಂದೇಶ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತವೆ. ದೇಶದ ವಿವಿಧ ಪ್ರೊಡಕ್ಷನ್ ಏಜೆನ್ಸಿಗಳು ಒಂದುಗೂಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕೊವಿಡ್ ನಂತರ ಆರ್ಥಿಕತೆಯಲ್ಲಿ ಏಳಿಗೆ ಕಾಣಲಿದೆ. ನಮ್ಮ ದೇಶದ ಸುರಕ್ಷತೆ ವಿಚಾರದಲ್ಲಿ ನಮ್ಮನ್ನೇ ನಾವು ಅವಲಂಬಿಸಬೇಕಾಗಿದೆ. ತೇಜಸ್‌ನಲ್ಲಿ ಗುಣಮಟ್ಟದ ಪರಿಕರವನ್ನು ಅತೀ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲಾಗುತ್ತದೆ. ಇದು ದೇಶಕ್ಕೆ HAL (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ಕೊಡುತ್ತಿರುವ ಕೊಡುಗೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.
HAL ನಲ್ಲಿ LCA ತೇಜಸ್ ಡಿವಿಷನ್ ಪ್ಲಾಂಟ್- 2 ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್