Stop Online Liquor Sale ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡಬೇಡಿ.. ಮಾರಾಟಗಾರರಿಂದ ಪ್ರತಿಭಟನೆ
Stop Online Liquor Sale ಮೈಸೂರಿನಲ್ಲೂ ಚಾಮರಾಜನಗರ ಮದ್ಯ ವರ್ತಕರ ಸಂಘದಿಂದ ಪ್ರತಿಭಟನೆ ನಡೆಯುತ್ತಿದೆ. ಮದ್ಯ ಮಾರಾಟಗಾರರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಆನ್‌ಲೈನ್ ಮದ್ಯ ಮಾರಾಟ ಬಂದ್ ಮಾಡಿಸಬೇಕು...
ಬೆಂಗಳೂರು: ಆನ್‌ಲೈನ್ ಮೂಲಕ ಮದ್ಯ ಮಾರಾಟ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಉದ್ಯಮ ಉಳಿಸಿ ಎಂದು ಮದ್ಯ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ನೂರಾರು ಮದ್ಯ ಮಾರಾಟ ಮಾಲೀಕರು ‘ಉಳಿಸಿ ಉಳಿಸಿ ಉದ್ಯಮ ಉಳಿಸಿ’ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ.
ಭ್ರಷ್ಟ ಅಬಕಾರಿ ಅಧಿಕಾರಿಗಳಿಗೆ ಧಿಕ್ಕಾರ ಅಂತಾ ಘೋಷಣೆ ಕೂಗುತ್ತಿದ್ದಾರೆ. ಮದ್ಯ ಮಾರಾಟವನ್ನ ಯಾವುದೇ ಕಾರಣಕ್ಕೂ ಆನ್ ಲೈನ್ ಮಾಡಬಾರದು. ಇದನ್ನ ಕೈ ಬಿಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಆನ್‌ಲೈನ್ ಸಪ್ಲೆ ಮಾಡಿದರೆ ನಕಲಿ ಮದ್ಯ ಮಾರಾಟ ಹೆಚ್ಚಾಗುತ್ತೆ.
ಕಾಲೇಜು ಮಕ್ಕಳಿಗೆ ವಿದ್ಯಾರ್ಥಿಗಳಿಗೆ ತಲುಪುತ್ತೆ. ಮಕ್ಕಳು ಕೂಡ ಆನ್ಲೈನ್ನಲ್ಲಿ ಮದ್ಯವನ್ನು ತರಿಸಿಕೊಳ್ಳಬಹುದು. ಇದರಿಂದ ಕ್ರೈಂ ರೇಟ್ ಮತ್ತಷ್ಟು ಹೆಚ್ಚಾಗುತ್ತದೆ. ನಕಲಿ ಮದ್ಯಕ್ಕೆ ಕಡಿವಾಣ ಹಾಕಬೇಕು. ಮಕ್ಕಳಿಗೆ ಇದನ್ನ ಸಿಗದಂತೆ ನೋಡಿಕೊಳ್ಳಬೇಕು. ಹೀಗಾಗಿ ಆನ್‌ಲೈನ್ ವ್ಯಾಪಾರ ಮಾಡಬಾರದು ಅಂತಾ ಮದ್ಯ ಮಾರಾಟ ಸಂಘದವರು ಒತ್ತಾಯಿಸಿದ್ದಾರೆ.
ಮೈಸೂರಿನಲ್ಲಿ ಮದ್ಯ ಮಾರಾಟಗಾರರ ಪ್ರತಿಭಟನೆ ಇನ್ನು ಮೈಸೂರಿನಲ್ಲೂ ಚಾಮರಾಜನಗರ ಮದ್ಯ ವರ್ತಕರ ಸಂಘದಿಂದ ಪ್ರತಿಭಟನೆ ನಡೆಯುತ್ತಿದೆ. ಮದ್ಯ ಮಾರಾಟಗಾರರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಆನ್‌ಲೈನ್ ಮದ್ಯ ಮಾರಾಟ ಬಂದ್ ಮಾಡಿಸಬೇಕು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಕು.
ಅನುಮತಿ ನೀಡಿರುವ ಮದ್ಯ ಮಾರಾಟ ಮಳಿಗೆ ತೆರೆಯಲು ಅವಕಾಶ ನೀಡಿ. ಕೊರೊನಾ ಸಂದರ್ಭದಲ್ಲಿ ಆಗಿರುವ ನಷ್ಟಕ್ಕೆ ಪರಿಹಾರ ನೀಡಿ. ಮಿಲಿಟರಿ ಕ್ಯಾಂಟಿನ್‌ಗೆ ಹೊರ ರಾಜ್ಯದಿಂದ ಬರುವ ಮದ್ಯಕ್ಕೆ ಬ್ರೇಕ್ ಹಾಕಿ ಎಂದು ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮದ್ಯಪ್ರಿಯರೇ ಎಚ್ರಾ.. ಕಲಬೆರಕೆ ಮದ್ಯ ಮಾರಾಟ, ಬಾಟಲಿಗಳು ಸೀಜ್! ಎಲ್ಲಿ?
Published On - 4:00 pm, Tue, 2 February 21