ನಿಜಾಮುದ್ದಿನ್ ನಂಜು: ಕುಂದಾನಗರಿಯಲ್ಲಿ ಇಂದು ಮತ್ತೊಂದು ಪಾಸಿಟಿವ್ ಕೇಸ್

ಬೆಳಗಾವಿ: ಕುಂದಾನಗರಿಯಲ್ಲಿ ಕೊರೊನಾ ನಂಟು ದಿನೇದಿನೆ ಹೆಚ್ಚಾಗುತ್ತಿದ್ದು, ಇಂದು ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹಿರೇಬಾಗೇವಾಡಿ ತಾಲೂಕಿನ 13 ವರ್ಷದ ಬಾಲಕಿಗೆ ಸೋಂಕು ತಗುಲಿದೆ. 47 ವರ್ಷದ P 364 ವ್ಯಕ್ತಿಯಿಂದ ಈ ಸೋಂಕು ಹಬ್ಬಿದೆ. ಪಿ.364 ವ್ಯಕ್ತಿಯ ದೂರದ ಸಂಬಂಧಿ ಈ ಬಾಲಕಿ. P 364 ವ್ಯಕ್ತಿಯ ಮನೆಗೆ ಬಾಲಕಿ ರಜೆಗೆ ಬಂದಿದ್ದಾಗ ಸೋಂಕು ಅಂಟಿದೆ. ನಿಜಾಮುದ್ದಿನ್ ನಂಜು: P 128 ದೆಹಲಿಯ ನಿಜಾಮುದ್ದಿನ್ ಮರ್ಕಜ್ ಗೆ ಹೋಗಿ ಮರಳಿದ್ದ ಯುವಕನ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ […]

ನಿಜಾಮುದ್ದಿನ್ ನಂಜು: ಕುಂದಾನಗರಿಯಲ್ಲಿ ಇಂದು ಮತ್ತೊಂದು ಪಾಸಿಟಿವ್ ಕೇಸ್
ಸಾಧು ಶ್ರೀನಾಥ್​

Updated on: May 07, 2020 | 3:53 PM

ಬೆಳಗಾವಿ: ಕುಂದಾನಗರಿಯಲ್ಲಿ ಕೊರೊನಾ ನಂಟು ದಿನೇದಿನೆ ಹೆಚ್ಚಾಗುತ್ತಿದ್ದು, ಇಂದು ಮತ್ತೊಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹಿರೇಬಾಗೇವಾಡಿ ತಾಲೂಕಿನ 13 ವರ್ಷದ ಬಾಲಕಿಗೆ ಸೋಂಕು ತಗುಲಿದೆ.

47 ವರ್ಷದ P 364 ವ್ಯಕ್ತಿಯಿಂದ ಈ ಸೋಂಕು ಹಬ್ಬಿದೆ. ಪಿ.364 ವ್ಯಕ್ತಿಯ ದೂರದ ಸಂಬಂಧಿ ಈ ಬಾಲಕಿ. P 364 ವ್ಯಕ್ತಿಯ ಮನೆಗೆ ಬಾಲಕಿ ರಜೆಗೆ ಬಂದಿದ್ದಾಗ ಸೋಂಕು ಅಂಟಿದೆ.

ನಿಜಾಮುದ್ದಿನ್ ನಂಜು:
P 128 ದೆಹಲಿಯ ನಿಜಾಮುದ್ದಿನ್ ಮರ್ಕಜ್ ಗೆ ಹೋಗಿ ಮರಳಿದ್ದ ಯುವಕನ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ P 364. ಇದೀಗ, P 364ರ ಇಡೀ ಕುಟುಂಬಕ್ಕೆ ಸೋಂಕು ವ್ಯಾಪಿಸಿದಂತಾಗಿದೆ. ಇದರೊಂದಿಗೆ ಇಡೀ ಹಿರೇಬಾಗೇವಾಡಿ ತಾಲೂಕು ಈಗ ಕೊರೊನಾ ಸೋಂಕಿನಿಂದ ಥಕಥಕ ಕುಣಿಯುವಂತಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 4 ದಿನಗಳ ಬಳಿಕ ಮತ್ತೊಂದು ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 74ಕ್ಕೇರಿಕೆಯಾಗಿದೆ. ಹಿರೇಬಾಗೇವಾಡಿ ಗ್ರಾಮವೊಂದರಲ್ಲೇ ಕೊರೊನಾ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 74 ಸೋಂಕಿತರ ಪೈಕಿ ಓರ್ವ ವೃದ್ಧೆ ಸಾವಿಗೀಡಾಗಿದ್ದು, 34 ಸೋಂಕಿತರು ಗುಣಮುಖರಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 39 ಕೊರೊನಾ ಆ್ಯಕ್ಟೀವ್ ಪ್ರಕರಣಗಳು ಇವೆ.

Published On - 3:14 pm, Thu, 7 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us